Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ. ಇದು ಮಾನಸಿಕ ಬೆಳವಣಿಗೆ ಮತ್ತು ನಡವಳಿಕೆಯ ವಿಷಯದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. ನಿಮ್ಮ ಮಗ ಅಥವಾ ಮಗಳನ್ನು ಹೊಲಿಗೆಗೆ ಪರಿಚಯಿಸಲು ಈಗ ಉತ್ತಮ ಸಮಯವಾಗಿದೆ. ಹೊರಗೆ ಹೋಗಿ ಆಟವಾಡಲು ತುಂಬಾ ಬಿಸಿಯಾಗಿದೆ. ಏನೂ ಮಾಡದೆ ಮನೆಯಲ್ಲಿ ಕುಳಿತುಕೊಂಡರೆ ಬೇಸರವಾಗುತ್ತದೆ ಹಾಗೂ ಅದರಿಂದ ಮಕ್ಕಳು ಜಡವಾಗುತ್ತಾರೆ ಮತ್ತು ಸೋಮಾರಿಯಾಗುತ್ತಾರೆ. ಆದ್ದರಿಂದ ಅವರಿಗೆ ಒಂದು ಹೊಲಿಗೆ ಮೆಷಿನ್ಅನ್ನು ತೆಗೆದುಕೊಡಿ ಹಾಗೂ ಅವರು ಹೇಗೆ ಈ ಕೌಶಲ್ಯದೆಡೆಗೆ ಉತ್ಸಾಹವನ್ನು ಬೆಳೆಸಿಕೊಳ್ಳುತ್ತಾರೆ ಎಂಬುದನ್ನು ನೋಡಿ. ಅದರ ಜೊತೆಗೆ ಅವರು ಬಹಳಷ್ಟು ತಿಳಿದುಕೊಳ್ಳುತ್ತಾರೆ.

ಉತ್ತಮ ಏಕಾಗ್ರತೆ ಮತ್ತು ಸಂಘಟನಾ ಕೌಶಲ್ಯಗಳು.

ಇಂದು ಪ್ರಪಂಚವು ವೇಗವಾಗಿ ಬೆಳೆಯುತ್ತಿದೆ. ಪ್ರತಿಯೊಂದು ಬೈಟ್ ಗಾತ್ರಗಳಲ್ಲಿ ಬರುತ್ತದೆ. ಇದು ವಿಶೇಷವಾಗಿ ಗಂಡುಮಕ್ಕಳಲ್ಲಿ, ಕಡಿಮೆ ಏಕಾಗ್ರತೆಗೆ ಕಾರಣವಾಗಿದೆ. ಹೊಲಿಗೆಯು ಮಕ್ಕಳಿಗೆ ಅವರ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಒಂದು ಚಟುವಟಿಕೆಯಾಗಿದೆ. ಇದರಿಂದ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಇಬ್ಬರೂ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಏಕಾಗ್ರತೆ ಬೆಳವಣಿಗೆಯಾಗುವುದು ಮಾತ್ರವಲ್ಲದೆ ಹೊಲಿಗೆಯು ಒಬ್ಬ ವ್ಯಕ್ತಿಯ ಸಂಘಟನಾ ಕೌಶಲ್ಯಗಳನ್ನೂ ಹೆಚ್ಚಿಸುತ್ತದೆ.

ಹೊಲಿಗೆಗೆ ನೀವು ಒಂದು ಸ್ಥಳದಲ್ಲಿ ಕುಳಿತುಕೊಂಡು, ಅರ್ಥಮಾಡಿಕೊಂಡು, ನಿಮ್ಮ ಪ್ರತಿಯೊಂದು ಹೆಜ್ಜೆಗಳನ್ನು ಯೋಜಿಸಬೇಕಾಗುತ್ತದೆ. ನಿಮ್ಮ ಮಗ ಅಥವಾ ಮಗಳು ಏನಾದರೂ ಹೊಸದನ್ನು ವಿನ್ಯಾಸಗೊಳಿಸುತ್ತಿದ್ದರೆ, ಅದನ್ನು ಮಾಡುವ ಮೊದಲೇ ಅವರಿಗೆ ಸಮಸ್ಯೆಗಳನ್ನು ಮುಂಗಾಣಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಇದು ನೆರವಾಗುತ್ತದೆ. ಅದರಿಂದಾಗಿ ಅವರು ಕೆಲಸವನ್ನು ಕ್ರಮಬದ್ಧವಾಗಿ ಮತ್ತು ಸುವ್ಯವಸ್ಥಿತವಾಗಿ ಮಾಡುತ್ತಾರೆ. ಈ ಸಾಮರ್ಥ್ಯಗಳು ಇಂದಿನ ಪ್ರಪಂಚದಲ್ಲಿ ನಿಜವಾಗಿಯೂ ಮಹಾಶಕ್ತಿಗಳಿದ್ದಂತೆ. ಅವು ಅವರ ಜೀವನದ ಪ್ರತಿಯೊಂದು ಹಂತದಲ್ಲೂ ನೆರವಾಗುತ್ತವೆ, ಅದು ವಿದ್ಯಾಭ್ಯಾಸದಲ್ಲಾಗಿರಲಿ ಅಥವಾ ನಂತರದ ಜೀವನದಲ್ಲಿ ಕೆಲಸದಲ್ಲಾಗಿರಲಿ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ

