Make A Snug Shrug
ಈಗ ವಾತಾವರಣ ತುಂಬಾ ಬಿಸಿಯಿದೆ, ಆದರೆ ಶೀಘ್ರದಲ್ಲೇ ಮಳೆಗಾಲ ಆರಂಭವಾಗುತ್ತದೆ, ಆಗ ತೇವದಿಂದಾಗಿ ವಾತಾವರಣವು ತಂಪಾಗುತ್ತದೆ. ಮೂವಿ ಹಾಲ್, ರೆಸ್ಟಾರೆಂಟ್ ಅಥವಾ ನಿಮ್ಮ ಆಫೀಸ್ ಮೊದಲಾದ ಏರ್ ಕಂಡೀಷನ್ಡ್ ಸ್ಥಳಕ್ಕೆ ಹೋಗುವಾಗ ಪ್ರತಿ ಬಾರಿಯೂ ನೀವು ನಿಮ್ಮ ಭುಜಗಳಿಗೆ ಏನಾದರೂ ಸುತ್ತಿಕೊಂಡು, ನಿಮ್ಮನ್ನು ಬೆಚ್ಚಗೆ ಇರಿಸುತ್ತೀರಿ ಮತ್ತು ನೀವು ಚೆನ್ನಾಗಿ ಕಾಣುವಂತೆ ನೋಡಿಕೊಳ್ಳುತ್ತೀರಿ.
ಇದನ್ನು ಯಾಕೆ ಒಂದು ಪ್ರಾಜೆಕ್ಟ್ ಆಗಿ ಮಾಡಿಕೊಂಡು, ಒಂದು ಶ್ರಗ್ಅನ್ನು ಹೊಲಿಯಬಾರದು.
ಇದು ಮೂಲಭೂತ ಹೊಲಿಗೆಯ ಕೌಶಲ್ಯಗಳನ್ನು ಬಳಸಿಕೊಳ್ಳುವ ಒಂದು ಸುಲಭ ಮತ್ತು ವೇಗವಾದ ಪ್ರಾಜೆಕ್ಟ್ ಆಗಿದೆ. ಇದಕ್ಕೆ ನಿಮ್ಮ ಆಯ್ಕೆಯ ಬಹಳ ಕಡಿಮೆ ಫ್ಯಾಬ್ರಿಕ್ ಸಾಕಾಗುತ್ತದೆ ಮತ್ತು ಸಮಯದ ಬಗ್ಗೆ ಹೇಳುವುದಾದರೆ ನೀವು ಹೊಲಿಗೆಯನ್ನು ಇತ್ತೀಚೆಗಷ್ಟೇ ಆರಂಭಿಸಿದ್ದರೂ ಸಹ ಇದು ಸ್ವಲ್ಪ ಸಮಯವನ್ನು ಮಾತ್ರ ತೆಗೆದುಕೊಳ್ಳುತ್ತದೆ.
ನೀವು ಆರಂಭಿಸುವ ಮೊದಲು ನಿಮಗೆ ಈ ಕೆಳಗಿನವುಗಳು ಬೇಕಾಗುತ್ತವೆ.
