The Incredible Usha Janome Memory Craft 15000
ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ ಮತ್ತು ಸಂತೋಷಭರಿತ ಒಬ್ಬ ಟೈಲರ್‌ಅನ್ನು ಮಾಡುತ್ತದೆ. ಹೇಗೆ ಎಂದು ನೀವು ಆಶ್ಚರ್ಯಪಡುತ್ತಿದ್ದರೆ, ಇದನ್ನು ಓದಿ.
ಮೆಮೊರಿ ಕ್ರಾಫ್ಟ್ 15000 ಎಂದರೇನು?
ಮೆಮೊರಿ ಕ್ರಾಫ್ಟ್ ಸರಣಿಯನ್ನು ಹೆಚ್ಚಾಗಿ ಕಂಪ್ಯೂಟರೀಕೃತ ಡ್ರೀಮ್ ಮೆಷಿನ್‌ಗಳೆಂದು ಕರೆಯಲಾಗುತ್ತದೆ. ಮೆಮೊರಿ ಕ್ರಾಫ್ಟ್ 15000 ಈ ಶ್ರೇಣಿಯ ತುತ್ತತುದಿಯಲ್ಲಿದೆ, ಆದ್ದರಿಂದ ನಾವು ಇದರ ಬಗ್ಗೆ ಮಾತನಾಡುವಾಗ ಏಕೆ ಉತ್ಸುಕರಾಗುತ್ತೇವೆ ಎಂಬುದನ್ನು ನೀವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ವೈಶಿಷ್ಟ್ಯತೆಗಳ ವಿಷಯದಲ್ಲಿ 15000 ಎಲ್ಲವನ್ನೂ ಹೊಂದಿದೆ. ವೈಫೈ ಕನೆಕ್ಟ್, ಪ್ರತಿ ನಿಮಿಷಕ್ಕೆ 1,000 ಹೊಲಿಗೆಗಳಷ್ಟು ಹೊಲಿಗೆ ವೇಗ, ಕ್ವಿಲ್ಟರ್‌ಗಾಗಿ ವಿಶೇಷ ವಿನ್ಯಾಸಗಳನ್ನು ವಿನ್ಯಾಸಗೊಳಿಸಲಾಗಿದೆ – ಅವುಗಳೆಂದರೆ ವಿಶೇಷ ಹೊಲಿಗೆಗಳು, ಬಿಲ್ಟ್ ಇನ್ ಸಾಫ್ಟ್‌ವೇರ್ ಮತ್ತು ಇನ್ನೂ ಅನೇಕ. ಆದರೆ ಇಲ್ಲಿ ನಾವು ಅದರ ವೈಶಿಷ್ಟ್ಯತೆಗಳ ಉದ್ದ ಪಟ್ಟಿಯನ್ನು ಚರ್ಚಿಸುವುದಿಲ್ಲ. ನೀವು ಅದರಿಂದ ಏನೆಲ್ಲಾ ಮಾಡಬಹುದು ಎಂಬುದರಿಂದ ನಿಮ್ಮ ಉತ್ಸುಕತೆಯನ್ನು ಹೆಚ್ಚಿಸಲು ನಾವು ಬಯಸುತ್ತೇವೆ.
ವೈಫೈ ಕನೆಕ್ಷನ್‌ನ ಪ್ರಯೋಜನಗಳು.
ಇದು ಡಿಜಿಟಲ್ ಯುಗ. ಹೆಚ್ಚಿನ ವಿನ್ಯಾಸಕರು ಕಂಪ್ಯೂಟರ್‌ಗಳು ಮತ್ತು ಐಪ್ಯಾಡ್‌ಗಳಲ್ಲಿ ಕೆಲಸ ಮಾಡುತ್ತಾರೆ. ಈಗ ಮೆಮೊರಿ ಕ್ರಾಫ್ಟ್ 15000 ದಿಂದ ನೀವು ನಿಮ್ಮ ಐಪ್ಯಾಡ್ ನಿಮ್ಮ ಹೊಲಿಗೆ ಮೆಷಿನ್‌ನೊಂದಿಗೆ ‘ಮಾತನಾಡುವಂತೆ’ ಮಾಡಬಹುದು. ನೀವು ವಿನ್ಯಾಸಗಳನ್ನು ವರ್ಗಾಯಿಸಬಹುದು, ನಂತರ ಬಿಲ್ಟ್ ಇನ್ ಸಾಫ್ಟ್‌ವೇರ್ ಅದನ್ನು ವಶಕ್ಕೆ ತೆಗೆದುಕೊಳ್ಳುತ್ತದೆ. ನೀವು ನಿಮ್ಮ ವಿನ್ಯಾಸವನ್ನು ಹೊಲಿಯಬಹುದು ಅಥವಾ ಎಂಬ್ರಾಯ್ಡರ್ ಮಾಡಬಹುದು ಮತ್ತು ಅವು ಜೀವಂತವಾಗಿರುವುದನ್ನು ನೋಡಬಹುದು. ಇವೆಲ್ಲವೂ ಕೆಲವು ಬಟನ್‌ಗಳ ಕ್ಲಿಕ್‌ನಿಂದ ಸಾಧ್ಯ.