http://fourseasonsmontessori.com/2017/11/03/sewing-builds-creativity-focus-and-concentration-in-young-children/
https://indianexpress.com/article/parenting/learning/sui-dhaaga-how-learning-to-sew-can-make-kids-smarter-5376840/

ರಚನಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಕಲ್ಪನೆಯನ್ನು ಉತ್ತೇಜಿಸುತ್ತದೆ

ಈಗ ಹೊಲಿಗೆಯು ಒಂದು ಕಲೆಯಾಗಿದೆ. ನಿಮ್ಮ ಪ್ಯಾಲೆಟೆ ಇವುಗಳನ್ನು ಒಳಗೊಳ್ಳುತ್ತದೆ ಫ್ಯಾಬ್ರಿಕ್‌ಗಳು, ಥ್ರೆಡ್‌ಗಳು, ಬಟನ್‌ಗಳು, ವಿವಿಧ ರಚನೆಗಳು ಮತ್ತು ಬಣ್ಣಗಳು, ಮಿರರ್‌ಗಳು, ಬೀಡ್‌ಗಳು. . . . ಪಟ್ಟಿಗೆ ಕೊನೆಯಿಲ್ಲ. ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಇಬ್ಬರೂ ಇವುಗಳೆಲ್ಲವನ್ನೂ ಬಳಸಿಕೊಂಡು ಅದ್ಭುತ ವಸ್ತುಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ಅವರು ಮೊದಲು ತಮ್ಮ ರಚನಾತ್ಮಕತೆಯನ್ನು ಬಳಸಿಕೊಂಡು ಏನು ಮಾಡಲು ಇಚ್ಛಿಸುತ್ತಾರೆ ಎಂಬುದನ್ನು ವಿನ್ಯಾಸಗೊಳಿಸಬೇಕು. ಈ ವಿಷಯದಲ್ಲಿ ಅವರಿಗೆ ಸ್ವತಂತ್ರವಾಗಿ ಊಹಿಸಲು ಬಿಡಬೇಕು. ಅವರ ತಲೆಯಲ್ಲಿ ಅಥವಾ ಪೇಪರ್ ಮೇಲೆ (ಅವರು ಇದನ್ನು ಮಾಡಬೇಕೆಂದು ನಾವು ಸೂಚಿಸುತ್ತೇವೆ) ಒಮ್ಮೆ ವಿನ್ಯಾಸವು ಸಿದ್ಧವಾದ ನಂತರದ ಭಾಗವು ಮೋಜಿನಿಂದ ಕೂಡಿರುತ್ತದೆ. ನಂತರ ಅವರು ವಸ್ತುಗಳನ್ನು ಒಟ್ಟಿಗೆ ಜೋಡಿಸಿ ಅದಕ್ಕೆ ಆಕಾರವನ್ನು ನೀಡಲು ಆರಂಭಿಸಬಹುದು. ಅವರ ಕೆಲಸದಾದ್ಯಂತ ಮಾಡಿದ ಕೆಲಸವನ್ನು ಇನ್ನೊಮ್ಮೆ ನೋಡಲು ಮತ್ತು ವಿನ್ಯಾಸವನ್ನು ಇನ್ನಷ್ಟು ಉತ್ತಮಪಡಿಸಲು ಪ್ರೋತ್ಸಾಹಿಸಿ. ಅವರಿಗೆ ನಿಜವಾಗಿಯೂ ಅದ್ಭುತವಾದ ಒಂದು ಮಾಧ್ಯಮದಿಂದ ಅವರ ರಚನಾತ್ಮಕತೆಯನ್ನು ವ್ಯಕ್ತಪಡಿಸಲು ಅವಕಾಶ ನೀಡುವುದು ಇದರ ಆಲೋಚನೆಯಾಗಿದೆ.

