14 Sewing terms we bet you did not know

ಹೊಲಿಗೆಯು ಬಹಳ ಹಿಂದಿನಿಂದಲೂ ಇದೆ ಹಾಗೂ ಎಲ್ಲಾ ಕಲೆಗಳಂತೆ ಅದು ತನ್ನದೇ ಆದ ಶಬ್ದಕೋಶವನ್ನು ಹೊಂದಿದೆ. ಅವುಗಳಲ್ಲಿ ಕೆಲವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಹಾಗೂ ಪದಗಳು ಸ್ವತಃ ಕ್ರಿಯೆಯನ್ನು ವಿವರಿಸುತ್ತವೆ. ಆದರೆ ಮತ್ತೆ ಕೆಲವು ವಿಭಿನ್ನವಾಗಿವೆ ಹಾಗೂ ನಿಮಗೆ ಸ್ವಲ್ಪ ಕಷ್ಟವಾಗುತ್ತದೆ.

ಹೆಚ್ಚು ಆಸಕ್ತಿದಾಯಕ ಕೆಲವು ಹೊಲಿಗೆ ಪದಗಳ ಪಟ್ಟಿಯೊಂದು ಇಲ್ಲಿದೆ. ನೀವು ಮುಂಚೆ ಅವುಗಳನ್ನು ಕೇಳಿದ್ದೀರಾ ಅಥವಾ ಓದಿದ್ದೀರಾ ಎಂದು ನೋಡಿ.

ಪ್ರೆಸ್ಸರ್ ಫೂಟ್: ಇದು ಮೇಲೆ ಕಾಲಿಟ್ಟು ಹೊಲಿಗೆ ಮೆಷಿನ್ ಕೆಲಸ ಮಾಡುವಂತೆ ಮಾಡುವ ನೆಲದ ಮೇಲಿರುವ ಫೂಟ್ ಪೆಡಲ್‌ನಂತೆ ಅಲ್ಲ. ಇದು ಹೊಲಿಗೆ ಮೆಷಿನ್‌ನ ಭಾಗವಾಗಿದ್ದು, ಹೊಲಿಯುವಾಗ ಫ್ಯಾಬ್ರಿಕ್ಅನ್ನು ಸ್ಥಿರವಾಗಿ ಹಿಡಿದುಕೊಳ್ಳುತ್ತದೆ. ಲಿವರ್ ಅಥವಾ ಬಟನ್‌ನಿಂದ ಇದನ್ನು ಫ್ಯಾಬ್ರಿಕ್‌ಗಿಂತ ಮೇಲೆ ಮತ್ತು ಕೆಳಗೆ ಎಳೆಯಬಹುದು.

ಫೀಡ್ ಡಾಗ್: ಇದು ಸ್ಟಿಚ್ ಪ್ಲೇಟ್ ಕೆಳಗಡೆ ಇರುವ ಹಲ್ಲಿನಂತ ಚಾಚುಗಳಿರುವ ಲೋಹದ ಚೂರು, ಇದು ಫ್ಯಾಬ್ರಿಕ್ಅನ್ನು ಮೇಲೆ ಮತ್ತು ಕೆಳಗೆ ಸರಿಸುತ್ತದೆ.

ಡಾರ್ಟ್‌ಗಳು: ಇದು ಒಂದು ಬೆಣೆಯಾಕಾರದ ಫೋಲ್ಡ್, ಇದನ್ನು ಗಾರ್ಮೆಂಟ್ ಉತ್ತಮವಾಗಿ ಫಿಟ್ ಆಗುವಂತೆ ಮಾಡಲು ಪ್ಯಾಟರ್ನ್‌ಗಳನ್ನು ಆಕಾರಗೊಳಿಸಲು ಬಳಸಲಾಗುತ್ತದೆ.

ಫ್ಯಾಬ್ರಿಕ್ ಗ್ರೇನ್: ಫ್ಯಾಬ್ರಿಕ್ಅನ್ನು ರಚಿಸಲು ಹೆಣೆದ ಅಥವಾ ಒಟ್ಟುಗೂಡಿಸಿದ ಫೈಬರ್‌ಗಳ ಓರಿಯಂಟೇಶನ್. ಗ್ರೇನ್ ಸೆಲ್ವೆಡ್ಜ್‌ಗೆ ಸಮಾಂತರವಾಗಿ ಮತ್ತು ಲಂಬವಾಗಿ ಸಾಗುವ ಸಾಲುಗಳನ್ನು ರಚಿಸುತ್ತದೆ.