ಇದು ವಿನ್ಯಾಸಗಳನ್ನು ಗ್ರಾಹಕೀಯಗೊಳಿಸಲು ಉತ್ತಮ. ನೀವು ಮಾಡಿದ ಲೋಗೊಗಳು ಮತ್ತು ವಿನ್ಯಾಸಗಳನ್ನು ಎಂಬ್ರಾಯ್ಡರ್ ಮಾಡಬಹುದು, ವಿಶೇಷ ಹೊಲಿಗೆ ಪ್ಯಾಟರ್ನ್‌ಗಳನ್ನು ಸೇರಿಸಬಹುದು ಮತ್ತು ಏನನ್ನೂ ರಿಸೆಟ್ ಮಾಡದೆ ಅದನ್ನೇ ಪುನರಾವರ್ತಿಸಬಹುದು. ಒಮ್ಮೆ ನೀವು ಕಮಾಂಡ್‌ಗಳನ್ನು ಫೀಡ್ ಮಾಡಿದ ನಂತರ, ಮೆಷಿನ್ ನೀವು ನಿಲ್ಲಿಸಲು ಹೇಳುವವರೆಗೆ ಕೆಲಸ ಮಾಡುತ್ತಾ ಇರುತ್ತದೆ.
ಸೂಪರ್ ಫಾಸ್ಟ್ ಹೊಲಿಗೆ ವೇಗ (ಪ್ರತಿ ನಿಮಿಷಕ್ಕೆ 1500 ಹೊಲಿಗೆಗಳು) ಮತ್ತು ದೊಡ್ಡ ಎಂಬ್ರಾಯ್ಡರಿ ಜಾಗ (230 ಮಿಮೀ x 300 ಮಿಮೀ) ಇವುಗಳಿಂದ ನೀವು ದೊಡ್ಡದನ್ನು ಯೋಚಿಸಬಹುದು ಮತ್ತು ವೇಗವಾಗಿ ಕಾರ್ಯಗತಗೊಳಿಸಬಹುದು.
ದೊಡ್ಡ ಸ್ಕ್ರೀನ್ ಅನುಭವ
ಮೆಮೊರಿ ಕ್ರಾಫ್ಟ್ 15000 ರಲ್ಲಿ ನೀವು 9 ಇಂಚಿನ ದೊಡ್ಡ ಸ್ಕ್ರೀನ್ಅನ್ನು ನೋಡಬಹುದು. ಇದು ನಿಮ್ಮ ಕಂಟ್ರೋಲ್ ಪ್ಯಾನೆಲ್. ಇಲ್ಲಿಂದ ನೀವು ಎಲ್ಲಾ ವೈಶಿಷ್ಟ್ಯತೆಗಳನ್ನು ಪ್ರವೇಶಿಸಬಹುದು. ಇದು ಈ ಮೆಷಿನ್‌ನ ಬಳಕೆಯನ್ನು ನಿಜವಾಗಿಯೂ ಸರಳಗೊಳಿಸುತ್ತದೆ. ಇದು ಟ್ಯಾಬ್ಲೆಟ್‌ನಲ್ಲಿ ಕೆಲಸ ಮಾಡುವಂತೆಯೇ ಇರುತ್ತದೆ. ನಿಮಗೆ ಈ ಸ್ಕ್ರೀನ್ ಬಳಸುವಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಯಾವುದಾದರೂ ಮಗುವಿನಲ್ಲಿ ಸಹಾಯ ಮಾಡಲು ಕೇಳಿ. ಇಂದಿನ ಮಕ್ಕಳು ಕಂಪ್ಯೂಟರ್ ಬಳಸುವುದರಲ್ಲಿ ಹೆಚ್ಚು ಉತ್ತಮರಾಗಿರುತ್ತಾರೆ. ಎಲ್ಲಾ ಸಾಫ್ಟ್‌ವೇರ್‌ಅನ್ನು ಸರಳ ನಿಯಂತ್ರಣವನ್ನು ಹೊಂದಲು ವಿನ್ಯಾಸಗೊಳಿಸಲಾಗಿದೆ.