ಫ್ಯಾಷನ್ ಡಿಸೈನಿಂಗ್ ಸಂಸ್ಥೆಗಳು ಹೊಲಿಯುವ ಜನರನ್ನು ಇಷ್ಟಪಡುತ್ತವೆ

ಇಂದು ಫ್ಯಾಷನ್ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಿದೆ. ಇದು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಇಬ್ಬರಿಗೂ ಒಂದು ಅದ್ಭುತ ವೃತ್ತಿಜೀವನದ ಅವಕಾಶವಾಗಿದೆ. ನೀವು ಫ್ಯಾಷನ್ ಡಿಸೈನಿಂಗ್ಅನ್ನು ಕಲಿಯಬಹುದಾದ ಸಂಸ್ಥೆಗಳು ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ ಮತ್ತು ಅವುಗಳಿಗೆ ಪ್ರವೇಶ ಪಡೆಯುವುದು ಕಷ್ಟವಾಗಿದೆ. ನಿಮ್ಮ ಮಗ ಅಥವಾ ಮಗಳು ಫ್ಯಾಷನ್ ಡಿಸೈನಿಂಗ್‌ನಲ್ಲಿ ಆಸಕ್ತಿಯನ್ನು ಹೊಂದಿದ್ದರೆ, ಅವರು ಹೊಲಿಗೆಯನ್ನು ಕಲಿಯಲು ಆರಂಭಿಸುವುದು ಉತ್ತಮ. ಇದಕ್ಕೆ ಕಾರಣವೇನೆಂದರೆ ಫ್ಯಾಷನ್ ಡಿಸೈನ್ ಸಂಸ್ಥೆಗಳು ರೆಸ್ಯೂಮ್‌ನಲ್ಲಿ ಹೊಲಿಗೆಯ ಸಾಮರ್ಥ್ಯವನ್ನು ನೋಡುತ್ತವೆ. ಅವರು ಡಿಸೈನಿಂಗ್ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಬೇಕಾಗಿರುವ ಅವರು ಹೊಲಿಗೆಯನ್ನು ಕಲಿಸಲು ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ.

ಹಾಗಾಗಿ ಇತರೆ ಎಲ್ಲಾ ಅರ್ಜಿದಾರರಿಗಿಂತ ನಿಮ್ಮ ಮಗುವಿಗೆ ಒಂದು ಸ್ಪರ್ಧಾತ್ಮಕ ಕೌಶಲ್ಯವನ್ನು ನೀಡಿ. ಆತ ಅಥವಾ ಆಕೆ ಸಾಧ್ಯವಾದಷ್ಟು ಬೇಗ ಹೊಲಿಯಲು ಕಲಿಯಲಿ.

ಹೊಲಿಗೆಯೆಂದರೆ ಬಟ್ಟೆಗಳನ್ನು ಹೊಲಿಯುವುದಕ್ಕಿಂತ ಹೆಚ್ಚು.

ಹೆಚ್ಚಿನವರು ತಪ್ಪು ಮಾಡುವುದು ಇಲ್ಲೇ. ಅವರು ಹೊಲಿಗೆಯ ಕುರಿತು ಯೋಚಿಸುವಾಗ, ಫ್ಯಾಷನ್ ಬಗ್ಗೆ ಯೋಚಿಸುತ್ತಾರೆ. ಹೊಲಿಗೆಗೆ ಕೆಲವು ಇತರೆ ಪಾರ್ಶ್ವಗಳಿವೆ, ಅವುಗಳು ಬಹಳ ಆಸಕ್ತಿದಾಯಕವಾಗಿವೆ.