- ಅಲಂಕಾರಿಕ ಫ್ಯಾಬ್ರಿಕ್ (67 ಸೆಂಮೀ x 87 ಸೆಂಮೀ)
- ಬಹಳಷ್ಟು ಬೀಡೆಡ್ ಪಿನ್‌ಗಳಿರುವ ಒಂದು ಪಿನ್ ಕುಶನ್
- ಒಂದು ಅಲಂಕಾರಿಕ ಬ್ರೂಚ್
ನಿಮ್ಮ ಶ್ರಗ್ ಮಾಡಲು ಆರಂಭಿಸಿ. www.ushasew.com ಗೆ ಭೇಟಿ ನೀಡಿ ಮತ್ತು ಹೊಲಿಗೆ ಪಾಠಗಳಿಗೆ ಸಿದ್ಧರಾಗಿ. ಶ್ರಗ್, ಪ್ರಾಜೆಕ್ಟ್ ನಂ. 4 ಆಗಿದೆ. ಈ ವೀಡಿಯೊವನ್ನು ಕ್ಲಿಕ್ ಮಾಡಿ ವೀಕ್ಷಿಸಲು ಆರಂಭಿಸುವ ಮೊದಲು ನೀವು ಇತರೆ ಎಲ್ಲಾ ಹೊಲಿಗೆ ಪಾಠಗಳನ್ನು ವೀಕ್ಷಿಸುವ ಮೂಲಕ ನಿಮ್ಮ ಹೊಲಿಗೆ ಕೌಶಲ್ಯಗಳನ್ನು ನೆನಪುಮಾಡಿಕೊಳ್ಳಬೇಕು. ಆತ್ಮವಿಶ್ವಾಸವನ್ನು ಪಡೆದುಕೊಂಡ ನಂತರ ನೀವು ಮುಂದುವರಿಯಬಹುದು.
ನಿಮಗೆ ಬೇಕಾದ ಫ್ಯಾಬ್ರಿಕ್‌ಗಳು ಮತ್ತು ಇತರೆ ಮೆಟೀರಿಯಲ್‌ಗಳೆಲ್ಲವನ್ನೂ ನಾವು ನಿಮಗೆ ಪ್ರಾಜೆಕ್ಟ್ ವೀಡಿಯೊದ ಆರಂಭದಲ್ಲಿ ತೋರಿಸುತ್ತೇವೆ. ದಯವಿಟ್ಟು ನೀವು ಮುಕ್ತವಾಗಿ ಇತರೆ ಬಣ್ಣಗಳು ಮತ್ತು ಅಲಂಕಾರಗಳನ್ನು ಬಳಸಿ. ತೋರಿಸಿರುವುದನ್ನು ನೀವು ನಕಲು ಮಾಡಬೇಕಾದ ಅಗತ್ಯವಿಲ್ಲ, ರಚನಾತ್ಮಕವಾಗಿರಿ ಮತ್ತು ನಿಮ್ಮದೇ ಆದುದನ್ನು ಮಾಡಿ. ಅದಕ್ಕಾಗಿ ನೀವು ಮಾಡಬೇಕಿರುವುದೇನೆಂದರೆ ಸೂಚನೆಗಳನ್ನು ಅರ್ಥಮಾಡಿಕೊಂಡು ಅನುಸರಿಸಿ. ಇದನ್ನು ಮಾಡಲು ವೀಡಿಯೊವನ್ನು ಕೆಲವು ಬಾರಿ ನೋಡಿ, ನಂತರ ಆರಂಭಿಸಿ.
ಇದು ನಿಮ್ಮ ಶ್ರಗ್, ಹಾಗಾಗಿ ನಿಮ್ಮ ಕಲ್ಪನಾಶಕ್ತಿಯನ್ನು ಬಳಸಿ.
ರಚನಾತ್ಮಕವಾಗಿರಿ, ಆತ್ಮವಿಶ್ವಾಸದಿಂದಿರಿ!ಫ್ಯಾಷನ್ ವಿಷಯಕ್ಕೆ ಬಂದಾಗ ಅದುವೇ ಮಂತ್ರವಾಗಿರುತ್ತದೆ ಮತ್ತು ನೀವು ಹೀಗಾಗಬೇಕೆಂದು ನಾವು ಬಯಸುತ್ತೇವೆ. ನೀವು ಶ್ರಗ್ಅನ್ನು ತಯಾರಿಸುವಾಗ, ನಿಮ್ಮನ್ನು ಬೆಚ್ಚಗೆ ಇಡುವುದರ ಜೊತೆಗೆ ಒಂದು ಉತ್ತಮ ಛಾಪು ಮೂಡಿಸುವಂತಹ ಫ್ಯಾಬ್ರಿಕ್ಅನ್ನು ಆರಿಸಿ.
