Understanding Different Sewing Feet

ಹೊಲಿಗೆ ಮೆಷಿನ್‌ನಲ್ಲಿ ಫೂಟ್ ಎಂದರೇನು ಎಂದು ನೀವು ಆಶ್ಚರ್ಯಪಡುತ್ತಿರಬಹುದು. ಇದು ಫ್ಯಾಬ್ರಿಕ್ಅನ್ನು ಕೆಳಗೆ ಹಿಡಿದುಕೊಂಡು, ಹೊಲಿಗೆಯೊಂದಿಗೆ ಅದನ್ನು ಚಲಿಸುವಂತೆ ಮಾಡುವ ಸಣ್ಣ ಸಾಧನವಾಗಿದೆ. ಇತರೆ ಫೂಟ್ ವಿನ್ಯಾಸಗಳಿವೆ, ಅವು ಇನ್ನೂ ಹೆಚ್ಚಿನ ಕೆಲಸವನ್ನು ಮಾಡುತ್ತವೆ. ಅವು ವಿಶೇಷ ಫೂಟ್‌ಗಳು ಹಾಗೂ ಅವುಗಳನ್ನು ನಾವು ನಿಮಗೆ ನಂತರ ಪರಿಚಯಿಸುತ್ತೇವೆ.

ಯೂನಿವರ್ಸಲ್ ಪ್ರೆಸ್ಸರ್ ಫೂಟ್

ನಿಮ್ಮ ಉಷಾ ಹೊಲಿಗೆ ಮೆಷಿನ್, ಯೂನಿವರ್ಸಲ್ ಪ್ರೆಸ್ಸರ್ ಫೂಟ್‌ನೊಂದಿಗೆ ಬರುತ್ತದೆ. ಇದು ಎಲ್ಲಾ ನಿಗದಿತ ದೈನಂದಿನ ಹೊಲಿಗೆಗೆ ಸಿದ್ಧವಾಗಿರುವ ಫೂಟ್ ಆಗಿದೆ. ಈ ಸರ್ವೋದ್ದೇಶದ ಪ್ರೆಸ್ಸರ್ ಫೂಟ್ ಹೆಚ್ಚಿನ ನೇರ ಮತ್ತು ಜಿಗ್‌ಜ್ಯಾಗ್ ಹೊಲಿಗೆಗೆ ಡೀಫಾಲ್ಟ್ ಆಗಿದೆ.

ಜಿಪ್ಪರ್ ಫೂಟ್

ಜಿಪ್ಪರ್ ಫೂಟ್ ನಿಮಗೆ ಜಿಪ್ಪರ್‌ನ ಕಾಯಿಲ್‌ಗಳಿಗೆ ಹತ್ತಿರದಿಂದ ಹೊಲಿಯಲು ಅವಕಾಶ ನೀಡುತ್ತದೆ, ಅಂದರೆ ಇದು ಸರಾಗವಾಗಿ ಫಾಸ್ಟನ್ ಮಾಡುತ್ತದೆ ಮತ್ತು ಅಂದವಾಗಿ ಕಾಣುತ್ತದೆ. ನೀವು ಪೌಚ್ಅನ್ನು ತಯಾರಿಸುವಾಗ ಮತ್ತು ಜಿಪ್ಪರ್‌ಅನ್ನು ಜೋಡಿಸುವಾಗ ನಿಮಗೆ ನೆರವಾಗುವ ಫೂಟ್ ಇದು. ಈ ಫೂಟ್‌ನಿಂದ ನಿಮ್ಮ ಮೆಚ್ಚಿನ ಡೆನಿಮ್‌ನ ಜಿಪ್ಪರ್ ಬದಲಾಯಿಸುವುದು ಬಹಳ ಸುಲಭ.

