Sewing Personalized Gifts & Saving Pocket Money

ಇಂದಿನ ಮಕ್ಕಳು ನಮಗಿಂತ ಹೆಚ್ಚು ಆಸಕ್ತಿದಾಯಕ ಮತ್ತು ಕ್ರಿಯಾಶೀಲ ಸಾಮಾಜಿಕ ಜೀವನವನ್ನು ಹೊಂದಿದ್ದಾರೆ. ಅವರನ್ನು ನಿರಂತರವಾಗಿ ಪಾರ್ಟಿಗಳು, ಬರ್ತ್‌ಡೇ ಗೆಟ್-ಟುಗೆದರ್‌ಗಳು ಮತ್ತು ಇತರೆ ಸಮಾರಂಭಗಳಿಗೆ ಆಹ್ವಾನಿಸಲಾಗುತ್ತದೆ. ಪ್ರತಿಯೊಬ್ಬರೂ ವಿಭಿನ್ನ ಉಡುಗೊರೆಗಳನ್ನು ನೀಡಬೇಕಾಗುತ್ತದೆ ಹಾಗೂ ಅದಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಇಲ್ಲೊಂದು ಹವ್ಯಾಸವಿದೆ, ಅದು ನಿಮಗೆ ಹಣ ಉಳಿಸಲು ಸಹಾಯ ಮಾಡುವುದು ಮಾತ್ರವಲ್ಲದೆ ನೀವು ಹೀರೊ ಎಂದೆನಿಸುವಂತೆ ಮಾಡುತ್ತದೆ. ಹೊಲಿಗೆಯನ್ನು ಕಲಿಯಿರಿ ಮತ್ತು ಸ್ವೀಕರಿಸುವವರಿಗೆ ಬಹಳ ಸ್ಪೆಷಲ್ ಎಂದೆನಿಸುವ ವಿಭಿನ್ನ ರೀತಿಯ ಉಡುಗೊರೆಗಳನ್ನು ತಯಾರಿಸಲು ಆರಂಭಿಸಿ.

ಪ್ರತಿಯೊಂದು ವೈಯಕ್ತೀಕರಿಸಿದ ಉಡುಗೊರೆಯು ಒಂದು ವಿಶೇಷ ಸಂದೇಶವಾಗಿರುತ್ತದೆ.

ಈಗ ಪ್ರತಿಯೊಬ್ಬರೂ ಅಂಗಡಿಗೆ ಹೋಗಿ, ಬೇಗನೆ ಏನಾದರೂ ಎತ್ತಿಕೊಂಡು, ಅದನ್ನು ಉಡುಗೊರೆಯಂತೆ ಸುತ್ತಿ, ಯಾರಿಗಾದರೂ ನೀಡಬಹುದು. ಇದು ಬಹುಶಃ ನಿಮ್ಮ ಪ್ರೀತಿ ಅಥವಾ ಪ್ರಶಂಸೆಯನ್ನು ತೋರಿಸುವ ಅತ್ಯಂತ ಅವೈಯಕ್ತಿಕ ವಿಧಾನವಾಗಿದೆ.