ಎದ್ದುಕಾಣುವ ಪರಿಕರಗಳು ಮತ್ತು ಅಲಂಕಾರಗಳನ್ನು ಆರಿಸಿ. ನಾವು ಮಾಡಿದ ಶ್ರಗ್‌ನ ಸೌಂದರ್ಯವನ್ನು ಹೆಚ್ಚಿಸಲು ನಾವು ಒಂದು ಚಂದದ ಫ್ಯಾಬ್ರಿಕ್ ಹೂವನ್ನು ಸೇರಿಸಿದ್ದೇವೆ. ನೀವು ಬಯಸಿದ್ದನ್ನು ಮಾಡಲು ನೀವು ಮುಕ್ತರಾಗಿದ್ದೀರಿ. ದೊಡ್ಡ ಬಟನ್‌ಗಳನ್ನು ಬಳಸಿ, ನಿಮ್ಮ ಮೆಚ್ಚಿನ ಕ್ರೀಡಾ ತಂಡಗಳ ಪ್ಯಾಚ್‌ಗಳನ್ನು ಸೇರಿಸಿ, ಕನ್ನಡಿಗಳು ಮತ್ತು ಟಿನ್ಸೆಲ್ಅನ್ನು ಹಾಕಿ, ನೀವು ಏನು ಬೇಕಾದರೂ ಮಾಡಬಹುದು ಅದಕ್ಕೆ ಯಾವುದೇ ಮಿತಿಯಿಲ್ಲ. ನೆನಪಿಡಿ ಇದು ನಿಮ್ಮ ಶ್ರಗ್, ಹಾಗಾಗಿ ಅದನ್ನು ನೀವು ನಿಮ್ಮಷ್ಟೇ ವಿಭಿನ್ನವಾಗಿ ಮಾಡಬೇಕು.
ನೀವು ಏನೇ ಮಾಡಿ, ಆದರೆ ಫಿನಿಶ್ ಬಗ್ಗೆ ಕಾಳಜಿವಹಿಸಬೇಕು. ಇಲ್ಲೇ ನಿಮ್ಮ ಹೊಲಿಗೆ ಕೌಶಲ್ಯಗಳು ಮುಖ್ಯವಾಗಿರುತ್ತವೆ. ನಿಮಗೆ ಅನುಕೂಲಕರವಾದಷ್ಟು ವೇಗವಾಗಿ ಅಥವಾ ನಿಧಾನವಾಗಿ ಹೊಲಿಯಿರಿ. ಮಳೆಗಾಲಕ್ಕೆ ಇನ್ನೂ ಸ್ವಲ್ಪ ಸಮಯವಿದೆ, ಆದ್ದರಿಂದ ಅವಸರವೇನಿಲ್ಲ.
ಈ ಪ್ರಾಜೆಕ್ಟ್ ಮಾಡುವ ನಿಮಗೆ ಶುಭವಾಗಲಿ. ಇದು ನಿಮಗೆ ಇಷ್ಟವಾದರೆ, ನಮ್ಮ ಸೈಟ್‌ನಲ್ಲಿರುವ ಇತರೆ ಪ್ರಾಜೆಕ್ಟ್‌ಗಳನ್ನು ಪ್ರಯತ್ನಿಸಿ. ನೀವು ನಿಮ್ಮ ಕೌಶಲ್ಯವನ್ನು ಚುರುಕುಗೊಳಿಸಲು ಬಯಸಿದಲ್ಲಿ ಅಥವಾ ನಿಮ್ಮ ಕುಟುಂಬದ ಇತರೆ ಸದಸ್ಯರಿಗೆ ಅಥವಾ ನಿಮ್ಮ ಸ್ನೇಹಿತರಿಗೆ ಹೊಲಿಗೆಯನ್ನು ಕಲಿಯಲು ಬಯಸಿದಲ್ಲಿ, ದಯವಿಟ್ಟು www.ushasew.com ಗೆ ಭೇಟಿ ನೀಡಿ.