ನೀವು ಒಳಾಂಗಣ ವಿನ್ಯಾಸವನ್ನು ಮಾಡುತ್ತಿದ್ದೀರಿ ಅಂದುಕೊಳ್ಳೋಣ. ಇಲ್ಲಿರುವಂತಹುದೇ ಫ್ಯಾಬ್ರಿಕ್‌ಗಳು ಮತ್ತು ಸಾಮಗ್ರಿಗಳನ್ನು ಬಳಸಲಾಗುತ್ತದೆ, ಆದರೆ ವಿಭಿನ್ನ ರೀತಿಗಳಲ್ಲಿ. ನೀವು ಬಟ್ಟೆಯನ್ನು ಹೇಗೆ ಕತ್ತರಿಸುವುದು ಎಂಬುದನ್ನು ಹಾಗೂ ವಿವಿಧ ರಚನೆಗಳನ್ನು ಮಾಡಲು ಮತ್ತು ಸೂಕ್ತವಾದ ರೀತಿಯಲ್ಲಿ ಹೊಲಿಯಲು ತಿಳಿದುಕೊಳ್ಳಬೇಕು. ಹೊಲಿಗೆಯ ಮೂಲಭೂತ ವಿಷಯವು ಒಂದೇ ರೀತಿಯಾಗಿರುತ್ತದೆ, ಬಳಕೆ ಮಾತ್ರ ಬದಲಾಗುತ್ತದೆ.

ಬಹಳಷ್ಟು ಇತರೆ ವೃತ್ತಿಗಳಿವೆ, ಅವು ಹೊಲಿಗೆ ತಿಳಿದಿದ್ದರೆ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತವೆ.

ಅತ್ಯಂತ ಮೋಜಿನ ರೀತಿಯಲ್ಲಿ ಕಲಿಯಿರಿ ಮತ್ತು ರಚಿಸಿ.

www.ushasew.com ರಲ್ಲಿ ನಾವು ನಿಮಗೆ ಅತ್ಯಂತ ಮೋಜಿನ ಮತ್ತು ಆಸಕ್ತಿದಾಯಕ ರೀತಿಯಲ್ಲಿ ಹೇಗೆ ಹೊಲಿಯುವುದು ಎಂಬುದನ್ನು ಕಲಿಸುತ್ತವೆ. ಮಾಹಿತಿಯುಕ್ತ ಮತ್ತು ಅನುಸರಿಸಲು ಸುಲಭವಾದ ವೀಡಿಯೊಗಳನ್ನು ನಾವು ಹೊಂದಿದ್ದೇವೆ. ಈ ಪ್ರಾಜೆಕ್ಟ್‌ಗಳು ನಿಮ್ಮ ಹೊಸ ಕೌಶಲ್ಯಗಳನ್ನು ಹೊರತರುತ್ತವೆ ಮತ್ತು ಪ್ರಯೋಜನಕಾರಿಯಾಗಿವೆ.

ಕಲಿಯಲು ಮತ್ತು ರಚಿಸಲು ನೀವು ಮೂಲಭೂತ ವಿಷಯಗಳೊಂದಿಗೆ ಆರಂಭಿಸಬೇಕು. ಒಮ್ಮೆ ನೀವು ಅವುಗಳಲ್ಲಿ ನಿಪುಣರಾದ ನಂತರ, ನಿಮ್ಮ ಹೊಸ ಕೌಶಲ್ಯವನ್ನು ಬಳಸಿ, ಅದ್ಭುತ ವಸ್ತುಗಳನ್ನು ರಚಿಸಬಹುದು. ನೀವು ವಸ್ತುಗಳನ್ನು ಮಾಡಲು ಆರಂಭಿಸುವ ವೀಡಿಯೊಗಳನ್ನು ಪ್ರಾಜೆಕ್ಟ್‌ಗಳೆಂದು ಕರೆಯಲಾಗುತ್ತದೆ. ಹಾಗೂ ನಿಮ್ಮ ಉತ್ಸುಕತೆಯನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ತೊಡಗಿಸಿಕೊಳ್ಳಲು ನಾವು ಬಹಳಷ್ಟು ವೀಡಿಯೊಗಳನ್ನು ಹೊಂದಿದ್ದೇವೆ.

ನಿಮಗೆ ಕಲಿಕಾ ಪ್ರಕ್ರಿಯೆಯ ಕಲ್ಪನೆಯನ್ನು ಒದಗಿಸಲು, ನೀವು ಹೇಗೆ ಆರಂಭಿಸಬೇಕೆಂಬುದು ಇಲ್ಲಿದೆ:

ಈ ಎಲ್ಲಾ ಪಾಠ ಮತ್ತು ವೀಡಿಯೊಗಳು 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಹಾಗಾಗಿ ನೀವು ಆರಂಭಿಸುವ ಮೊದಲು ನಿಮಗೆ ಹೆಚ್ಚು ಅನುಕೂಲಕರವಾದ ಭಾಷೆಯನ್ನು ಆರಿಸಿ.