ನಿಮಗೆ ಹೊಲಿಯಲು ತಿಳಿದಿದ್ದರೆ, ನೀವು ಏನಾದರೂ ಉಡುಗೊರೆಗಳನ್ನು ಮಾಡಬಹುದು, ಅದು ಸ್ವೀಕರಿಸುವವರ ಜೀವನದ ಒಂದು ಭಾಗವಾಗುತ್ತದೆ. ಉದಾಹರಣೆಗಾಗಿ, ನಿಮ್ಮ ಸ್ನೇಹಿತ ಫುಟ್‌ಬಾಲ್ ಆಟಗಾರನಾಗಿದ್ದು ತನ್ನ ಸಾಸರ್ ಶೂಗಳನ್ನು ಇಷ್ಟಪಡುತ್ತಿದ್ದರೆ, ಒಂದು ಕೂಲ್ ಕ್ಯಾರಿ ಬ್ಯಾಗ್ ಅದರ ಮೇಲೆ ಆತನ ಹೆಸರು ಇರುವಂತೆ ತಯಾರಿಸಿ ನೀಡಿದರೆ ಅದು ಬಹಳ ಉಪಯುಕ್ತವಾಗಿರುತ್ತದೆ ಮತ್ತು ಅಮೂಲ್ಯವಾಗಿರುತ್ತದೆ. ಅಥವಾ ಅದು ಸರಳವಾದ ಆದರೆ ಆಕರ್ಷಕವಾದ ಒಂದು ಮೊಬೈಲ್ ಫೋನ್ ಕವರ್ ಸಹ ಆಗಿರಬಹುದು. ಇವೆಲ್ಲದಕ್ಕೆ ಅಂಗಡಿಯಲ್ಲಿ ದೊರೆಯುವ ಯಾವುದೂ ಸಮನಾಗಿರುವುದಿಲ್ಲ. ನೀವು ವಿಭಿನ್ನವಾಗಿರುವುದನ್ನು ಮಾಡಲು ಸಮಯ ತೆಗೆದುಕೊಂಡಿದ್ದೀರಿ ಮತ್ತು ಶ್ರಮ ವಹಿಸಿದ್ದೀರಿ ಹಾಗೂ ಅದನ್ನು ಸ್ವೀಕರಿಸುವವರ ಕಾಳಜಿವಹಿಸುತ್ತೀರಿ ಎಂಬ ಸಂದೇಶವನ್ನು ಅವು ನೀಡುತ್ತವೆ.

ವಿಭಿನ್ನವಾಗಿರುತ್ತದೆ ಮತ್ತು ನಿಮ್ಮ ಪಾಕೆಟ್ ಮನಿಯನ್ನು ಉಳಿತಾಯ ಮಾಡುತ್ತದೆ.
ಪಾಕೆಟ್ ಮನಿ ಯಾವಾಗಲೂ ಸೀಮಿತವಾಗಿರುತ್ತದೆಂದು ನಮಗೆಲ್ಲರಿಗೂ ತಿಳಿದಿದೆ. ನೀವು ಒಂದು ತಿಂಗಳಲ್ಲಿ ಅದನ್ನು ನಿಭಾಯಿಸಬಹುದು. ನಿಮ್ಮ ಸ್ವಂತ ಉಡುಗೊರೆಗಳನ್ನು ಮಾಡುವುದರಿಂದ ಜೀವನವು ಬಹಳ ಸುಲಭವಾಗುತ್ತದೆ. ಕಡಿಮೆ ಖರ್ಚಾಗುವ ಏನನ್ನಾದರೂ ಹೊಲಿಯಲು ನಿಮಗೆ ತಿಳಿದಿರುವಾಗ, ಅದನ್ನು ಖರೀದಿಸುವ ಅಗತ್ಯ ಏಕೆ ಬರುತ್ತದೆ. ನೀವು ಸ್ಮಾರ್ಟ್ ಆಗಿದ್ದು, ಮರುಬಳಕೆಯ ಸಾಮಗ್ರಿಗಳನ್ನು ಬಳಸುತ್ತಿದ್ದರೆ, ಅದು ಖರ್ಚನ್ನು ಇನ್ನೂ ಕಡಿಮೆ ಮಾಡುತ್ತದೆ. ಹಾಗಾಗಿ ನಿಮ್ಮ ಹಣ ಉಳಿತಾಯ ಮಾಡಿ ಮತ್ತು ಹೊಲಿಯಲು ಕಲಿಯಿರಿ.

