ಹೊಲಿಗೆ ಮಷಿನ್‌ಗಳು
ಮೆಮೊರಿ ಕ್ರಾಫ್ಟ್
ಹೆಚ್ಚಾಗಿ ಕಂಪ್ಯೂಟರೀಕೃತ ಕನಸಿನ ಮೆಷಿನ್‌ಗಳೆಂದು ಕರೆಯಲ್ಪಡುವ ಮೆಮೊರಿ ಕ್ರಾಫ್ಟ್ ಸರಣಿಯ ವಿಶೇಷ ಮತ್ತು ವೃತ್ತಿಪರ ಕಂಪ್ಯೂಟರೀಕೃತ ಹೊಲಿಗೆ ಮತ್ತು ಎಂಬ್ರಾಯ್ಡರಿ ಮೆಷಿನ್ ಗಾರ್ಮೆಂಟ್‌ಗಳು, ಕ್ವಿಲ್ಟಿಂಗ್ ಮತ್ತು ಹೋಮ್ ಡೆಕರ್ ಇತ್ಯಾದಿಗಳಲ್ಲಿ ಕೆಲಸ ಮಾಡುವವರಿಗಾಗಿ ನಿರ್ಮಿತವಾಗಿದೆ. ಅದರ ವೈ-ಫೈ ಮತ್ತು ಐಪ್ಯಾಡ್ ಹೊಂದಾಣಿಕೆಯು ನಿಮಗೆ ನಿಮ್ಮ ರಚನಾತ್ಮಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ, ಅದರ ವೇಗ ಮತ್ತು ನಿಖರತೆಯು ಸುಧಾರಿತ ಹೊಲಿಗೆಗೆ ಅಗತ್ಯವಾದ ನಿರ್ಣಾಯಕ ಅಂಚನ್ನು ಸೇರಿಸುತ್ತದೆ. ಪ್ರತಿ ನಿಮಿಷಕ್ಕೆ 1,000 ಹೊಲಿಗೆಗಳ ಹೊಲಿಗೆ ವೇಗ, ಕ್ವಿಲ್ಟರ್‌ಗಾಗಿ ವಿನ್ಯಾಸಗೊಳಿಸಲಾದ ಅನನ್ಯವಾದ ವೈಶಿಷ್ಟ್ಯತೆಗಳು, ವಿಶೇಷ ಹೊಲಿಗೆಗಳು ಮತ್ತು ಸುಧಾರಿತ ಫೀಡ್ ಯಾಂತ್ರಿಕ ವ್ಯವಸ್ಥೆಯು ಹೆಚ್ಚಿನದನ್ನು ಮಾಡಲು ಮತ್ತು ಉತ್ತಮವಾಗಿ ಮಾಡಲು ಬಯಸುವವರಿಗೆ ಅನುವು ಮಾಡಿಕೊಡುತ್ತದೆ.
ಜಿಗ್ ಜ್ಯಾಗ್ ಉಷಾ ಜಾನೊಮ್
ತಮ್ಮ ರಚನಾತ್ಮಕ ಪ್ರಯಾಣದಲ್ಲಿ ಮೊದಲ ಹೆಜ್ಜೆ ಇಡುತ್ತಿರುವವರಿಗೆ, ಜಾಪನೀಸ್ ತಂತ್ರಜ್ಞಾನದಿಂದ ಚಾಲಿತ ಉಷಾ ಜಾನೊಮ್ ಸಂಪೂರ್ಣ ಸ್ವಯಂಚಾಲಿತ ಹೊಲಿಗೆ ಮಷಿನ್‌ಗಳು ಸೂಕ್ತ ಆಯ್ಕೆಯಾಗಿದೆ. ನಿಮಗೆ ನೆರವಾಗಲು ಸ್ಟ್ರೆಚ್ ಸ್ಟಿಚಿಂಗ್, ಬಟನ್ ಫಿಕ್ಸಿಂಗ್, ರೋಲ್ಡ್ ಹೆಮಿಂಗ್, ಸ್ಯಾಟಿನ್ ಸ್ಟಿಚ್, ಜಿಪ್ ಫಿಕ್ಸಿಂಗ್ ಮತ್ತು ಸ್ಮೋಕಿಂಗ್ ಮೊದಲಾದ ಅಪ್ಲಿಕೇಶನ್‌ಗಳು, ಹಲವಾರು ಬಿಲ್ಟ್-ಇನ್ ಹೊಲಿಗೆಗಳಂತಹ ವೈಶಿಷ್ಟ್ಯತೆಗಳನ್ನು ಇದು ಒದಗಿಸುತ್ತದೆ. ಇವುಗಳೆಲ್ಲವೂ ನಿಮಗೆ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಹಾಗೂ ನಿಮ್ಮ ವಿಭಿನ್ನ ಶೈಲಿಯನ್ನು ಅಭಿವೃದ್ಧಿಪಡಿಸಲು ಮತ್ತು ವ್ಯಕ್ತಪಡಿಸಲು ಗಮನಾರ್ಹವಾಗಿ ಸುಲಭ ಮಾಡುತ್ತವೆ.
