Make Your Phone Happy With A Mobile Pouch
ಇಂದು ನಮ್ಮ ಫೋನ್ ನಾವು ನಮ್ಮೊಂದಿಗೆ ಒಯ್ಯುವ ಹೆಚ್ಚು ಅಮೂಲ್ಯವಾದ ಸಾಧನಗಳಲ್ಲಿ ಒಂದಾಗಿದೆ. ಅದು ಸಂಪರ್ಕಗಳಿಂದ ಇಮೇಲ್‌ಗಳವರೆಗೆ ಶಾಪಿಂಗ್ ಅಪ್ಲಿಕೇಶನ್‌ಗಳಿಂದ ಫೋಟೊಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಈ ಸಣ್ಣ ಎಲೆಕ್ಟ್ರಾನಿಕ್ ಸಾಧನವು ನಮ್ಮ ಜೀವನದ ಒಂದು ಅನಿವಾರ್ಯ ಭಾಗವಾಗಿರುವುದರಿಂದ, ಅದನ್ನು ಸುರಕ್ಷಿತವಾಗಿರಿಸುವುದು ಮತ್ತು ನಮ್ಮ ಸ್ಟೈಲ್‌ನ ಪ್ರತಿಬಿಂಬವಾಗಿರಿಸುವುದು ಅತಿಮುಖ್ಯ. ಅದು ಇಡೀ ದಿನ ಎದುರಿಸುವ ಎಲ್ಲಾ ನೂಕು-ತಳ್ಳುವಿಕೆಗಳಿಂದ ಅದನ್ನು ಕಾಪಾಡಬೇಕಾಗುತ್ತದೆ ಹಾಗೂ ಮುಖ್ಯವಾಗಿ ನಾವು ಅದನ್ನು ಮಿಸ್‌ಪ್ಲೇಸ್ ಮಾಡದಿರುವುದನ್ನು ಖಚಿತಪಡಿಸಬೇಕು.
ಇದನ್ನು ಮಾಡುವ ಒಂದು ಅತ್ಯುತ್ತಮ ಮಾರ್ಗವೆಂದರೆ ಒಂದು ಪೌಚ್ ತೆಗೆದುಕೊಂಡು, ಫೋನ್ಅನ್ನು ಅದರಲ್ಲಿಟ್ಟು ಒಯ್ಯುವುದು. ಮಾರುಕಟ್ಟೆಯಿಂದ ಖರೀದಿಸಿದ ಪೌಚ್‌ನ ಏಕೈಕ ಸಮಸ್ಯೆಯೆಂದರೆ ಅದು ಎಂದಿಗೂ ವಿಭಿನ್ನ ಮತ್ತು ವಿಶೇಷವಾಗಿರುವುದಿಲ್ಲ.
ನಿಮ್ಮ ವ್ಯಕ್ತಿತ್ವ ಮತ್ತು ಶೈಲಿಯನ್ನು ಪ್ರತಿಬಿಂಬಿಸುವ ಮೊಬೈಲ್ ಪೌಚ್ಅನ್ನು ಪಡೆಯಲು, ನೀವೇ ಸ್ವತಃ ಒಂದು ಪೌಚ್ಅನ್ನು ಮಾಡಬೇಕಾಗುತ್ತದೆ. ಅದು ಹೇಗೆ ಎಂದು ನೀವು ಆಶ್ಚರ್ಯಪಡುತ್ತಿದ್ದರೆ, ಚಿಂತಿಸಬೇಡಿ ನಾವು ಹೇಳಿಕೊಡುತ್ತೇವೆ.
ಅದಕ್ಕಾಗಿ ನಿಮಗೆ ಬೇಕಿರುವುದನ್ನು ಒಟ್ಟಿಗೆ ಸಂಗ್ರಹಿಸುವ ಮೂಲಕ ಆರಂಭಿಸಿ.
