Sewing Teaches Kids How To Care For The Planet

ಇಂದಿನ ದೊಡ್ಡ ಸಮಸ್ಯೆಯೆಂದರೆ ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚಿನದನ್ನು ನಾವು ವ್ಯರ್ಥ ಮಾಡುತ್ತೇವೆ. ಅದನ್ನು ಪೂರ್ಣಗೊಳಿಸಲು ನಾವೆಲ್ಲರೂ ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚಿನದನ್ನು ಖರೀದಿಸುತ್ತೇವೆ. ಇದು ಭೂಮಿಯ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಭಾರೀ ಹೊರೆಯನ್ನುಂಟುಮಾಡುತ್ತದೆ ಮತ್ತು ನಮ್ಮ ಸುತ್ತಲೂ ಕಾಣುವ ತ್ಯಾಜ್ಯಕ್ಕೆ ಕಾರಣವಾಗುತ್ತದೆ.

ಹೊಲಿಗೆಯು ಜಗತ್ತನ್ನು ಉಳಿಸಲು ನೆರವಾಗುವ ಕೆಲವು ಮಾರ್ಗಗಳು ಇಲ್ಲಿವೆ.

1. ಮರುಬಳಕೆ: ಹೇಗೆ ಹೊಲಿಯುವುದೆಂದು ನಿಮಗೆ ತಿಳಿದಿದ್ದರೆ, ವಸ್ತುಗಳನ್ನು ಮರುಬಳಕೆ ಮಾಡುವುದು ಎಷ್ಟು ಸುಲಭವೆಂದು ನೀವು ನೋಡುತ್ತೀರಿ. ನೀವು ಹಳೆಯ ಟಿ-ಶರ್ಟ್‌ಗಳನ್ನು ತೆಗೆದುಕೊಂಡು, ಡಸ್ಟರ್‌ಗಳನ್ನಾಗಿ ಮಾಡಬಹುದು, ಅದನ್ನು ಕಾರ್ ಸ್ವಚ್ಛಗೊಳಿಸಲು ಮತ್ತು ಚೆಲ್ಲಿರುವುದನ್ನು ಶುಚಿಗೊಳಿಸಲು ಹೀಗೆ ಮನೆಯಲ್ಲಿ ಅನೇಕ ಕೆಲಸಗಳಿಗೆ ಬಳಸಬಹುದು. ಧರಿಸಲು ಗಿಡ್ಡವಾದ ಪ್ಯಾಂಟ್‌ಗಳನ್ನು ಕಾರ್ಗೋಗಳನ್ನಾಗಿ ಮಾಡಬಹುದು.

2. ಒಂದು ಹೊಸ ಲೈಫ್ ಸೇರಿಸಿ: ನೀವು ಹಳೆಯ ಜೀನ್ಸ್ ಪ್ಯಾಂಟ್‌ಗಳನ್ನು ತೆಗೆದುಕೊಂಡು, ಅದಕ್ಕೆ ಒಂದು ಹೊಸ ಲೈಫ್ ನೀಡಬಹುದು. ಇದಕ್ಕೆ ಬೇಕಿರುವುದು ಹಳೆಯ ಹರಿದ ಜೀನ್ಸ್. ಅವು ಸ್ವಲ್ಪ ಸಮಯದ ನಂತರ ಉಪಯೋಗಕ್ಕೆ ಬರುವುದಿಲ್ಲ. ಆದರೆ ನೀವು ಅವುಗಳನ್ನು ಹೊಲಿದರೆ ಅವುಗಳ ಲೈಫ್ ಜಾಸ್ತಿ ಮಾಡುವುದು ಮಾತ್ರವಲ್ಲದೆ ಸಣ್ಣ ಅಲಂಕಾರಗಳೊಂದಿಗೆ ಅವುಗಳನ್ನು ವಿಭಿನ್ನವಾಗಿಸುತ್ತೀರಿ.