ನಿಮಗೆ ಕಲಿಕಾ ಪ್ರಕ್ರಿಯೆಯ ಕಲ್ಪನೆಯನ್ನು ಒದಗಿಸಲು, ನೀವು ಹೇಗೆ ಆರಂಭಿಸಬೇಕೆಂಬುದು ಇಲ್ಲಿದೆ:
- ಆರಂಭದಲ್ಲಿ, ನೀವು ನಿಮ್ಮ ಹೊಲಿಗೆ ಮೆಷಿನ್ಅನ್ನು ಹೇಗೆ ಸೆಟಪ್ ಮಾಡುತ್ತೀರಿ ಎಂಬುದನ್ನು ಕಲಿಯುತ್ತೀರಿ.
- ನಂತರ ಪೇಪರ್ ಮೇಲೆ ಹೊಲಿಯುವ ಮೂಲಕ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವತ್ತ ಮುಂದುವರಿಯುತ್ತೀರಿ. ಹೌದು ಪೇಪರ್!ಇದು ನಿಯಂತ್ರಣ ಮತ್ತು ನಿಖರತೆಯನ್ನು ಹೆಚ್ಚಿಸಲು ಅತ್ಯುತ್ತಮ ಮಾರ್ಗ.
- ಇದನ್ನು ಅಭ್ಯಾಸ ಮಾಡಿದ ನಂತರ ನೀವು ಫ್ಯಾಬ್ರಿಕ್ಅನ್ನು ಹೇಗೆ ಹೊಲಿಯುವುದು ಎಂಬುದನ್ನು ಕಲಿಯುತ್ತೀರಿ.
- ನೀವು ಈ ಮೂಲಭೂತ ಹಂತಗಳನ್ನು ತಿಳಿದುಕೊಂಡ ನಂತರ ಮಾತ್ರವೇ ಪ್ರಾಜೆಕ್ಟ್ ಮಾಡಬೇಕು. ಹಾಗೂ ಮೊದಲನೆಯದು ತುಂಬಾ ಆಸಕ್ತಿಕರವಾಗಿದೆ.
- ಬುಕ್ಮಾರ್ಕ್ ನೀವು ಮಾಡುವ ಮೊದಲ ಪ್ರಾಜೆಕ್ಟ್ ಆಗಿದೆ. ಇದು ಸರಳ, ಮಾಡಲು ಸುಲಭ ಮತ್ತು ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನಿಮಗೆ ಈ ಪ್ರಾಜೆಕ್ಟ್ ನಿಜವಾಗಿಯೂ ಪ್ರಯೋಜನಕಾರಿಯಾಗಿರುತ್ತದೆ. ಇದು ನಿಮ್ಮನ್ನು ಮುಂದಿನ ಪಾಠಕ್ಕೆ ಉತ್ತೇಜಿಸುತ್ತದೆ.
ಈ ಎಲ್ಲಾ ಪಾಠ ಮತ್ತು ವೀಡಿಯೊಗಳು 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಹಾಗಾಗಿ ನೀವು ಆರಂಭಿಸುವ ಮೊದಲು ನಿಮಗೆ ಹೆಚ್ಚು ಅನುಕೂಲಕರವಾದ ಭಾಷೆಯನ್ನು ಆರಿಸಿ.
ಉಷಾ ನಿಮಗಾಗಿ ವಿನ್ಯಾಸಗೊಳಿಸಲಾದ ಮೆಷಿನ್ಅನ್ನು ಹೊಂದಿದೆ.