ನೀವು ಆರಂಭಿಸುವ ಮೊದಲು ಮೊಬೈಲ್ ಫೋನ್ ಕವರ್ ಮಾಡಲು ಬೇಕಾದ ಎಲ್ಲವನ್ನೂ ಸಂಗ್ರಹಿಸಬೇಕಾಗುತ್ತದೆ. “ಎ ಹ್ಯಾಂಡಿ ಮೊಬೈಲ್ ಪೌಚ್” ಎನ್ನುವ ನಮ್ಮ ಪ್ರಾಜೆಕ್ಟ್ ವೀಡಿಯೊದಲ್ಲಿ ಇದನ್ನು ವಿವರವಾಗಿ ಪಟ್ಟಿ ಮಾಡಲಾಗಿದೆ, ನಾವು ಮಾಡುವ ಪೌಚ್‌ಗೆ ಬೇಕಾಗಿರುವುದನ್ನು ಪಟ್ಟಿ ಮಾಡಿದ್ದೇವೆ.
- 9 ಇಂಚುಗಳು ಬೈ 13 ಇಂಚುಗಳ ಒಂದು ಫ್ಯಾಬ್ರಿಕ್ ಪೀಸ್
- ನಿಮ್ಮ ಸೆಲ್‌ಫೋನ್‌ಗಿಂತ ಕನಿಷ್ಠ 3 ಇಂಚುಗಳಷ್ಟು ದೊಡ್ಡದಿರುವ ಮೂರು ಫ್ಯಾಬ್ರಿಕ್ ಪೀಸ್‌ಗಳುಇವುಗಳಲ್ಲಿ ಒಂದು ವರ್ಣಮಯ, ಪ್ರಿಂಟೆಡ್ ಅಥವಾ ಟೆಕ್ಚರ್ಡ್ ಫ್ಯಾಬ್ರಿಕ್ ಆಗಿರಬಹುದು.
- ಅಲಂಕಾರಕ್ಕಾಗಿ ಒಂದು ಬಟನ್
- ಫಾಸ್ಟನರ್ ಆಗಿ ಒಂದು 1 ಇಂಚಿನ ವೆಲ್ಕ್ರೊ ಪೀಸ್.
- ಸ್ಲಿಂಗ್‌ಗೆ ಒಂದು ಉದ್ದದ ರಿಬ್ಬನ್.
ಒಮ್ಮೆ ನೀವು ಇವೆಲ್ಲವನ್ನು ಒಟ್ಟುಗೂಡಿಸಿದ ನಂತರ, ನೀವು ನಿಮ್ಮ ಫೋನ್ ಅಥವಾ ನಿಮ್ಮ ಲ್ಯಾಪ್‌ಟಾಪ್ ತೆಗೆದುಕೊಂಡು, ನಿಮ್ಮ ಹೊಲಿಗೆ ಮೆಷಿನ್‌ನ ಟೇಬಲ್‌ನ ಮುಂದೆ ಕುಳಿತುಕೊಳ್ಳಬೇಕು.
ಪಾಠವನ್ನು ವೀಕ್ಷಿಸಿ ಮತ್ತು ಕಲಿಯಿರಿ
www. ushasew. com ಗೆ ಭೇಟಿ ನೀಡಿ ಮತ್ತು ಪ್ರಾಜೆಕ್ಟ್ ನಂ. 3 ರ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ಪೌಚ್ ಮಾಡುವುದು ಹೇಗೆ ಎಂಬುದನ್ನು ಈ ಪಾಠ ತೋರಿಸಿಕೊಡುತ್ತದೆ. ಈಗ ನಾವು ಆರಂಭಿಸುತ್ತೇವೆ ಹಾಗೂ ಪ್ರತಿಯೊಂದು ಹಂತವನ್ನೂ, ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದನ್ನು ವಿವರಿಸುತ್ತೇವೆ.