ನಿಮಗೆ ನೆರವಾಗುವಂತಹ ಕೆಲವು ಆಲೋಚನೆಗಳು ಇಲ್ಲಿವೆ. ಒಂದು ಅದ್ಭುತ ಕ್ರಿಕೆಟ್ ಬ್ಯಾಟ್ಅನ್ನು ಬಹುಮಾನವಾಗಿ ಪಡೆದ ಒಬ್ಬ ಸ್ನೇಹಿತ ನಿಮಗಿದ್ದರೆ, ನೀವು ಅದಕ್ಕಾಗಿ ಒಂದು ಕೂಲ್ ಕವರ್‌ಅನ್ನು ಮಾಡಬಹುದು. ಇದಕ್ಕೆ ಬೇಕಿರುವುದಿಷ್ಟೇ ಸ್ವಲ್ಪ ಫ್ಯಾಬ್ರಿಕ್ ಮತ್ತು ಅದನ್ನು ಆತನ ಟಾಪ್ ಸ್ಕೋರ್‌ನಿಂದ ವೈಯಕ್ತೀಕರಿಸುವ ನಿಮ್ಮ ಕಲ್ಪನಾ ಶಕ್ತಿ. ಇನ್ನೂ ಒಂದು ಕೆಲಸವನ್ನು ಮಾಡಬಹುದು, ಬಣ್ಣದ ಬಟ್ಟೆಯಿಂದ ಅಕ್ಷರಗಳನ್ನು ಕತ್ತರಿಸಿ, ಆತನ ಮೆಚ್ಚಿನ ಆಟಗಾರನ ಹೆಸರು ಅಥವಾ ತಂಡದ ಹೆಸರನ್ನು ಕವರ್ ಮೇಲೆ ಬರೆಯಬಹುದು. ಇದು ನಿಮ್ಮ ಸ್ನೇಹಿತನಿಗೆ ಆತನ ಬ್ಯಾಟ್ಅನ್ನು ಸುರಕ್ಷಿತವಾಗಿರಿಸಲು ನೆರವಾಗುತ್ತದೆ ಮತ್ತು ಆತನನ್ನು ಫೀಲ್ಡ್‌ನಲ್ಲಿ ಅಂದವಾದ ಕಿಟ್ಅನ್ನು ಹೊಂದಿರುವ ವ್ಯಕ್ತಿಯಾಗುವಂತೆ ಮಾಡುತ್ತದೆ.

www.ushasew.com ರಲ್ಲಿ ಶಾಪಿಂಗ್ ಬ್ಯಾಗ್ಅನ್ನು ಮಾಡುವುದು ಹೇಗೆ ಎಂಬುದರ ಬಗ್ಗೆಯೂ ಸಹ ನಾವು ವಿವರವಾದ ಪಾಠವನ್ನು ಹೊಂದಿದ್ದೇವೆ. ನೀವು ಒಂದು ಹೆಜ್ಜೆ ಮುಂದಿರಿಸಿ, ಇವುಗಳನ್ನು ಆಸಕ್ತಿದಾಯಕವಾಗಿ ವೈಯಕ್ತೀಕರಿಸಬಹುದು. ಕುಚ್ಚುಗಳಂತಹ ಅಲಂಕಾರಿಕ ವಸ್ತುಗಳನ್ನು ಸೇರಿಸುವುದರ ಹೊರತಾಗಿ “ನಾನು ಭೂಮಿಯನ್ನು ಕಾಪಾಡುತ್ತಿದ್ದೇನೆ” ಇತ್ಯಾದಿ ಆಸಕ್ತಿಕರ ಸಂದೇಶಗಳನ್ನೂ ನೀವು ಬರೆಯಬಹುದು. ಅಥವಾ ನೀವು ಹೆಚ್ಚು ಹೊಸ ಆಲೋಚನೆಗಳನ್ನು ಮಾಡುವವರಾಗಿದ್ದರೆ, ಚೌಕಾಕಾರದ ಅಥವಾ ಆಯತಾಕಾರದ ಬ್ಯಾಗ್ಅನ್ನು ಮಾಡುವ ಬದಲಿಗೆ ಬಟ್ಟೆಯನ್ನು ಯಾವುದೇ ಆಸಕ್ತಿಕರ ಆಕಾರದಲ್ಲಿ ಕತ್ತರಿಸಿ. ಅದು ಭೂಮಿಯನ್ನು ಪ್ರತಿನಿಧಿಸಲು ವೃತ್ತಾಕಾರವಾಗಿರಬಹುದು!ವೀಡಿಯೊದಲ್ಲಿ ನೀವು ನೋಡುವ ಹೊಲಿಗೆ ಸೂಚನೆಗಳು ಎಲ್ಲಾ ಆಕಾರಗಳು ಮತ್ತು ಗಾತ್ರಗಳಿಗೆ ಅನ್ವಯಿಸುತ್ತವೆ. ನೀವು ಸ್ವಲ್ಪ ಬುದ್ಧಿವಂತಿಕೆಯನ್ನು ಬಳಸಬೇಕಾಗುತ್ತದೆ ಅಷ್ಟೇ. ಈಗ ಈ ಬ್ಯಾಗ್‌ಗಳು ಎಲ್ಲದಕ್ಕಿಂತ ಉತ್ತಮ ಉಡುಗೊರೆಗಳಾಗುತ್ತವೆ. ಅವು ಕಾರ್ಯೋಪಯೋಗಿ ಮತ್ತು ಪ್ರಯೋಜನಕಾರಿಯಾಗಿರುತ್ತವೆ. ಅಲ್ಲದೆ ಅವು ಪರಿಸರವನ್ನು ಸ್ವಚ್ಛವಾಗಿರಿಸಲು ನೆರವಾಗುತ್ತವೆ.