ಸೆಲ್ವೆಡ್ಜ್‌: ಗ್ರೇನ್‌ನೊಂದಿಗೆ ಅಂಚಿನುದ್ದಕ್ಕೂ ಸಾಗುವ ಕಚ್ಚಾ ಫ್ಯಾಬ್ರಿಕ್‌ನ ಅಂಚುಗಳು. ಫ್ಯಾಬ್ರಿಕ್ ಒಂದು ಸೆಲ್ವೆಡ್ಜ್‌ ಅಂಚನ್ನು ಹೊಂದಿರುತ್ತದೆ, ಹಾಗಾಗಿ ಅದು ಮಾರಾಟವಾಗುವುದಕ್ಕಿಂತ ಮೊದಲು ಫ್ರೇ ಆಗುವುದಿಲ್ಲ.

ಅಪ್ಲಿಕ್: ಒಂದು ಪೀಸ್ ಫ್ಯಾಬ್ರಿಕ್ಅನ್ನು ಇನ್ನೊಂದು ಪೀಸ್ ಫ್ಯಾಬ್ರಿಕ್‌ಗೆ ಹೊಲಿಯುವ ಪ್ರಕ್ರಿಯೆ, ನೀವು ಜೋಡಿಸುವ ಆಕಾರದ ಅಂಚುಗಳಿಗೆ ಹತ್ತಿರದಲ್ಲಿ ಹೊಲಿಯುವುದು.

ಬಾಬಿನ್: ಹೊಲಿಗೆ ಬೀಳಲು ಕೆಳಗಿನಿಂದ ಮೇಲಕ್ಕೆ ಬಂದು, ಸ್ಪೂಲ್‌ನ ಥ್ರೆಡ್ಅನ್ನು ಸಂಧಿಸುವ ಥ್ರೆಡ್. ಬಾಬಿನ್‌ಗಳನ್ನು ಸುತ್ತಿ, ಹೊಲಿಗೆ ಮೆಷಿನ್‌ನೊಳಗೆ ಸೂಕ್ತವಾಗಿ ಸೇರಿಸಬೇಕು.

ಕೇಸಿಂಗ್: ಗಾರ್ಮೆಂಟ್‌ನ ಮಡಿಚಿದ ಅಂಚು, ಅದು ಸಾಮಾನ್ಯವಾಗಿ ನಡುಭಾಗದಲ್ಲಿರುತ್ತದೆ. ಇದನ್ನು ಫಿಟ್ಅನ್ನು ಸರಿಹೊಂದಿಸುವ ಒಂದು ರೀತಿಯಾಗಿ ಬಳಸಲಾಗುತ್ತದೆ – ಉದಾಹರಣೆಗಾಗಿ ಡ್ರಾಸ್ಟ್ರಿಂಗ್.

ಡಾರ್ನ್ (ಅಥವಾ ಡಾರ್ನಿಂಗ್): ಹೆಚ್ಚಾಗಿ ನಿಟ್‌ವೇರ್‌ನಲ್ಲಿ ನೀಡಲ್ ಮತ್ತು ಥ್ರೆಡ್ ಬಳಸಿಕೊಂಡು ಸಣ್ಣ ರಂಧ್ರದ ರಿಪೇರಿ ಮಾಡುವುದನ್ನು ಸೂಚಿಸುತ್ತದೆ. ಇದನ್ನು ಹೆಚ್ಚಾಗಿ ಡಾರ್ನಿಂಗ್ ಸ್ಟಿಚ್ ಬಳಸಿಕೊಂಡು ಕೈಯಿಂದ ಮಾಡಲಾಗುತ್ತದೆ. ಡಾರ್ನಿಂಗ್ ಸ್ಟಿಚ್‌ಗಳನ್ನು ಬಳಸಿಕೊಂಡು ಮಾಡುವ ಅನೇಕ ನೀಡಲ್‌ವರ್ಕ್ ಟೆಕ್ನಿಕ್‌ಗಳನ್ನೂ ಸಹ ಇದು ಸೂಚಿಸುತ್ತದೆ.