ನೀವು ಪ್ರಾಜೆಕ್ಟ್‌ನ ವೀಡಿಯೊವನ್ನು ವೀಕ್ಷಿಸುವಾಗ, ನಾವು ಮೊದಲ ಹಂತ ಆರಂಭಿಸಿರುವುದನ್ನು ನೀವು ನೋಡುತ್ತೀರಿ. ಈ ಹಂತದಲ್ಲಿ ನಾವು ಬೇಕಾದ ಎಲ್ಲಾ ಮೆಟೀರಿಯಲ್ ಮತ್ತು ಇತರೆ ಸಾಮಗ್ರಿಗಳನ್ನು ಸಂಗ್ರಹಿಸುತ್ತೇವೆ. ನಂತರ ನಾವು ಏನು ಮತ್ತು ಹೇಗೆ ಮಾಡಬೇಕು ಎಂಬುದನ್ನು ವಿವರಿಸುತ್ತೇವೆ. ನೀವು ಹೊಲಿಯಬೇಕಾದ ಹೊಲಿಗೆಯ ಉದ್ದ, ವೆಲ್ಕ್ರೊ ಜೋಡಿಸುವುದು ಮತ್ತು ಅಂತಿಮವಾಗಿ ನಿಮ್ಮ ಪೌಚ್ಅನ್ನು ಫಿನಿಶ್ ಮಾಡುವುದು ಮೊದಲಾದವೂ ಸೇರಿದಂತೆ ಪ್ರತಿಯೊಂದನ್ನು ವಿವರಿಸಲಾಗುತ್ತದೆ, ಆದ್ದರಿಂದ ಈ ವೀಡಿಯೊ ಒಂದು ಸ್ಪಷ್ಟ ನೋಟವನ್ನು ಹೊಂದಿದೆ.
ನಾವು ಇಷ್ಟಪಡುವ ಬಣ್ಣಗಳು ಮತ್ತು ಫ್ಯಾಬ್ರಿಕ್‌ಗಳನ್ನು ನಾವು ಬಳಸಿದ್ದೇವೆ. ನೀವು ನಿಮಗೆ ಇಷ್ಟವಾದ ಮತ್ತು ಸರಿಹೊಂದುವ ಬಣ್ಣವನ್ನು ಆರಿಸಬಹುದು. ಮುಂದುವರಿಯಿರಿ ಮತ್ತು ಹೊಸ ಆಲೋಚನೆಗಳನ್ನು ಮಾಡಿ. ಆಕರ್ಷಕವಾದ ಮತ್ತು ಹೊಳೆಯುವ ಬಣ್ಣಗಳನ್ನು ಆರಿಸಿ ಮತ್ತು ರಚನೆಗಳನ್ನು ವಿಭಿನ್ನವಾಗಿ ಬಳಸಿ. ಇದು ನಿಮ್ಮ ಮೊಬೈಲ್ ಪೌಚ್, ಹಾಗಾಗಿ ಇದು ನಿಮ್ಮ ವ್ಯಕ್ತಿತ್ವ ಮತ್ತು ಶೈಲಿಯನ್ನು ಪ್ರತಿಬಿಂಬಿಸಬೇಕು. ಅಳತೆಗಳನ್ನು ಸರಿಯಾಗಿ ಮಾಡಿ (ಮರೆಯದೆ ಎರಡು ಬಾರಿ ಅಳತೆ ಮಾಡಿ, ನಂತರ ಕತ್ತರಿಸಿ)ನೀವು ದೊಡ್ಡ ಫೋನ್ಅನ್ನು ಹೊಂದಿದ್ದರೆ, ವೀಡಿಯೊದಲ್ಲಿ ಬಳಸಿದ ಅಳತೆಗಳನ್ನು ಹೆಚ್ಚಿಸಿ ನಿಮ್ಮ ಫೋನ್‌ಗೆ ಸರಿಹೊಂದುವಂತೆ ಮಾಡಿಕೊಳ್ಳಿ. ಸ್ವಲ್ಪ ದೊಡ್ಡ ಗಾತ್ರ ಇಟ್ಟುಕೊಂಡರೆ ಉತ್ತಮ, ಏಕೆಂದರೆ ಹೆಚ್ಚುವರಿ ಮೆಟೀರಿಯಲ್ಅನ್ನು ನಂತರ ಕತ್ತರಿಸಿಕೊಳ್ಳಬಹುದು.