ಬಟನ್‌ಹೋಲ್ ಫೂಟ್

ನಿಮ್ಮ ಕಿಟ್‌ನ ಭಾಗವಾಗಿರುವ ಇನ್ನೊಂದು ಫೂಟ್ ಎಂದರೆ ಬಟನ್‌ಹೋಲ್ ಫೂಟ್. ಇದು ವಿವಿಧ ಶೈಲಿಗಳಲ್ಲಿ ಬರುತ್ತದೆ, ಆದರೆ ಅವೆಲ್ಲವೂ ನಿಮಗೆ ಅಂದವಾದ ಮತ್ತು ಅಚ್ಚುಕಟ್ಟಾದ ಬಟನ್‌ಹೋಲ್‌ಗಳನ್ನು ಹೊಲಿಯಲು ನೆರವಾಗುತ್ತವೆ. ನೀವು ಈ ಫೂಟ್‌ಅನ್ನು ಹತ್ತಿರದಿಂದ ಅವಲೋಕಿಸಿದರೆ, ಅದು ಫ್ಯಾಬ್ರಿಕ್ಅನ್ನು ನಿಧಾನವಾಗಿ ಸರಿಸುವುದು ಮತ್ತು ನೀಡಲ್‌ಗೆ ಎರಡು ವಿಭಿನ್ನ ಸಾಲುಗಳಲ್ಲಿ ಹೊಲಿಯಲು ಅವಕಾಶ ನೀಡುವುದನ್ನು ಕಾಣುತ್ತೀರಿ. ಒಮ್ಮೆ ನೀವು ಪೂರ್ಣಗೊಳಿಸಿದ ನಂತರ, ಬಟನ್ ಸಾಗಲು ಅನುವು ಮಾಡಿಕೊಡಲು ಈ ಎರಡು ಸಾಲುಗಳ ನಡುವೆ ಫ್ಯಾಬ್ರಿಕ್ಅನ್ನು ಕತ್ತರಿಸಬೇಕಾಗುತ್ತದೆ.

ಬ್ಲೈಂಡ್‌ ಸ್ಟಿಚ್ ಹೆಮ್ ಫೂಟ್

ಇದು ಹೊಲಿಗೆಗಳು ಕಾಣದ ಅಚ್ಚುಕಟ್ಟಾದ ಟಕ್ಡ್ ಇನ್ ಹೆಮ್‌ಗಳನ್ನು ಒದಗಿಸುವ ಫೂಟ್ ಆಗಿದೆ. ನೀಡಲ್ ಅದರ ಕೆಲಸ ಮಾಡುವಾಗ ಮೆಟೀರಿಯಲ್ಅನ್ನು ಟಕ್ ಇನ್ ಮಾಡುವ ರೀತಿಯಲ್ಲಿ ಬ್ಲೈಂಡ್‌ ಸ್ಟಿಚ್ ಹೆಮ್ ಫೂಟ್ಅನ್ನು ರೂಪಿಸಗೊಳಿಸಲಾಗಿದೆ. ಅಂತಿಮ ಫಲಿತಾಂಶವು ಹೊಲಿಗೆಗಳು ಗೋಚರಿಸದೆ ಅಚ್ಚುಕಟ್ಟಾದ ಅಂಚನ್ನು ನೀಡುತ್ತದೆ.

ಪಿನ್‌ಟಕ್ ಫೂಟ್

ನೀವು ಲೇಸ್ ಅಥವಾ ರೇಷ್ಮೆಯತಹ ಸೂಕ್ಷ್ಮ ಫ್ಯಾಬ್ರಿಕ್‌ಗಳನ್ನು ಹೊಲಿಯುತ್ತಿದ್ದರೆ, ಅದಕ್ಕೆ ಇದು ಸೂಕ್ತವಾದ ಫೂಟ್ ಆಗಿದೆ. ಪಿನ್‌ಟಕ್ ಫೂಟ್ ಅವುಗಳಿಗೆ ಒಂದು ಅಂದವಾದ ಫಿನಿಶ್ಅನ್ನು ಒದಗಿಸುತ್ತದೆ, ಅದು ವಿನ್ಯಾಸದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸಮಾಂತರ ಅಥವಾ ಬಾಗಿದ ಸಾಲುಗಳಲ್ಲಿ ಸುಂದರವಾದ ಕಲಾತ್ಮಕ ಪರಿಣಾಮಕ್ಕಾಗಿ ಪಿನ್‌ಟಕ್‌ಗಳನ್ನು ಬಳಸಬಹುದು. ನೀವು ಪ್ಲೇನ್ ಫ್ಯಾಬ್ರಿಕ್‌ಗಳ ಮೇಲೆ ಸುಂದರವಾದ ಫಲಿತಾಂಶಕ್ಕಾಗಿ ಪಿನ್‌ಟಕ್‌ಗಳನ್ನು ರಚನಾತ್ಮಕವಾಗಿ ಬಳಸಬಹುದು. ವೀಡಿಯೊ ವೀಕ್ಷಿಸಿ .