3. ಪ್ಲಾಸ್ಟಿಕ್‌ ಬೇಡ ಎಂದು ಹೇಳಿ: ಇದು ಬಹುಶಃ ನಾವೆಲ್ಲರೂ ತೆಗೆದುಕೊಳ್ಳಬೇಕಾದ ಅತಿಮುಖ್ಯ ಹೆಜ್ಜೆಯಾಗಿದೆ. ನಾವು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಇದನ್ನು ಮಾಡಲು ನಮಗೆ ಒಂದು ಪರ್ಯಾಯ ಬೇಕು. ಆಗ ಹೊಲಿಗೆಯು ಮತ್ತೊಮ್ಮೆ ರಕ್ಷಣೆಗೆ ಬರುತ್ತದೆ. ನಿಮ್ಮ ಮನೆಯಲ್ಲಿ ಉಪಯೋಗಕ್ಕೆ ಬಾರದ ಹಳೆಯ ಸಾಮಗ್ರಿಗಳಿಂದ ನೀವು ಶಾಪಿಂಗ್ ಬ್ಯಾಗ್‌ಗಳನ್ನು ಮಾಡಲು ಆರಂಭಿಸಬಹುದು. ಮಿಕ್ಸ್ ಮಾಡಿ ಮತ್ತು ಮ್ಯಾಚ್ ಮಾಡಿ. ಪ್ಯಾಚ್‌ವರ್ಕ್ ವಿನ್ಯಾಸಗಳನ್ನು ಮಾಡಿ. ಅವುಗಳೆಲ್ಲವೂ ಅದ್ಭುತವಾಗಿರುತ್ತವೆ ಏಕೆಂದರೆ ಅವು ನಿಮಗೆ ಪ್ಲಾಸ್ಟಿಕ್ ಬಳಕೆ ಮಾಡದಿರಲು ನೆರವಾಗುತ್ತವೆ.

4. ಹೊಲಿಗೆಯು ನಿಮ್ಮ ಕಾಳಜಿವಹಿಸುತ್ತದೆ: ನೀವೇ ಹೊಲಿದು ವಸ್ತುಗಳನ್ನು ಮಾಡಿದಾಗ, ಅವು ನಿಮ್ಮ ಜೀವನದ ಒಂದು ಭಾಗವಾಗುತ್ತವೆ. ಅದು ನೀವು ಕಾಳಜಿವಹಿಸುತ್ತೀರಿ ಮತ್ತು ಸಮಯ ತೆಗೆದುಕೊಂಡು ವಿಶೇಷವಾಗಿರುವುದನ್ನು ಮಾಡಿದ್ದೀರಿ ಎಂಬುದನ್ನು ತೋರಿಸುತ್ತದೆ. ಈ ವಸ್ತುಗಳು ನಿಜವಾದ ಸಂಪತ್ತುಗಳು. ಅವುಗಳನ್ನು ಎಂದಿಗೂ ನಮ್ಮೊಂದಿಗೆ ಇರಿಸಿಕೊಳ್ಳುತ್ತೇವೆ, ಹೊರಗೆ ಎಸೆಯುವುದಿಲ್ಲ.

ಹೊಲಿಯುವ ಮಕ್ಕಳು ಭಿನ್ನತೆಯನ್ನು ಉಂಟುಮಾಡುತ್ತಾರೆ:
ನಿಮ್ಮ ನಿಮ್ಮ ಮಗುವಿಗೆ ಹೊಲಿಯಲು ಕಲಿಸಿದಾಗ, ನೀವು ಆತನಿಗೆ ಅಥವಾ ಆಕೆಗೆ ಒಂದು ಕೌಶಲ್ಯವನ್ನು ನೀಡುವುದು ಮಾತ್ರವಲ್ಲದೆ ಹೇಗೆ ವಸ್ತುಗಳಿಗೆ ಮಹತ್ವ ನೀಡುವುದು ಮತ್ತು ಅವುಗಳನ್ನು ದೀರ್ಘ ಕಾಲ ಉಳಿಯುವಂತೆ ಮಾಡುವುದು ಎಂಬುದನ್ನೂ ತೋರಿಸಿಕೊಡುತ್ತೀರಿ. ಅವರು ನೋಡುವುದರ ಬಗ್ಗೆ ಒಂದು ಹೊಸ ಗೌರವವನ್ನು ಪಡೆಯುತ್ತಾರೆ ಹಾಗೂ ನೆಲದಡಿಯಲ್ಲಿ ಹೂತು ಹಾಳಾಗಿ ಹೋಗುವಂತಹ ವಸ್ತುಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದುತ್ತಾರೆ. ಹೊಲಿಗೆ ತಿಳಿದಿರುವ ಮಕ್ಕಳು ಹಳೆಯ ಬಟ್ಟೆಗಳನ್ನು ಬಹಳ ಭಿನ್ನವಾಗಿ ಕಾಣುತ್ತಾರೆ. ಒಬ್ಬ ತಾಯಿಯು ಒಂದು ಶರ್ಟ್ಅನ್ನು ನೋಡಿ ಅದನ್ನು ಎಸೆಯಬೇಕೆಂದುಕೊಳ್ಳಬಹುದು, ಅದೇ ಹೊಲಿಗೆ ತಿಳಿದಿರುವ ಒಂದು ಹುಡುಗಿ ಅದನ್ನು ತನ್ನನ್ನು ವ್ಯಕ್ತಪಡಿಸಿಕೊಳ್ಳುವ ಒಂದು ಖಾಲಿ ಕ್ಯಾನ್ವಾಸ್ ಆಗಿ ಕಾಣಬಹುದು. ಆಕೆ ಅದರ ಸ್ಲೀವ್‌ಗಳನ್ನು ಹೇಗೆ ಕತ್ತರಿಸುವುದು ಮತ್ತು ಹೆಮ್ ಮಾಡುವುದು, ಬ್ಲಿಂಗ್‌ಗಳನ್ನು ಹೇಗೆ ಸೇರಿಸುವುದು ಎಂದೆಲ್ಲಾ ಆಲೋಚಿಸಬಹುದು. ಮೂಲತಃ ಆಕೆ ಆ ಹಳೆಯ ಶರ್ಟ್‌ಗೆ ಒಂದು ಹೊಸ ಲೈಫ್ಅನ್ನು ಹೇಗೆ ನೀಡುವುದು ಎಂದು ಯೋಚಿಸುತ್ತಿರುತ್ತಾಳೆ.