ಇದು ನಿಮ್ಮ ಮೊದಲ ಪ್ರಾಜೆಕ್ಟ್ ಆಗಿದ್ದರೆ, ನೀವು ನಿಧಾನವಾಗಿ ಮಾಡಿ ಎಂದು ನಾವು ಸೂಚಿಸುತ್ತೇವೆ. ನೀವು ಒಂದು ಹೊಲಿಗೆ ಹೊಲಿಯುವ ಮೊದಲು ಮತ್ತೊಮ್ಮೆ ವೀಡಿಯೊ ನೋಡಿ. ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಖಚಿತವಾಗಿರಿ. ಇದು ವೇಗವಾಗಿ ಹೊಲಿಯುವ ಸ್ಪರ್ಧೆಯಲ್ಲ. ವಾಸ್ತವವಾಗಿ ತೆಗೆದುಕೊಂಡ ಸಮಯಕ್ಕಿಂತ ಫಿನಿಶ್ ಹೆಚ್ಚು ಮುಖ್ಯ. ನೀವು ತಪ್ಪು ಮಾಡಿದರೆ, ಗಾಬರಿಯಾಗಬೇಡಿ. ಕತ್ತರಿ ತೆಗೆದುಕೊಂಡು, ಹೊಲಿಗೆಗಳನ್ನು ಬಿಡಿಸಿ ಪೀಸ್‌ಗಳನ್ನು ಪ್ರತ್ಯೇಕಿಸಿ ಮತ್ತು ಇನ್ನೊಮ್ಮೆ ಆರಂಭಿಸಿ.
ನಾವು ನಿಮ್ಮ ಮೊಬೈಲ್ ಪೌಚ್ ನೋಡಲು ಬಯಸುತ್ತೇವೆ.
ನೀವು ನಿಮ್ಮ ಮೊಬೈಲ್ ಪೌಚ್ ಮಾಡಿ ಮುಗಿಸಿದ ನಂತರ, ದಯವಿಟ್ಟು ಅದರ ಚಿತ್ರಗಳನ್ನು ನಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. ನೀವು ವಿಭಿನ್ನವಾಗಿ ಏನು ಮಾಡಿದಿರಿ, ನೀವು ಆರಿಸಿದ ಮೆಟೀರಿಯಲ್‌ಗಳು, ಬಣ್ಣಗಳು ಯಾವುವು ಇತ್ಯಾದಿಗಳನ್ನು ಸಾಧ್ಯವಾದರೆ ವಿವರಿಸಿ.
ಈ ಪ್ರಾಜೆಕ್ಟ್ ಮೋಜಿನಿಂದ ಕೂಡಿದೆಯೆಂದು ನಿಮಗನಿಸಿದರೆ, ನಾವು ಅದೇ ರೀತಿಯ ಇನ್ನೂ ಅನೇಕ ಪ್ರಾಜೆಕ್ಟ್‌ಗಳನ್ನು ಹೊಂದಿದ್ದೇವೆ.