ಈ ದೊಡ್ಡ ಸ್ಕ್ರೀನ್‌ನ ಅತ್ಯುತ್ತಮ ವಿಷಯವೇನೆಂದರೆ ನೀವು ನಿಮ್ಮ ವಿನ್ಯಾಸಗಳನ್ನು ಅದರ ಮೇಲೆ ನೋಡಬಹುದು. ಅಲ್ಲದೆ ಅದನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ನಿರ್ಧರಿಸಬಹುದು. ನೀವು ಸೂಕ್ತವಾದ ಫಲಿತಾಂಶವನ್ನು ಪಡೆಯಲು ಬಣ್ಣಗಳನ್ನು ಆರಿಸಬಹುದು ಮತ್ತು ಇತರೆ ಟೂಲ್‌ಗಳನ್ನು ಬಳಸಿಕೊಳ್ಳಬಹುದು.
ಒಂದು ಹೊಲಿಯುವ ಕಂಪ್ಯೂಟರ್‌ನ ನಿಖರತೆ.
ಹೊಲಿಯುವ ಒಂದು ಕಂಪ್ಯೂಟರ್ ಈ ಹೊಲಿಗೆ ಮೆಷಿನ್‌ಗೆ ಒಂದು ಉತ್ತಮ ವಿವರಣೆಯಾಗಿದೆ. ಇದರಲ್ಲಿ ಇನ್‌ಸ್ಟಾಲ್ ಮಾಡಿದ ಸಾಫ್ಟ್‌ವೇರ್ ಚಿತ್ರಗಳನ್ನು ಕುಶಲತೆಯಿಂದ ಬಳಸಲು ಮಾಡಲು ಅವಕಾಶ ನೀಡುತ್ತದೆ. ನೀವು ಮರುಗಾತ್ರಗೊಳಿಸಬಹುದು, ಮಾರ್ಪಡಿಸಬಹುದು, ಫ್ಲಿಪ್ ಮಾಡಬಹುದು, ಪ್ರತಿಬಿಂಬಿಸಬಹುದು, ಸರಿಸಬಹುದು, ತಿರುಗಿಸಬಹುದು, ಕಟ್ ಮತ್ತು ಪೇಸ್ಟ್ ಮಾಡಬಹುದು, ಸಾಲಾಗಿ ಜೋಡಿಸಬಹುದು ಮತ್ತು ಇನ್ನೂ ಅನೇಕ ಕೆಲಸಗಳನ್ನು ಮಾಡಬಹುದು. ಹೆಚ್ಚುಕಡಿಮೆ ಎಲ್ಲಾ ಕಮಾಂಡ್‌ಗಳು ನಿಗದಿತ ಕಂಪ್ಯೂಟರ್ ಸಾಫ್ಟ್‌ವೇರ್‌ನಂತೆಯೇ ಇರುತ್ತವೆ. ಹಾಗಾಗಿ ಅವುಗಳನ್ನು ಬಳಸುವುದು ಸುಲಭ.
ಜೊತೆಗೆ, ಅಕ್ಯುಸ್ಕೆಚ್‌ನಂತಹ ವಿಶೇಷ ಸಾಫ್ಟ್‌ವೇರ್‌ಗಳಿವೆ. ಇದು ನಿಮ್ಮ ವಿನ್ಯಾಸಗಳನ್ನು ಎಂಬ್ರಾಯ್ಡರಿ ಆಗಿ ಪರಿವರ್ತಿಸುತ್ತದೆ. ಇದು ಇದನ್ನು ಸ್ವಯಂಚಾಲಿತವಾಗಿ ಮಾಡುತ್ತದೆ, ಆದರೂ ನೀವು ಅಂತಿಮವಾಗಿ ಹೊಲಿಯುವುದರ ಮೇಲೆ ನಿಮಗೆ ಒಟ್ಟು ನಿಯಂತ್ರಣವನ್ನು ಹೊಂದಲು ಅವಕಾಶ ನೀಡುತ್ತದೆ.