ದಯವಿಟ್ಟು ಮೆಟೀರಿಯಲ್ ಮತ್ತು ಫ್ಯಾಬ್ರಿಕ್ಅನ್ನು ಮರುಬಳಕೆ ಮಾಡಿ. ಹಳೆಯ ಟಿ-ಶರ್ಟ್‌ಅನ್ನು ಎಸೆಯಬೇಡಿ, ಅದರಿಂದ ಕೆಲವು ಹೊಲಿಗೆಗಳನ್ನು ಹಾಕಿ ಒಂದು ಸಣ್ಣ ಬ್ಯಾಗ್ಅನ್ನು ಮಾಡಬಹುದು. ಹಳೆಯ ಬೆಡ್ ಶೀಟ್ ನಿಮಗೆ ಕೆಲವು ಮೀಟರ್‌ಗಳ ಫ್ಯಾಬ್ರಿಕ್ಅನ್ನು ಒದಗಿಸಬಹುದು. ಅದು ಅದ್ಭುತ ಮತ್ತು ಮಾಡಲು ಸುಲಭವಾದ ಉಡುಗೊರೆಗಳನ್ನು ತಯಾರಿಸಲು ಸಾಕಾಗುತ್ತದೆ. ಹೀಗೇ ಮುಂದುವರಿಯಲು ದಯವಿಟ್ಟು ಜಿಪ್ಪರ್ಡ್ ಪೌಚ್ ಪ್ರಾಜೆಕ್ಟ್ ವೀಡಿಯೊವನ್ನು ವೀಕ್ಷಿಸಿ. ಅದು ನಿಮಗೆ ಎಲ್ಲಾ ಹಂತಗಳನ್ನು ತಿಳಿಸಿಕೊಡುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ಒಂದು ರಚನೆಯನ್ನು ಹೇಗೆ ಮಾಡುವುದು ಎಂಬುದನ್ನು ತೋರಿಸುತ್ತದೆ.

ಏನು ಮಾಡಬೇಕೆಂಬುದರ ಬಗ್ಗೆ ನೀವು ಅನೇಕ ಆಲೋಚನೆಗಳನ್ನು ಹೊಂದಿದ್ದೀರೆಂದು ನಮಗೆ ತಿಳಿದಿದೆ. ಇಲ್ಲಿರುವ ಚಾತುರ್ಯವೇನೆದಂರೆ ನಿಮಗೆ ಸ್ವತಂತ್ರವಾಗಿ ಆಲೋಚನೆಯನ್ನು ಮಾಡಲು ಬಿಡುವುದು ಮತ್ತು ನೀವು ಆಲೋಚಿಸಿದ್ದನ್ನು ಹೇಗೆ ಕಾರ್ಯಗತಗೊಳಿಸುತ್ತೀರಿ ಎಂಬುದನ್ನು ಯೋಜಿಸುವುದು.