ಅತ್ಯಂತ ಮೋಜಿನ ರೀತಿಯಲ್ಲಿ ಕಲಿಯಿರಿ ಮತ್ತು ರಚಿಸಿ
www.ushasew.com ರಲ್ಲಿ ನಾವು ನಿಮಗೆ ಅತ್ಯಂತ ಮೋಜಿನ ಮತ್ತು ಆಸಕ್ತಿದಾಯಕ ರೀತಿಯಲ್ಲಿ ಹೇಗೆ ಹೊಲಿಯುವುದು ಎಂಬುದನ್ನು ಕಲಿಸುತ್ತವೆ. ಮಾಹಿತಿಯುಕ್ತ ಮತ್ತು ಅನುಸರಿಸಲು ಸುಲಭವಾದ ವೀಡಿಯೊಗಳನ್ನು ನಾವು ಹೊಂದಿದ್ದೇವೆ. ಈ ಪ್ರಾಜೆಕ್ಟ್‌ಗಳು ನಿಮ್ಮ ಹೊಸ ಕೌಶಲ್ಯಗಳನ್ನು ಹೊರತರುತ್ತವೆ ಮತ್ತು ಪ್ರಯೋಜನಕಾರಿಯಾಗಿವೆ.

ಕಲಿಯಲು ಮತ್ತು ರಚಿಸಲು ನೀವು ಮೂಲಭೂತ ವಿಷಯಗಳೊಂದಿಗೆ ಆರಂಭಿಸಬೇಕು. ಒಮ್ಮೆ ನೀವು ಅವುಗಳಲ್ಲಿ ನಿಪುಣರಾದ ನಂತರ, ನಿಮ್ಮ ಹೊಸ ಕೌಶಲ್ಯವನ್ನು ಬಳಸಿ, ಅದ್ಭುತ ವಸ್ತುಗಳನ್ನು ರಚಿಸಬಹುದು. ನೀವು ವಸ್ತುಗಳನ್ನು ಮಾಡಲು ಆರಂಭಿಸುವ ವೀಡಿಯೊಗಳನ್ನು ಪ್ರಾಜೆಕ್ಟ್‌ಗಳೆಂದು ಕರೆಯಲಾಗುತ್ತದೆ. ಹಾಗೂ ನಿಮ್ಮ ಉತ್ಸುಕತೆಯನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ತೊಡಗಿಸಿಕೊಳ್ಳಲು ನಾವು ಬಹಳಷ್ಟು ವೀಡಿಯೊಗಳನ್ನು ಹೊಂದಿದ್ದೇವೆ.

ನಿಮಗೆ ಕಲಿಕಾ ಪ್ರಕ್ರಿಯೆಯ ಕಲ್ಪನೆಯನ್ನು ಒದಗಿಸಲು, ನೀವು ಹೇಗೆ ಆರಂಭಿಸಬೇಕೆಂಬುದು ಇಲ್ಲಿದೆ:

ಈ ಎಲ್ಲಾ ಪಾಠ ಮತ್ತು ವೀಡಿಯೊಗಳು 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಹಾಗಾಗಿ ನೀವು ಆರಂಭಿಸುವ ಮೊದಲು ನಿಮಗೆ ಹೆಚ್ಚು ಅನುಕೂಲಕರವಾದ ಭಾಷೆಯನ್ನು ಆರಿಸಿ.