ಸೀಮ್ ಫೂಟ್

ನಯವಾದ ಫಿನಿಶ್ ಉತ್ತಮ ಹೊಲಿಗೆದಾರನ ಗುರುತಾಗಿದೆ. ಇದು ಅದಕ್ಕೆ ಸೂಕ್ತವಾದ ಫೂಟ್ ಆಗಿದೆ. ಇದು ಎಲ್ಲದಕ್ಕೂ ಕಣ್ಣಿಗೆ ಹಿತವಾದ ಒಂದು ಸುಂದರ ಫಿನಿಶ್ಅನ್ನು ನೀಡುತ್ತದೆ. ಏಕಪ್ರಕಾರದ ಸೀಮ್‌ಗಳು ಉತ್ತಮ ಪ್ಯಾಚ್‌ವರ್ಕ್‌ಗೆ, ಎರಡು ಪೀಸ್ ಫ್ಯಾಬ್ರಿಕ್‌ಗಳನ್ನು ಸೇರಿಸುವುದಕ್ಕೆ ಅತ್ಯಗತ್ಯ. ನೀವು ಕೇವಲ ಒಂದು ಫೂಟ್ಅನ್ನು ಹೊಂದಿರಬೇಕೆಂದುಕೊಂಡಿದ್ದರೆ, ಅದು ಇದೇ ಆಗಿದ್ದರೆ ಉತ್ತಮ. ವೀಡಿಯೊ ವೀಕ್ಷಿಸಿ .

ಕೋರ್ಡಿಂಗ್ ಫೂಟ್

ನೀವು ಕ್ಲಿಷ್ಟವಾದ ಪ್ಯಾಟರ್ನ್‌ಗಳನ್ನು ಮಾಡಲು ಬಯಸುತ್ತೀರಾ?ಹಾಗಾದರೆ ನಿಮಗೆ ಈ ಫೂಟ್ ಬೇಕಾಗುತ್ತದೆ. ಇದು ಏಕಕಾಲದಲ್ಲಿ ಮೂರು ಸೂಕ್ಷ್ಮ ದಾರಗಳಲ್ಲಿ ಹೊಲಿಯಲು ಅವಕಾಶ ನೀಡುತ್ತದೆ. ನಿಮ್ಮ ವಿನ್ಯಾಸಗಳಿಗೆ ಅದ್ಭುತ 3ಡಿ ಆಕ್ಸೆಂಟ್‌ಗಳನ್ನು ಸೇರಿಸಲು ನೀವು ಕೋರ್ಡಿಂಗ್ಅನ್ನು ಬಳಸಬಹುದು. ನ್ಯಾಪ್ಕಿನ್‌ಗಳು ಮತ್ತು ಕುಶನ್ ಕವರ್‌ಗಳಿಂದ ನಿಮ್ಮ ಗಾರ್ಮೆಂಟ್‌ಗಳವರೆಗೆ ಹೆಚ್ಚುಕಡಿಮೆ ಎಲ್ಲದರಲ್ಲೂ ನೀವು ಕೋರ್ಡಿಂಗ್ಅನ್ನು ಡಿಸೈನ್ ಎಲಿಮೆಂಟ್ ಆಗಿ ಬಳಸಬಹುದು. ವೀಡಿಯೊ ವೀಕ್ಷಿಸಿ .

ಬೀಡಿಂಗ್ ಫೂಟ್

ಬ್ಲಿಂಗ್ಅನ್ನು ಸೇರಿಸುವ ಫೂಟ್ ಆಗಿದೆ!ನೀವು ಬೀಡಿಂಗ್ ಫೂಟ್ ಬಳಸಿಕೊಂಡು ಬೀಡ್ ಸ್ಟ್ರಿಂಗ್‌ಗಳಿಂದ ನಿಮ್ಮ ಗಾರ್ಮೆಂಟ್‌ಗಳನ್ನು ಸುಲಭವಾಗಿ ಅಲಂಕರಿಸಬಹುದು. ಅದ್ಭುತ ನೆಕ್‌ಪೀಸ್‌ನಿಂದ ಗಾರ್ಮೆಂಟ್‌ಗಳವರೆಗೆ ವಿವಿಧ ಪ್ರಾಜೆಕ್ಟ್‌ಗಳನ್ನು ನೀವು ಬೀಡ್‌ಗಳಿಂದ ಸುಂದರವಾಗಿ ಎದ್ದುಕಾಣುವಂತೆ ಮಾಡಬಹುದು. ನಿಮ್ಮ ರಚನೆಗಳಿಗೆ ಅದ್ಭುತ ನೋಟವನ್ನು ನೀಡಲು ವಿವಿಧ ರೀತಿಯ ಬೀಡ್‌ಗಳನ್ನು ಬಳಸಿನೋಡಿ. ವೀಡಿಯೊ ವೀಕ್ಷಿಸಿ .