ಅತ್ಯಂತ ಮೋಜಿನ ರೀತಿಯಲ್ಲಿ ಕಲಿಯಿರಿ ಮತ್ತು ರಚಿಸಿ.

www.ushasew.com ರಲ್ಲಿ ನಾವು ನಿಮಗೆ ಅತ್ಯಂತ ಮೋಜಿನ ಮತ್ತು ಆಸಕ್ತಿದಾಯಕ ರೀತಿಯಲ್ಲಿ ಹೇಗೆ ಹೊಲಿಯುವುದು ಎಂಬುದನ್ನು ಕಲಿಸುತ್ತವೆ. ಮಾಹಿತಿಯುಕ್ತ ಮತ್ತು ಅನುಸರಿಸಲು ಸುಲಭವಾದ ವೀಡಿಯೊಗಳನ್ನು ನಾವು ಹೊಂದಿದ್ದೇವೆ. ಈ ಪ್ರಾಜೆಕ್ಟ್‌ಗಳು ನಿಮ್ಮ ಹೊಸ ಕೌಶಲ್ಯಗಳನ್ನು ಹೊರತರುತ್ತವೆ ಮತ್ತು ಪ್ರಯೋಜನಕಾರಿಯಾಗಿವೆ.

ಕಲಿಯಲು ಮತ್ತು ರಚಿಸಲು ನೀವು ಮೂಲಭೂತ ವಿಷಯಗಳೊಂದಿಗೆ ಆರಂಭಿಸಬೇಕು. ಒಮ್ಮೆ ನೀವು ಅವುಗಳಲ್ಲಿ ನಿಪುಣರಾದ ನಂತರ, ನಿಮ್ಮ ಹೊಸ ಕೌಶಲ್ಯವನ್ನು ಬಳಸಿ, ಅದ್ಭುತ ವಸ್ತುಗಳನ್ನು ರಚಿಸಬಹುದು. ನೀವು ವಸ್ತುಗಳನ್ನು ಮಾಡಲು ಆರಂಭಿಸುವ ವೀಡಿಯೊಗಳನ್ನು ಪ್ರಾಜೆಕ್ಟ್‌ಗಳೆಂದು ಕರೆಯಲಾಗುತ್ತದೆ. ಹಾಗೂ ನಿಮ್ಮ ಉತ್ಸುಕತೆಯನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ತೊಡಗಿಸಿಕೊಳ್ಳಲು ನಾವು ಬಹಳಷ್ಟು ವೀಡಿಯೊಗಳನ್ನು ಹೊಂದಿದ್ದೇವೆ.

ನಿಮಗೆ ಕಲಿಕಾ ಪ್ರಕ್ರಿಯೆಯ ಕಲ್ಪನೆಯನ್ನು ಒದಗಿಸಲು, ನೀವು ಹೇಗೆ ಆರಂಭಿಸಬೇಕೆಂಬುದು ಇಲ್ಲಿದೆ:

ಈ ಎಲ್ಲಾ ಪಾಠ ಮತ್ತು ವೀಡಿಯೊಗಳು 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಹಾಗಾಗಿ ನೀವು ಆರಂಭಿಸುವ ಮೊದಲು ನಿಮಗೆ ಹೆಚ್ಚು ಅನುಕೂಲಕರವಾದ ಭಾಷೆಯನ್ನು ಆರಿಸಿ.

ಉಷಾ ನಿಮಗಾಗಿ ವಿನ್ಯಾಸಗೊಳಿಸಲಾದ ಮೆಷಿನ್ಅನ್ನು ಹೊಂದಿದೆ.