ಈ ಎಲ್ಲಾ ತಂತ್ರಜ್ಞಾನವು ಅದ್ಭುತ ನಿಖರತೆಯನ್ನು ಒದಗಿಸುತ್ತದೆ. ನೀವು ಮಾಡುವ ಕೆಲಸವು ಅತ್ಯುತ್ತಮ ಮತ್ತು ಅಚ್ಚುಕಟ್ಟಾದ ಶೈಲಿಯನ್ನು ಹೊಂದಿರುತ್ತದೆ. ಅದು ಎಂಬ್ರಾಯ್ಡರಿಯಾಗಿರಲಿ ಅಥವಾ ಹೊಲಿಗೆಯಾಗಿರಲಿ. ನೀವು ಮೊದಲ ಬಾರಿ ಮತ್ತು ನೂರನೇ ಪೀಸ್ ಹೊಲಿಯುವಾಗಲೂ ಪರಿಪೂರ್ಣ ಫಿನಿಶ್ಅನ್ನು ಪಡೆಯಬಹುದು. ಪ್ರತಿಯೊಂದೂ ಒಂದೇ ರೀತಿಯಾಗಿರುತ್ತದೆ.
ಮೆಮೊರಿ ಕ್ರಾಫ್ಟ್ ಶ್ರೇಣಿಯ ಇತರೆ ಮೆಷಿನ್‌ಗಳು
ಮೆಮೊರಿ ಕ್ರಾಫ್ಟ್ 15000 ಈ ಶ್ರೇಣಿಯಲ್ಲಿ ತುತ್ತತುದಿಯಲ್ಲಿದ್ದರೆ, ಅದರ ಜೊತೆಗೆ ಇತರೆ ಹೊಲಿಗೆ ಮೆಷಿನ್‌ಗಳೂ ಇವೆ. ಆ ಶ್ರೇಣಿಯು ಹೀಗಿದೆ – ಮೆಮೊರಿ ಕ್ರಾಫ್ಟ್ 200ಇ, ಮೆಮೊರಿ ಕ್ರಾಫ್ಟ್ 450ಇ ಮತ್ತು ಮೆಮೊರಿ ಕ್ರಾಫ್ಟ್ 9900. ಈ ಎಲ್ಲಾ ಮೆಷಿನ್‌ಗಳು ಡಿಜಿಟಲ್ ಆಗಿ ಸಕ್ರಿಯಗೊಂಡಿವೆ ಹಾಗೂ ಡಿಜಿಟೈಜರ್ ಜೆಆರ್‌ನೊಂದಿಗೆ ಬರುತ್ತವೆ. ಪ್ರತಿಯೊಂದು ಒಂದಕ್ಕಿಂತ ಒಂದು ಉತ್ತಮವಾಗಿದೆ, ಆದ್ದರಿಂದ ನೀವು ಅವುಗಳ ಗುಣಲಕ್ಷಣಗಳೆಲ್ಲವನ್ನು ತಿಳಿದುಕೊಳ್ಳಬೇಕು ಮತ್ತು ನಿಮಗೆ ಉತ್ತಮವಾಗಿ ಸರಿಹೊಂದುವುದನ್ನು ಆರಿಸಬೇಕು. ಉಷಾ ಜಾನೊಮ್ ಮೆಮರಿ ಕ್ರಾಫ್ಟ್ ಶ್ರೇಣಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ..
ನಿಮಗೆ ಹೆಚ್ಚು ಮಾಹಿತಿ ಬೇಕಿದ್ದಲ್ಲಿ ಅಥವಾ ನಮ್ಮ ಮಾರಾಟ ಪ್ರತಿನಿಧಿಯೊಂದಿಗೆ ಮಾತನಾಡಲು ಬಯಸಿದಲ್ಲಿ, www.ushasew.com. ಮೇಲೆ ಕ್ಲಿಕ್ ಮಾಡಿ. ನೀವು ಸೈಟ್‌ನಲ್ಲಿ ಸ್ಟೋರ್ ಲೊಕೇಟರ್‌ಅನ್ನು ಮತ್ತು ನಮ್ಮ ಗ್ರಾಹಕ ಸೇವಾ ಸಂಖ್ಯೆಗಳನ್ನು ಪಡೆಯುತ್ತೀರಿ. ಅಲ್ಲದೆ ನೀವು ಉಳಿದ ಉಷಾ ಹೊಲಿಗೆ ಮೆಷಿನ್ ಶ್ರೇಣಿಯನ್ನೂ ಅವಲೋಕಿಸಬಹುದು.