ಉಷಾ ನಿಮಗಾಗಿ ವಿನ್ಯಾಸಗೊಳಿಸಲಾದ ಮೆಷಿನ್ಅನ್ನು ಹೊಂದಿದೆ.

ಉಷಾದಲ್ಲಿ ನಾವು ಪ್ರತಿಯೊಂದು ವಿಧದ ಬಳಕೆದಾರರಿಗೂ ಉಪಯುಕ್ತವಾದ ಹೊಲಿಗೆ ಮೆಷಿನ್‌ಗಳ ಶ್ರೇಣಿಯನ್ನು ತಯಾರಿಸಿದ್ದೇವೆ. ಆರಂಭಿಗರಿಂದ ಪರಿಣಿತ ವೃತ್ತಿಪರರವರೆಗೂ ಸರಿಹೊಂದುವ ಮೆಷಿನ್ಅನ್ನು ನಾವು ಹೊಂದಿದ್ದೇವೆ. ನಮ್ಮ ಮೆಷಿನ್‌ಗಳ ಶ್ರೇಣಿಯನ್ನು ಅವಲೋಕಿಸಿ ಮತ್ತು ನಿಮ್ಮ ಅವಶ್ಯಕತೆಗಳಿಗೆ ಒಪ್ಪುವ ಮೆಷಿನ್ಅನ್ನು ಆರಿಸಿ. ನೀವು ನಮ್ಮ ಗ್ರಾಹಕ ಸೇವಾ ಕಾರ್ಯಕರ್ತರೊಂದಿಗೆ ಮಾತನಾಡಲು ಬಯಸಿದಲ್ಲಿ, ಅವರು ನಿಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. www.ushasew.com ರಲ್ಲಿ ನಮ್ಮ ಉತ್ಪನ್ನಗಳ ಶ್ರೇಣಿಯನ್ನು ಅವಲೋಕಿಸಿ, ನಿಮಗೆ ಯಾವುದು ಇಷ್ಟವಾಗುತ್ತದೆಂದು ನೋಡಿ, ನಂತರ ನಮ್ಮ ವೆಬ್‌ಸೈ ಟ್‌ನಲ್ಲಿರುವ ಸ್ಟೋರ್ ಲೊಕೇಟರ್‌ಅನ್ನು ಬಳಸಿ ನಿಮ್ಮ ಹತ್ತಿರದ ಉಷಾ ಸ್ಟೋರ್‌ಅನ್ನು ಹುಡುಕಿ.

ನೀವು ಹೊಲಿಗೆಯನ್ನು ಆರಂಭಿಸಿದ ನಂತರ ಏನೆಲ್ಲಾ ರಚಿಸುತ್ತೀರೆಂದು ನೋಡಲು ನಾವು ಇಷ್ಟಪಡುತ್ತೇವೆ.
ಒಮ್ಮೆ ನೀವು ಹೊಲಿಗೆಯನ್ನು ಆರಂಭಿಸಿದ ನಂತರ, ನಾವು ನಿಮ್ಮ ರಚನೆಗಳನ್ನು ನೋಡಲು ಇಚ್ಛಿಸುತ್ತೇವೆ. ದಯವಿಟ್ಟು ಅವುಗಳನ್ನು ನಮ್ಮ ಯಾವುದೇ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. – (ಫೇಸ್ಬುಕ್), (ಇನ್ಸ್ಟಾಗ್ರಾಮ್), (ಟ್ವಿಟರ್), (ಯುಟ್ಯೂಬ್). ನೀವು ಅದನ್ನು ಏಕೆ ಮಾಡಿದಿರಿ, ಅದು ಯಾರಿಗಾಗಿ ಮತ್ತು ಅದನ್ನು ಹೇಗೆ ವಿಶೇಷವಾಗಿ ಮಾಡಿದಿರಿ ಎಂಬುದನ್ನು ನಮಗೆ ಹೇಳಿ.

ಮುಂದೆ ದೀರ್ಘ ಬೇಸಿಗೆಕಾಲ ಬರುತ್ತದೆ, ಆದ್ದರಿಂದ ನೀವು ತಂಪಗೆ ಮನೆಯಲ್ಲೇ ಇರಿ ಮತ್ತು ನಿಮ್ಮ ಪಾಠಗಳನ್ನು ಆರಂಭಿಸಿ.

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ.Read More.....

Leave your comment