ಉಷಾದಲ್ಲಿ ನಾವು ಪ್ರತಿಯೊಂದು ವಿಧದ ಬಳಕೆದಾರರಿಗೂ ಉಪಯುಕ್ತವಾದ ಹೊಲಿಗೆ ಮೆಷಿನ್‌ಗಳ ಶ್ರೇಣಿಯನ್ನು ತಯಾರಿಸಿದ್ದೇವೆ. ಆರಂಭಿಗರಿಂದ ಪರಿಣಿತ ವೃತ್ತಿಪರರವರೆಗೂ ಸರಿಹೊಂದುವ ಮೆಷಿನ್ಅನ್ನು ನಾವು ಹೊಂದಿದ್ದೇವೆ. ನಮ್ಮ ಮೆಷಿನ್‌ಗಳ ಶ್ರೇಣಿಯನ್ನು ಅವಲೋಕಿಸಿ ಮತ್ತು ನಿಮ್ಮ ಅವಶ್ಯಕತೆಗಳಿಗೆ ಒಪ್ಪುವ ಮೆಷಿನ್ಅನ್ನು ಆರಿಸಿ. ನೀವು ನಮ್ಮ ಗ್ರಾಹಕ ಸೇವಾ ಕಾರ್ಯಕರ್ತರೊಂದಿಗೆ ಮಾತನಾಡಲು ಬಯಸಿದಲ್ಲಿ, ಅವರು ನಿಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. www.ushasew.com ರಲ್ಲಿ ನಮ್ಮ ಉತ್ಪನ್ನಗಳ ಶ್ರೇಣಿಯನ್ನು ಅವಲೋಕಿಸಿ, ನಿಮಗೆ ಯಾವುದು ಇಷ್ಟವಾಗುತ್ತದೆಂದು ನೋಡಿ, ನಂತರ ನಮ್ಮ ವೆಬ್‌ಸೈ ಟ್‌ನಲ್ಲಿರುವ ಸ್ಟೋರ್ ಲೊಕೇಟರ್‌ಅನ್ನು ಬಳಸಿ ನಿಮ್ಮ ಹತ್ತಿರದ ಉಷಾ ಸ್ಟೋರ್‌ಅನ್ನು ಹುಡುಕಿ.

ನೀವು ಹೊಲಿಗೆಯನ್ನು ಆರಂಭಿಸಿದ ನಂತರ ಏನೆಲ್ಲಾ ರಚಿಸುತ್ತೀರೆಂದು ನೋಡಲು ನಾವು ಇಷ್ಟಪಡುತ್ತೇವೆ.
ಒಮ್ಮೆ ನೀವು ಹೊಲಿಗೆಯನ್ನು ಆರಂಭಿಸಿದ ನಂತರ, ನಾವು ನಿಮ್ಮ ರಚನೆಗಳನ್ನು ನೋಡಲು ಇಚ್ಛಿಸುತ್ತೇವೆ. ದಯವಿಟ್ಟು ಅವುಗಳನ್ನು ನಮ್ಮ ಯಾವುದೇ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. – (ಫೇಸ್ಬುಕ್), (ಇನ್ಸ್ಟಾಗ್ರಾಮ್), (ಟ್ವಿಟರ್), (ಯುಟ್ಯೂಬ್). ನೀವು ಅದನ್ನು ಏಕೆ ಮಾಡಿದಿರಿ, ಅದು ಯಾರಿಗಾಗಿ ಮತ್ತು ಅದನ್ನು ಹೇಗೆ ವಿಶೇಷವಾಗಿ ಮಾಡಿದಿರಿ ಎಂಬುದನ್ನು ನಮಗೆ ಹೇಳಿ.

ಮುಂದೆ ದೀರ್ಘ ಬೇಸಿಗೆಕಾಲ ಬರುತ್ತದೆ, ಆದ್ದರಿಂದ ನೀವು ತಂಪಗೆ ಮನೆಯಲ್ಲೇ ಇರಿ ಮತ್ತು ನಿಮ್ಮ ಪಾಠಗಳನ್ನು ಆರಂಭಿಸಿ.

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ.Read More.....

Leave your comment