ಗ್ಯಾದರ್: ರಫಲ್‌ಗಳಂತಹ ಫ್ಯಾಬ್ರಿಕ್‌ನಲ್ಲಿ ಫುಲ್ನೆಸ್ಅನ್ನು ರಚಿಸಲು ಫ್ಯಾಬ್ರಿಕ್ಅನ್ನು ಗ್ಯಾದರ್ ಮಾಡುವ ವಿಧಾನ. ಇದು ಫ್ಯಾಬ್ರಿಕ್‌ನ ಸ್ಟ್ರಿಪ್‌ನ ಉದ್ದವನ್ನು ಕಿರಿದುಗೊಳಿಸುವ ವಿಧಾನ, ಅದರಿಂದ ಉದ್ದನೆಯ ಪೀಸ್ಅನ್ನು ಗಿಡ್ಡ ಪೀಸ್‌ಗೆ ಜೋಡಿಸಬಹುದು.

ಲ್ಯಾಡರ್ ಸ್ಟಿಚ್:– ಇದು ದೊಡ್ಡ ಓಪನಿಂಗ್‌ಗಳನ್ನು ಮುಚ್ಚಲು ಅಥವಾ ಪರ್ಯಾಯವಾಗಿ 2 ಪ್ಯಾಟರ್ನ್ ಪೀಸ್‌ಗಳನ್ನು ಸೇರಿಸಲು ಬಳಸುವ ಹೊಲಿಗೆಯಾಗಿದೆ. ಫ್ಯಾಬ್ರಿಕ್‌ಗೆ ಲಂಬವಾಗಿ ಹೊಲಿಗೆಗಳನ್ನು ಹಾಕಲಾಗುತ್ತದೆ, ಇದು ಲ್ಯಾಡರ್‌ನಂತಹ (ಏಣಿಯಂತಹ) ರಚನೆಯನ್ನು ಉಂಟುಮಾಡುತ್ತದೆ.

ಪ್ಯಾಚ್‌ವರ್ಕ್: ಒಂದು ರೀತಿಯ ನೀಡಲ್‌ವರ್ಕ್, ಇದು ಪ್ಯಾಚ್‌ವರ್ಕ್‌ನಂತಹ ಪರಿಣಾಮವನ್ನು ಉಂಟುಮಾಡಲು ಫ್ಯಾಬ್ರಿಕ್‌ನ ಸಣ್ಣ ಪೀಸ್‌ಗಳನ್ನು ಒಟ್ಟಿಗೆ ಹೊಲಿಯುವುದನ್ನು ಒಳಗೊಳ್ಳುತ್ತದೆ. ಇದು ಕ್ವಿಲ್ಟಿಂಗ್‌ಗೆ ಬಹಳ ಪ್ರಸಿದ್ಧ. ಇದನ್ನು ಕೈಯಿಂದ ಅಥವಾ ಮೆಷಿನ್‌ನಿಂದ ಮಾಡಬಹುದು.

ಸ್ಟೇಸ್ಟಿಚ್: ಸೀಮ್‌ಲೈನ್‌ನ ಮೇಲೆ ಅಥವಾ ಹೊರಗೆ ಮಾಡಿದ ಹೊಲಿಗೆ. ಫ್ಯಾಬ್ರಿಕ್ಅನ್ನು ಸ್ಥಿರಗೊಳಿಸಲು ಮತ್ತು ಆಕಾರವನ್ನು ಬಿಟ್ಟು ಹಿಗ್ಗಿಕೊಳ್ಳದಂತೆ ತಡೆಯಲು ಇದನ್ನು ಬಳಸಲಾಗುತ್ತದೆ.