ಬೈಂಡರ್ ಫೂಟ್

ಕ್ವಿಲ್ಟರ್‌ಗಳು ಈ ಫೂಟ್ಅನ್ನು ಅದರ ಉತ್ತಮ ಗುಣಲಕ್ಷಣಗಳಿಗಾಗಿ ಇಷ್ಟಪಡುತ್ತಾರೆ. ಈ ಫೂಟ್ ಒಂದು ಸರಳ ಹಂತದಲ್ಲಿ ಶೀಘ್ರವಾಗಿ ಮತ್ತು ಸುಲಭವಾಗಿ ಬಯಾಸ್ ಟೇಪ್ಅನ್ನು ಜೋಡಿಸುತ್ತದೆ. ಬೈಂಡಿಂಗ್ ಹೆಚ್ಚು ಅಗತ್ಯವಿರುವ ಕ್ವಿಲ್ಟರ್‌ಗಳಲ್ಲಿ ಒಂದು ಮೆಚ್ಚಿನ ಹೊಲಿಗೆ ವಿಧಾನವಾಗಿದೆ. ಫ್ಯಾಬ್ರಿಕ್ ಅಂಚುಗಳಲ್ಲಿ ದಾರ ಬಿಟ್ಟುಕೊಳ್ಳುವುದನ್ನು ತಡೆಯಲು ಅವುಗಳನ್ನು ಮುಚ್ಚುವುದು ಅಗತ್ಯವಿರುವಲ್ಲಿ ನೀವು ಬೈಂಡಿಂಗ್ಅನ್ನು ಬಳಸಬಹುದು. ವೀಡಿಯೊ ವೀಕ್ಷಿಸಿ .

ಡಾರ್ನಿಂಗ್ ಫೂಟ್

ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ, ನಿಮಗೆ ಈ ಫೂಟ್ ಖಂಡಿತವಾಗಿಯೂ ಬೇಕಾಗುತ್ತದೆ. ನೀವು ಈ ಫೂಟ್ಅನ್ನು ಮೆಂಡಿಂಗ್‌ಗಾಗಿ ಮತ್ತು ಫ್ರೀ ಮೋಶನ್ ಎಂಬ್ರಾಯ್ಡರಿಗಾಗಿ ಬಳಸಬಹುದು. ಈ ಫೂಟ್ ನಿಮ್ಮ ಬೆರಳುಗಳಿಗೆ ರಕ್ಷಣೆ ನೀಡಿ, ಸೂಕ್ತವಾದ ಹೊಲಿಗೆ ರಚನೆಯನ್ನು ಖಚಿತಪಡಿಸುತ್ತದೆ ಹಾಗೂ ಸ್ಕಿಪ್ ಹೊಲಿಗೆಗಳನ್ನು ಕಡಿಮೆ ಮಾಡುತ್ತದೆ. ವೀಡಿಯೊ ವೀಕ್ಷಿಸಿ .

ಗ್ಯಾದರಿಂದ್ ಫೂಟ್

ಗ್ಯಾದರ್‌ಗಳು ಯಾವುದೇ ಗಾರ್ಮೆಂಟ್‌ಗೆ ಸ್ಟೈಲ್ಅನ್ನು ಸೇರಿಸಬಲ್ಲವು. ಆದರೆ ಅವು ಅಚ್ಚುಕಟ್ಟಾಗಿರಬೇಕು ಮತ್ತು ಏಕಪ್ರಕಾರದಲ್ಲಿರಬೇಕು. ಹಾಗಾದರೆ ಮಾತ್ರ ಎಲ್ಲವೂ ಅದ್ಭುತವಾಗಿ ಕೊನೆಗೊಳ್ಳುತ್ತದೆ. ಗ್ಯಾದರಿಂಗ್ ಫೂಟ್‌ನಿಂದ ನೀವು ಇದನ್ನು ಸುಲಭವಾಗಿ ಮಾಡಬಹುದು. ಇದು ನಿಜವಾಗಿ ಬಳಸಲು ಸುಲಭವಾದ ಫೂಟ್ ಆಗಿದೆ. ವೀಡಿಯೊ ವೀಕ್ಷಿಸಿ .