ಇಂಡಸ್ಟ್ರಿಯಲ್ ಹೈ-ಸ್ಪೀಡ್ & ಡೊಮೆಸ್ಟಿಕ್
ಉಷಾ ಇಂಡಸ್ಟ್ರಿಯಲ್ ಮೆಷಿನ್‌ಗಳು ನಿಖರತೆ ಮತ್ತು ವೇಗದೊಂದಿಗೆ ತಮ್ಮ ರಚನಾತ್ಮಕತೆಯು ಅನೇಕ ಸಂಖ್ಯೆಗಳಲ್ಲಿ ಪುನರಾವರ್ತಿಸುವುದನ್ನು ನೋಡಲು ಬಯಸುವವರಿಗಾಗಿ ತಾಂತ್ರಿಕವಾಗಿ ಸುಧಾರಿತ ಪರಿಹಾರವಾಗಿದೆ. ಹಗುರದಿಂದ ಭಾರದವರೆಗೆ ವಿವಿಧ ಫ್ಯಾಬ್ರಿಕ್ ಮೇಲೆ ಹಾಗೂ 1000 ಎಸ್‌ಪಿಎಂ ನಿಂದ 3000 ಎಸ್‌ಪಿಎಂ ವರೆಗಿನ ವೇಗಗಳಲ್ಲಿ ಕೆಲಸ ಮಾಡಲು ಸಮರ್ಥವಾಗಿರುವವರಿಗೆ ಉಷಾ, ವಿವಿಧ ಬೇಡಿಕೆಗಳಿಗೆ ಸರಿಹೊಂದುವ ವಿವಿಧ ಮಾಡೆಲ್‌ಗಳನ್ನು ಒದಗಿಸುತ್ತದೆ. ಕಂಪ್ಯೂಟರೀಕೃತ ಪ್ಯಾಟರ್ನ್‌ಗಳು ಮತ್ತು ಪುಶ್ ಬಟನ್‌ನ ಅನುಕೂಲತೆಯನ್ನು ಒಳಗೊಂಡಂತೆ ಅನೇಕ ವೈಶಿಷ್ಟ್ಯತೆಗಳು ಮಾತ್ರವಲ್ಲದೆ ಹ್ಯಾಂಡ್ಸ್-ಫ್ರೀ ಕಾರ್ಯಾಚರಣೆ, ಸ್ವಯಂಚಾಲಿತ ಥ್ರೆಡ್ ಕಟ್ಟರ್, ಕಾಂಬಿನೇಶನ್ ಪ್ಯಾಟರ್ನ್‌ಗಳು ಮತ್ತು ಮಿರರ್ಡ್ ಎಡಿಟಿಂಗ್ ಮೊದಲಾದವುಗಳನ್ನು ಹೊಂದಿರುವ ಈ ಹೊಲಿಗೆ ಮೆಷಿನ್‌ಗಳು ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಮಾಡಲು ಬಯಸುವವರಿಗೆ ಒಂದು ದೈವದತ್ತ ವರವಾಗಿದೆ.
ನೇರ ಹೊಲಿಗೆ
ಇವು ನಾವೆಲ್ಲರೂ ನೋಡುತ್ತಾ ಬೆಳೆದ ಮತ್ತು ಅದೃಷ್ಟವಂತರಾಗಿದ್ದರೆ ಬಳಸಿದ ಮೆಷಿನ್‌ಗಳಾಗಿವೆ. ಈ ಮೆಷಿನ್‌ಗಳು ನಿಜವಾಗಿಯೂ ಗಟ್ಟಿಮುಟ್ಟಾಗಿರುತ್ತವೆ ಹಾಗೂ ಹೊಲಿಗೆಯನ್ನು ಸರಳ ಮತ್ತು ಸುಲಭಗೊಳಿಸಲು ಹಲವಾರು ವೈಶಿಷ್ಟ್ಯತೆಗಳೊಂದಿಗೆ ಬರುತ್ತವೆ. ಆಟೊ ಟ್ರಿಪ್ಪಿಂಗ್, ಏಕರೂಪದ ಬಾಬಿನ್ ವೈಂಡಿಂಗ್‌ಗಾಗಿ ಸ್ಪ್ರಿಂಗ್ ಲೋಡೆಡ್ ಬಾಬಿನ್ ವೈಂಡರ್, ಸೂಕ್ತವಾದ ಹೊಲಿಗೆ ರಚನೆ, ಸುಲಭ ಫಾರ್ವರ್ಡ್ ಮತ್ತು ರಿವರ್ಸ್ ಹೊಲಿಗೆ ನಿಯಂತ್ರಣಕ್ಕಾಗಿ ಲಿವರ್ ಸ್ಟಿಚ್ ರೆಗ್ಯುಲೇಟರ್ ಮತ್ತು ಬಾಬಿನ್‌ಅನ್ನು ಸುಲಭವಾಗಿ ಒಳಸೇರಿಸಲು ಸ್ಲೈಡ್ ಪ್ಲೇಟ್ ಇವೆಲ್ಲವೂ ತಮ್ಮ ಟೈಲರಿಂಗ್ ಅವಶ್ಯಕತೆಗಳಿಗಾಗಿ ಇದನ್ನು ಗೊ-ಟು ಮಷಿನ್ ಆಗಿಸಿವೆ. ಉತ್ಪನ್ನಗಳನ್ನು ವೀಕ್ಷಿಸಿ.