ಟ್ಯಾಕಿಂಗ್: ಶಾಶ್ವತ ಹೊಲಿಗೆಗೆ ಸುಲಭವಾಗಲು 2 ಬಟ್ಟೆಯ ಪೀಸ್‌ಗಳನ್ನು ಒಟ್ಟಿಗೆ ಇರಿಸಲು ದೊಡ್ಡ ಹೊಲಿಗೆಗಳನ್ನು ಬಳಸಲಾಗುತ್ತದೆ. ಶಾಶ್ವತ ಹೊಲಿಗೆಯು ಪೂರ್ಣಗೊಂಡ ನಂತರ ಈ ತಾತ್ಕಾಲಿಕ ಹೊಲಿಗೆಗಳನ್ನು ತೆಗೆದುಹಾಕಲಾಗುತ್ತದೆ.

Ushasew.com ನಿಂದ ಹೇಗೆ ಹೊಲಿಯುವುದು ಎಂಬುದನ್ನು ಮತ್ತು ಇನ್ನೂ ಹೆಚ್ಚಿಗೆ ಕಲಿಯಿರಿ

www.ushasew.com ರಲ್ಲಿ ನಾವು ನಿಮಗೆ ಅತ್ಯಂತ ಮೋಜಿನ ಮತ್ತು ಆಸಕ್ತಿದಾಯಕ ರೀತಿಯಲ್ಲಿ ಹೇಗೆ ಹೊಲಿಯುವುದು ಎಂಬುದನ್ನು ಕಲಿಸುತ್ತವೆ. ಮಾಹಿತಿಯುಕ್ತ ಮತ್ತು ಅನುಸರಿಸಲು ಸುಲಭವಾದ ವೀಡಿಯೊಗಳನ್ನು ನಾವು ಹೊಂದಿದ್ದೇವೆ. ಈ ಪ್ರಾಜೆಕ್ಟ್‌ಗಳು ನಿಮ್ಮ ಹೊಸ ಕೌಶಲ್ಯಗಳನ್ನು ಹೊರತರುತ್ತವೆ ಮತ್ತು ಪ್ರಯೋಜನಕಾರಿಯಾಗಿವೆ.

ಕಲಿಯಲು ಮತ್ತು ರಚಿಸಲು ನೀವು ಮೂಲಭೂತ ವಿಷಯಗಳೊಂದಿಗೆ ಆರಂಭಿಸಬೇಕು. ಒಮ್ಮೆ ನೀವು ಅವುಗಳಲ್ಲಿ ನಿಪುಣರಾದ ನಂತರ, ನಿಮ್ಮ ಹೊಸ ಕೌಶಲ್ಯವನ್ನು ಬಳಸಿ, ಅದ್ಭುತ ವಸ್ತುಗಳನ್ನು ರಚಿಸಬಹುದು. ನೀವು ವಸ್ತುಗಳನ್ನು ಮಾಡಲು ಆರಂಭಿಸುವ ವೀಡಿಯೊಗಳನ್ನು ಪ್ರಾಜೆಕ್ಟ್‌ಗಳೆಂದು ಕರೆಯಲಾಗುತ್ತದೆ. ಹಾಗೂ ನಿಮ್ಮ ಉತ್ಸುಕತೆಯನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ತೊಡಗಿಸಿಕೊಳ್ಳಲು ನಾವು ಬಹಳಷ್ಟು ವೀಡಿಯೊಗಳನ್ನು ಹೊಂದಿದ್ದೇವೆ.

ನಿಮಗೆ ಕಲಿಕಾ ಪ್ರಕ್ರಿಯೆಯ ಕಲ್ಪನೆಯನ್ನು ಒದಗಿಸಲು, ನೀವು ಹೇಗೆ ಆರಂಭಿಸಬೇಕೆಂಬುದು ಇಲ್ಲಿದೆ:

ಈ ಎಲ್ಲಾ ಪಾಠ ಮತ್ತು ವೀಡಿಯೊಗಳು 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಹಾಗಾಗಿ ನೀವು ಆರಂಭಿಸುವ ಮೊದಲು ನಿಮಗೆ ಹೆಚ್ಚು ಅನುಕೂಲಕರವಾದ ಭಾಷೆಯನ್ನು ಆರಿಸಿ.

ಉಷಾ ನಿಮಗಾಗಿ ವಿನ್ಯಾಸಗೊಳಿಸಲಾದ ಮೆಷಿನ್ಅನ್ನು ಹೊಂದಿದೆ.