- ಬಹುಪಯೋಗಿ ಶಾಪಿಂಗ್ ಬ್ಯಾಗ್ ಪ್ರಾಜೆಕ್ಟ್
- ಸ್ನಗ್ ಶ್ರಗ್ ಮಾಡುವುದು
- ಜಿಪ್ಪರ್ ಪೌಚ್ ಹೊಲಿಯುವುದು
- ಹಳೆಯ ಶರ್ಟ್ಅನ್ನು ಮರುಬಳಕೆ ಮಾಡುವುದು
- ಬುಕ್ಮಾರ್ಕ್ ಮಾಡುವುದು
ಈ ಎಲ್ಲಾ ಪ್ರಾಜೆಕ್ಟ್‌ಗಳು ಅವುಗಳ ಸ್ವಂತ ಪ್ರತ್ಯೇಕ ವೀಡಿಯೊಗಳನ್ನು ಹೊಂದಿವೆ, ಅವುಗಳಲ್ಲಿ ನಾವು ಮತ್ತೆ ಪ್ರತಿಯೊಂದು ಹಂತವನ್ನು ಸರಳವಾಗಿ ಮಾಹಿತಿಯುಕ್ತವಾಗಿ ವಿವರಿಸಿದ್ದೇವೆ. ನಿಮಗೆ ಕೆಲವೊಂದು ಭಾಗ ಅರ್ಥವಾಗದಿದ್ದರೆ, ನೀವು ಪ್ರಾಜೆಕ್ಟ್ ವೀಡಿಯೊಗೆ ಮುಂಚಿನ ಪಾಠಗಳನ್ನು ಅವಲೋಕಿಸಬಹುದು. ಈ ಪಾಠಗಳು ಫ್ಯಾಬ್ರಿಕ್ ಕತ್ತರಿಸುವುದು ಹೇಗೆ, ಹೆಮಿಂಗ್ ಮಾಡುವುದು ಹೇಗೆ, ಜಿಪ್ಪರ್‌ಗಳನ್ನು ಹೊಲಿಯುವುದು ಹೇಗೆ ಮೊದಲಾದ ಪ್ರತಿಯೊಂದು ಹಂತಗಳನ್ನು ಕಲಿಸುತ್ತವೆ.
ಈ ಪ್ರತಿಯೊಂದು ಪಾಠಗಳು ಮತ್ತು ಪ್ರಾಜೆಕ್ಟ್‌ಗಳು 9 ವಿಭಿನ್ನ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಹಾಗಾಗಿ ನಿಮಗೆ ಹೆಚ್ಚು ಅನುಕೂಲಕರವಾದ ಭಾಷೆಯನ್ನು ಆರಿಸಿ.
ನಾವು ಸೈಟ್‌ನಲ್ಲಿ ಈಗಾಗಲೇ ಹೊಂದಿರುವ ದೊಡ್ಡ ಪಟ್ಟಿಗೆ ನಿಗದಿತವಾಗಿ ಪ್ರಾಜೆಕ್ಟ್‌ಗಳು ಮತ್ತು ವೀಡಿಯೊಗಳನ್ನು ಸೇರಿಸುತ್ತಿರುತ್ತೇವೆ, ಹಾಗಾಗಿ ಪರಿಶೀಲಿಸುತ್ತಿರಿ. ಉಷಾ ಹೊಲಿಗೆ ಮೆಷಿನ್ ಕುರಿತು ನಿಮಗೆ ಯಾವುದೇ ಮಾಹಿತಿ ಬೇಕಿದ್ದಲ್ಲಿ, ಸಂಪೂರ್ಣ ಶ್ರೇಣಿಯನ್ನು ಅದರಲ್ಲಿ ಪ್ರಕಟಿಸಲಾಗಿರುತ್ತದೆ. ನಮ್ಮ ಗ್ರಾಹಕ ಸೇವಾ ಸಂಖ್ಯೆಯನ್ನೂ ಸಹ ಸೈಟ್‌ನ ಮೇಲೆ ಬಲಭಾಗದಲ್ಲಿ ನೀಡಲಾಗಿರುತ್ತದೆ, ಹಾಗಾಗಿ ನಿಮಗೆ ಡೆಮೊ ಅಥವಾ ಯಾವುದೇ ಇತರೆ ಮಾಹಿತಿ ಬೇಕಾದಲ್ಲಿ, ಅವರಿಗೆ ಕರೆ ಮಾಡಿ.