ಪೈಪಿಂಗ್ ಫೂಟ್

ಪೈಪಿಂಗ್ ಅಂಚುಗಳನ್ನು ಸ್ಟೈಲ್ ಮಾಡಲು ನೆರವಾಗುತ್ತದೆ ಮತ್ತು ಅವಕ್ಕೆ ಶಕ್ತಿಯನ್ನೂ ನೀಡುತ್ತದೆ. ಇದನ್ನು ಸಾಮಾನ್ಯವಾಗಿ ಗಾರ್ಮೆಂಟ್‌ಗಳಲ್ಲಿ ಬಳಸಲಾಗುತ್ತದೆ ಹಾಗೂ ಇತರೆ ಹೊಲಿಗೆ ಪ್ರಾಜೆಕ್ಟ್‌ಗಳಲ್ಲೂ ಸಹ ರಚನಾತ್ಮಕವಾಗಿ ಬಳಸಬಹುದು. ಅಲಂಕಾರಿಕ ವಿನ್ಯಾಸಗಳನ್ನು ಸೇರಿಸಲು ಪೈಪಿಂಗ್ ಫೂಟ್ಅನ್ನು ಬಳಸಿ ಹಾಗೂ ನೆಕ್‌ಲೈನ್‌ಗಳು ಅಥವಾ ಇತರೆ ಗಾರ್ಮೆಂಟ್ ಅಂಚುಗಳ ಸೌಂದರ್ಯವನ್ನು ಹೆಚ್ಚಿಸಲೂ ಸಹ ಇದನ್ನು ಬಳಸಿ. ವೀಡಿಯೊ ವೀಕ್ಷಿಸಿ.

ರಿಬ್ಬನ್/ಸೆಕ್ವಿನ್ ಫೂಟ್

ಹೆಸರೇ ಸೂಚಿಸುವಂತೆ ಇದು ರಿಬ್ಬನ್‌ಗಳು ಮತ್ತು ಸೆಕ್ವಿನ್‌ಗಳನ್ನು ಜೋಡಿಸಲು ಬಳಸುವ ಫೂಟ್ ಆಗಿದೆ. ನಿಮ್ಮ ಹಳೆಯ ಬಟ್ಟೆಗಳನ್ನು ಮರುಬಳಕೆ ಮಾಡಲು, ಸೊಗಸಾದ ಪರಿಕರಗಳನ್ನು ರಚಿಸಲು ಮತ್ತು ಇನ್ನೂ ಅನೇಕ ಕೆಲಸಗಳನ್ನು ಮಾಡಲು ಈ ಫೂಟ್‌ನಿಂದ ವಿಭಿನ್ನ ರಿಬ್ಬನ್‌ಗಳು ಮತ್ತು ಸೆಕ್ವಿನ್‌ಗಳನ್ನು ಸೇರಿಸುವುದು ಸುಲಭವಾಗುತ್ತದೆ. ವೀಡಿಯೊ ವೀಕ್ಷಿಸಿ. ವೀಡಿಯೊ ವೀಕ್ಷಿಸಿ.

ರಫ್ಲರ್ ಫೂಟ್

ರಫ್ಲರ್ ಫೂಟ್ ಬಳಸಿಕೊಂಡು ಸುಲಭವಾಗಿ ಸುಂದರವಾದ ರಫಲ್‌ಗಳು ಮತ್ತು ಪ್ಲೀಟ್‌ಗಳನ್ನು ರಚಿಸಲು ಕಲಿಯಿರಿ. ಇದರಿಂದ ಆ ಸುಂದರ ಆಕ್ಸೆಂಟ್‌ಗಳನ್ನು ನಿಮ್ಮ ರಚನೆಗಳಿಗೆ ಸೇರಿಸಲು ಸಾಧ್ಯವಾಗುತ್ತದೆ, ಅದು ಗಾರ್ಮೆಂಟ್‌ಗಳಾಗಿರಲಿ ಅಥವಾ ಅಲಂಕಾರಿಕ ಪರಿಕರಗಳಾಗಿರಲಿ. ರಫಲ್‌ಗಳು ಎಲ್ಲದಕ್ಕೂ ಸ್ವಲ್ಪ ಆಕರ್ಷಣೆ ಮತ್ತು ಸ್ಟೈಲ್ಅನ್ನು ಸೇರಿಸುತ್ತದೆ. ಒಂದು ಸರಳವಾದ ಕುಶನ್ ಸೂಕ್ತ ರಫಲ್‌ಗಳನ್ನು ಹೊಂದಿದ್ದರೆ ಅದು ಒಂದು ಕಲಾತ್ಮಕ ಕೆಲಸವಾಗುತ್ತದೆ. ವೀಡಿಯೊ ವೀಕ್ಷಿಸಿ. ವೀಡಿಯೊ ವೀಕ್ಷಿಸಿ.