ಉಷಾದಲ್ಲಿ ನಾವು ಪ್ರತಿಯೊಂದು ವಿಧದ ಬಳಕೆದಾರರಿಗೂ ಉಪಯುಕ್ತವಾದ ಹೊಲಿಗೆ ಮೆಷಿನ್‌ಗಳ ಶ್ರೇಣಿಯನ್ನು ತಯಾರಿಸಿದ್ದೇವೆ. ಆರಂಭಿಗರಿಂದ ಪರಿಣಿತ ವೃತ್ತಿಪರರವರೆಗೂ ಸರಿಹೊಂದುವ ಮೆಷಿನ್ಅನ್ನು ನಾವು ಹೊಂದಿದ್ದೇವೆ. ನಮ್ಮ ಮೆಷಿನ್‌ಗಳ ಶ್ರೇಣಿಯನ್ನು ಅವಲೋಕಿಸಿ ಮತ್ತು ನಿಮ್ಮ ಅವಶ್ಯಕತೆಗಳಿಗೆ ಒಪ್ಪುವ ಮೆಷಿನ್ಅನ್ನು ಆರಿಸಿ. ನೀವು ನಮ್ಮ ಗ್ರಾಹಕ ಸೇವಾ ಕಾರ್ಯಕರ್ತರೊಂದಿಗೆ ಮಾತನಾಡಲು ಬಯಸಿದಲ್ಲಿ, ಅವರು ನಿಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. www.ushasew.com ರಲ್ಲಿ ನಮ್ಮ ಉತ್ಪನ್ನಗಳ ಶ್ರೇಣಿಯನ್ನು ಅವಲೋಕಿಸಿ, ನಿಮಗೆ ಯಾವುದು ಇಷ್ಟವಾಗುತ್ತದೆಂದು ನೋಡಿ, ನಂತರ ನಮ್ಮ ವೆಬ್‌ಸೈ ಟ್‌ನಲ್ಲಿರುವ ಸ್ಟೋರ್ ಲೊಕೇಟರ್‌ಅನ್ನು ಬಳಸಿ ನಿಮ್ಮ ಹತ್ತಿರದ ಉಷಾ ಸ್ಟೋರ್‌ಅನ್ನು ಹುಡುಕಿ.

ನೀವು ಹೊಲಿಗೆಯನ್ನು ಆರಂಭಿಸಿದ ನಂತರ ಏನೆಲ್ಲಾ ರಚಿಸುತ್ತೀರೆಂದು ನೋಡಲು ನಾವು ಇಷ್ಟಪಡುತ್ತೇವೆ.
ಒಮ್ಮೆ ನೀವು ಹೊಲಿಗೆಯನ್ನು ಆರಂಭಿಸಿದ ನಂತರ, ನಾವು ನಿಮ್ಮ ರಚನೆಗಳನ್ನು ನೋಡಲು ಇಚ್ಛಿಸುತ್ತೇವೆ. ದಯವಿಟ್ಟು ಅವುಗಳನ್ನು ನಮ್ಮ ಯಾವುದೇ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. – (ಫೇಸ್ಬುಕ್), (ಇನ್ಸ್ಟಾಗ್ರಾಮ್), (ಟ್ವಿಟರ್), (ಯುಟ್ಯೂಬ್). ನೀವು ಅದನ್ನು ಏಕೆ ಮಾಡಿದಿರಿ, ಅದು ಯಾರಿಗಾಗಿ ಮತ್ತು ಅದನ್ನು ಹೇಗೆ ವಿಶೇಷವಾಗಿ ಮಾಡಿದಿರಿ ಎಂಬುದನ್ನು ನಮಗೆ ಹೇಳಿ.

ಮುಂದೆ ದೀರ್ಘ ಬೇಸಿಗೆಕಾಲ ಬರುತ್ತದೆ, ಆದ್ದರಿಂದ ನೀವು ತಂಪಗೆ ಮನೆಯಲ್ಲೇ ಇರಿ ಮತ್ತು ನಿಮ್ಮ ಪಾಠಗಳನ್ನು ಆರಂಭಿಸಿ.

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ.Read More.....

Leave your comment