ಉಷಾ ನಿಮಗಾಗಿ ವಿನ್ಯಾಸಗೊಳಿಸಲಾದ ಮೆಷಿನ್ಅನ್ನು ಹೊಂದಿದೆ.

ಉಷಾದಲ್ಲಿ ನಾವು ಪ್ರತಿಯೊಂದು ವಿಧದ ಬಳಕೆದಾರರಿಗೂ ಉಪಯುಕ್ತವಾದ ಹೊಲಿಗೆ ಮೆಷಿನ್‌ಗಳ ಶ್ರೇಣಿಯನ್ನು ತಯಾರಿಸಿದ್ದೇವೆ. ಆರಂಭಿಗರಿಂದ ಪರಿಣಿತ ವೃತ್ತಿಪರರವರೆಗೂ ಸರಿಹೊಂದುವ ಮೆಷಿನ್ಅನ್ನು ನಾವು ಹೊಂದಿದ್ದೇವೆ. ನಮ್ಮ ಮೆಷಿನ್‌ಗಳ ಶ್ರೇಣಿಯನ್ನು ಅವಲೋಕಿಸಿ ಮತ್ತು ನಿಮ್ಮ ಅವಶ್ಯಕತೆಗಳಿಗೆ ಒಪ್ಪುವ ಮೆಷಿನ್ಅನ್ನು ಆರಿಸಿ. ನೀವು ನಮ್ಮ ಗ್ರಾಹಕ ಸೇವಾ ಕಾರ್ಯಕರ್ತರೊಂದಿಗೆ ಮಾತನಾಡಲು ಬಯಸಿದಲ್ಲಿ, ಅವರು ನಿಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. www.ushasew.com ರಲ್ಲಿ ನಮ್ಮ ಉತ್ಪನ್ನಗಳ ಶ್ರೇಣಿಯನ್ನು ಅವಲೋಕಿಸಿ, ನಿಮಗೆ ಯಾವುದು ಇಷ್ಟವಾಗುತ್ತದೆಂದು ನೋಡಿ, ನಂತರ ನಮ್ಮ ವೆಬ್‌ಸೈ ಟ್‌ನಲ್ಲಿರುವ ಸ್ಟೋರ್ ಲೊಕೇಟರ್‌ಅನ್ನು ಬಳಸಿ ನಿಮ್ಮ ಹತ್ತಿರದ ಉಷಾ ಸ್ಟೋರ್‌ಅನ್ನು ಹುಡುಕಿ.

ನೀವು ಹೊಲಿಗೆಯನ್ನು ಆರಂಭಿಸಿದ ನಂತರ ಏನೆಲ್ಲಾ ರಚಿಸುತ್ತೀರೆಂದು ನೋಡಲು ನಾವು ಇಷ್ಟಪಡುತ್ತೇವೆ.
ಒಮ್ಮೆ ನೀವು ಹೊಲಿಗೆಯನ್ನು ಆರಂಭಿಸಿದ ನಂತರ, ನಾವು ನಿಮ್ಮ ರಚನೆಗಳನ್ನು ನೋಡಲು ಇಚ್ಛಿಸುತ್ತೇವೆ. ದಯವಿಟ್ಟು ಅವುಗಳನ್ನು ನಮ್ಮ ಯಾವುದೇ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. – (ಫೇಸ್‌ಬುಕ್), (ಇನ್ಸ್ಟಾಗ್ರಾಮ್), (ಟ್ವಿಟರ್), (ಯುಟ್ಯೂಬ್). ನೀವು ಅದನ್ನು ಏಕೆ ಮಾಡಿದಿರಿ, ಅದು ಯಾರಿಗಾಗಿ ಮತ್ತು ಅದನ್ನು ಹೇಗೆ ವಿಶೇಷವಾಗಿ ಮಾಡಿದಿರಿ ಎಂಬುದನ್ನು ನಮಗೆ ಹೇಳಿ.

ಮುಂದೆ ದೀರ್ಘ ಬೇಸಿಗೆಕಾಲ ಬರುತ್ತದೆ, ಆದ್ದರಿಂದ ನೀವು ತಂಪಗೆ ಮನೆಯಲ್ಲೇ ಇರಿ ಮತ್ತು ನಿಮ್ಮ ಪಾಠಗಳನ್ನು ಆರಂಭಿಸಿ.

 

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing Personalized Gifts & Saving Pocket Money

Today kids have a more interesting and active social life...

Leave your comment