ಅತ್ಯಂತ ಮೋಜಿನ ರೀತಿಯಲ್ಲಿ ಕಲಿಯಿರಿ ಮತ್ತು ರಚಿಸಿ.

Ushasew.com ನಲ್ಲಿ ನಾವು ಹಲವಾರು ವೀಡಿಯೊಗಳನ್ನು ಒಟ್ಟಿಗೆ ಹಾಕಿದ್ದೇವೆ, ಅವು ಈ ಎಲ್ಲಾ ಫೂಟ್‌ಗಳನ್ನು ಹೇಗೆ ಬಳಸುವುದೆಂದು ತೋರಿಸಿಕೊಡುತ್ತವೆ.

ಈ ವೀಡಿಯೊಗಳು ಸರಳ ಮತ್ತು ಅನುಸರಿಸಲು ಸುಲಭವಾಗಿವೆ. ವಿವಿಧ ಫೂಟ್‌ಗಳನ್ನು ಹೇಗೆ ಅಳವಡಿಸುವುದು, ಅವು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಹಾಗೂ ಅವುಗಳ ಬಳಕೆಯನ್ನು ಇನ್ನಷ್ಟು ಮೋಜಿನಿಂದ ಕೂಡಿರುವಂತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಂತೆ ಮಾಡುವ ಸಲಹೆಗಳನ್ನು ನಾವು ನೀಡುತ್ತೇವೆ.

ಇದು ಹೊಲಿಗೆಗೆ ಸಂಬಂಧಿಸಿದ ಕೆಲಸವಾದ್ದರಿಂದ, ನೀವು ಹೊಲಿಗೆಯಲ್ಲಿ ಪರಿಪೂರ್ಣವಾಗುವವರೆಗೆ ಮತ್ತು ಹೊಲಿಗೆಯ ಮೇಲೆ ನಿಯಂತ್ರಣ ಸಾಧಿಸುವವರೆಗೆ ಅಭ್ಯಾಸ ಮಾಡುತ್ತಿರಬೇಕಾಗುತ್ತದೆ. ಎಲ್ಲಾ ಫೂಟ್‌ಗಳ ಮೂಲಭೂತ ವಿಷಯಗಳು ಒಂದೇ ಆಗಿರುತ್ತವೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಕೇವಲ ಬಳಕೆಗಳು ಮಾತ್ರ ವ್ಯತ್ಯಾಸಗೊಳ್ಳುತ್ತವೆ.

ಫೂಟ್‌ಗಳ ಬಗ್ಗೆ ನೀವು ಏನಾದರೂ ಸಲಹೆಗಳು ಮತ್ತು ಹೆಚ್ಚುವರಿ ಬಳಕೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. – (ಫೇಸ್‌ಬುಕ್), (ಇನ್ಸ್ಟಾಗ್ರಾಮ್), (ಟ್ವಿಟರ್), (ಯುಟ್ಯೂಬ್). ಅಲ್ಲದೆ ನಾವು ನಿಮ್ಮ ರಚನೆಗಳನ್ನೂ ನೋಡಲು ಬಯಸುತ್ತೇವೆ, ಆದ್ದರಿಂದ ದಯವಿಟ್ಟು ಚಿತ್ರಗಳನ್ನು ಪೋಸ್ಟ್ ಮಾಡಿ ಮತ್ತು ಸಾಧ್ಯವಾದರೆ ನಮ್ಮನ್ನು ಹ್ಯಾಶ್‌ಟ್ಯಾಗ್ ಮಾಡಿ.

 

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ.Read More.....

Leave your comment