ಉಷಾದಲ್ಲಿ ನಾವು ಪ್ರತಿಯೊಂದು ವಿಧದ ಬಳಕೆದಾರರಿಗೂ ಉಪಯುಕ್ತವಾದ ಹೊಲಿಗೆ ಮೆಷಿನ್‌ಗಳ ಶ್ರೇಣಿಯನ್ನು ತಯಾರಿಸಿದ್ದೇವೆ. ಆರಂಭಿಗರಿಂದ ಪರಿಣಿತ ವೃತ್ತಿಪರರವರೆಗೂ ಸರಿಹೊಂದುವ ಮೆಷಿನ್ಅನ್ನು ನಾವು ಹೊಂದಿದ್ದೇವೆ. ನಮ್ಮ ಮೆಷಿನ್‌ಗಳ ಶ್ರೇಣಿಯನ್ನು ಅವಲೋಕಿಸಿ ಮತ್ತು ನಿಮ್ಮ ಅವಶ್ಯಕತೆಗಳಿಗೆ ಒಪ್ಪುವ ಮೆಷಿನ್ಅನ್ನು ಆರಿಸಿ. ನೀವು ನಮ್ಮ ಗ್ರಾಹಕ ಸೇವಾ ಕಾರ್ಯಕರ್ತರೊಂದಿಗೆ ಮಾತನಾಡಲು ಬಯಸಿದಲ್ಲಿ, ಅವರು ನಿಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. www.ushasew.com ರಲ್ಲಿ ನಮ್ಮ ಉತ್ಪನ್ನಗಳ ಶ್ರೇಣಿಯನ್ನು ಅವಲೋಕಿಸಿ, ನಿಮಗೆ ಯಾವುದು ಇಷ್ಟವಾಗುತ್ತದೆಂದು ನೋಡಿ, ನಂತರ ನಮ್ಮ ವೆಬ್‌ಸೈ ಟ್‌ನಲ್ಲಿರುವ ಸ್ಟೋರ್ ಲೊಕೇಟರ್‌ಅನ್ನು ಬಳಸಿ ನಿಮ್ಮ ಹತ್ತಿರದ ಉಷಾ ಸ್ಟೋರ್‌ಅನ್ನು ಹುಡುಕಿ.
ನೀವು ಹೊಲಿಗೆಯನ್ನು ಆರಂಭಿಸಿದ ನಂತರ ಏನೆಲ್ಲಾ ರಚಿಸುತ್ತೀರೆಂದು ನೋಡಲು ನಾವು ಇಷ್ಟಪಡುತ್ತೇವೆ.
ಒಮ್ಮೆ ನೀವು ಹೊಲಿಗೆಯನ್ನು ಆರಂಭಿಸಿದ ನಂತರ, ನಾವು ನಿಮ್ಮ ರಚನೆಗಳನ್ನು ನೋಡಲು ಇಚ್ಛಿಸುತ್ತೇವೆ. ದಯವಿಟ್ಟು ಅವುಗಳನ್ನು ನಮ್ಮ ಯಾವುದೇ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. – (ಫೇಸ್ಬುಕ್), (ಇನ್ಸ್ಟಾಗ್ರಾಮ್), (ಟ್ವಿಟರ್), (ಯುಟ್ಯೂಬ್). ನೀವು ಅದನ್ನು ಏಕೆ ಮಾಡಿದಿರಿ, ಅದು ಯಾರಿಗಾಗಿ ಮತ್ತು ಅದನ್ನು ಹೇಗೆ ವಿಶೇಷವಾಗಿ ಮಾಡಿದಿರಿ ಎಂಬುದನ್ನು ನಮಗೆ ಹೇಳಿ.
ಮುಂದೆ ದೀರ್ಘ ಬೇಸಿಗೆಕಾಲ ಬರುತ್ತದೆ, ಆದ್ದರಿಂದ ನೀವು ತಂಪಗೆ ಮನೆಯಲ್ಲೇ ಇರಿ ಮತ್ತು ನಿಮ್ಮ ಪಾಠಗಳನ್ನು ಆರಂಭಿಸಿ.