A cool pouch to take to school

ವಾರಂತ್ಯದ ನಂತರ ಮರಳಿ ಶಾಲೆಗೆ ಹೋಗಿ ಮತ್ತು ಹೀರೊ ಆಗಿ!ಹೇಗೆ ಎಂಬುದು ಇಲ್ಲಿದೆ!

ಆ ಹಳೆಯ ಪೆನ್ಸಿಲ್ ಬಾಕ್ಸ್ ಅಥವಾ ನಿಮ್ಮೆಲ್ಲಾ ಸ್ಟೇಶನರಿಗಳನ್ನು ತುಂಬಿಸುವ ಬ್ಯಾಗ್ ಒಯ್ಯುವುದನ್ನು ನಿಲ್ಲಿಸಿ ಹಾಗೂ ವಿಭಿನ್ನವಾದ ಮತ್ತು ಅದ್ಭುತವಾದ ಏನನ್ನಾದರೂ ಹೊಲಿಯಿರಿ.

ಎಲ್ಲಿಂದ ಆರಂಭಿಸುವುದೆಂದು ನಿಮಗೆ ತಿಳಿದಿಲ್ಲದಿರುವುದರಿಂದ ಮತ್ತು ಹೊಲಿಗೆಯಲ್ಲಿ ಯಾವುದೇ ಅನುಭವವನ್ನು ಹೊಂದಿಲ್ಲದಿರುವುದರಿಂದ, ಅದನ್ನು ಹೇಗೆ ಮಾಡುವುದೆಂದು ನೀವು ಅಚ್ಚರಿಪಡುತ್ತಿದ್ದರೆ, ಚಿಂತಿಸಬೇಡಿ. ನಾವು ನಿಮಗೆ ಕಡಿಮೆ ಸಮಯದಲ್ಲಿ ಹೇಗೆ ಹೊಲಿಯುವುದು ಎಂಬುದನ್ನು ಕಲಿಸಿಕೊಡುತ್ತೇವೆ ಹಾಗೂ ನೀವು ಬಯಸುವ ಎಲ್ಲಾ ವಸ್ತುಗಳನ್ನು ತಯಾರಿಸುವ ಸಾಮರ್ಥ್ಯವನ್ನು ನಿಮಗೆ ನೀಡುತ್ತೇವೆ.

ಹೇಗೆ ಎಂಬುದನ್ನು ನಿಮಗೆ Ushasew.com ತೋರಿಸಿಕೊಡುತ್ತದೆ

ಹೇಗೆ ಹೊಲಿಯುವುದು ಎಂಬುದನ್ನು ನಿಮಗೆ ಕಲಿಸಲು Ushasew.com ರಲ್ಲಿ ನಾವು ವೀಡಿಯೊ ಪಾಠ ಮತ್ತು ಪ್ರಾಜೆಕ್ಟ್‌ಗಳ ಸರಣಿಯೊಂದನ್ನು ಹಾಕಿದ್ದೇವೆ. ಪಾಠಗಳು ಆರಂಭಿಕ ಹಂತದಿಂದ ಪ್ರಾರಂಭವಾಗುತ್ತವೆ. ಮೊದಲನೇ ಪಾಠ ನಿಮಗೆ ಹೊಲಿಗೆ ಮೆಷಿನ್ಅನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ ಹಾಗೂ ನಂತರ ನೀವು ಹೇಗೆ ಹೊಲಿಯುವುದು ಎಂಬುದನ್ನು ಕಲಿಯಲು ಮುಂದುವರಿಯುತ್ತೀರಿ. ನೇರ ಸಾಲಿನಿಂದ ಆರಂಭಿಸಿ ನಂತರ ಕಾರ್ನರ್‌ಗಳು ಮತ್ತು ಕರ್ವ್‌ಗಳಿಗೆ ಸರಿದು, ನೀವು ಹೊಲಿಗೆಯಲ್ಲಿ ಸಮರ್ಥರಾಗಲು ಬೇಕಾದ ಎಲ್ಲಾ ಮಾಹಿತಿಯನ್ನು ತ್ವರಿತವಾಗಿ ಪಡೆಯುತ್ತೀರಿ.

ಕಲಿಕೆಗೆ ನಿಗದಿತ ಅಭ್ಯಾಸದ ಅಗತ್ಯವಿದೆ, ಹಾಗಾಗಿ ಪ್ರತಿಯೊಂದು ಪಾಠವನ್ನು ನಿಮಗೆ ಸಾಧ್ಯವಾದಷ್ಟು ಅಭ್ಯಾಸ ಮಾಡುವಂತೆ ಪ್ರೋತ್ಸಾಹಿಸಲಾಗುತ್ತದೆ.

ಎಲ್ಲಾ ಪಾಠಗಳ ನಡುವೆ ಪ್ರಾಜೆಕ್ಟ್‌ಗಳಿವೆ. ನೀವು ಹೊಸದಾಗಿ ಪಡೆದ ಕೌಶಲ್ಯಗಳನ್ನು ಬಳಸಿಕೊಂಡು ವಸ್ತುಗಳನ್ನು ರಚಿಸಬೇಕೆಂದು ಅವುಗಳನ್ನು ಉದ್ದೇಶಪೂರ್ವಕವಾಗಿ ಇರಿಸಲಾಗಿದೆ. ಇವುಗಳಲ್ಲಿ ಒಂದು ಜಿಪ್ಪರ್ಡ್ ಪೌಚ್ ಪ್ರಾಜೆಕ್ಟ್, ಅದು ನಿಮ್ಮೆಲ್ಲಾ ಸ್ಟೇಶನರಿಗಳನ್ನು ಶಾಲೆಗೆ ಒಯ್ಯಲು ಸೂಕ್ತವಾಗಿದೆ.

ಜಿಪ್ಪರ್ಡ್ ಪೌಚ್ ಪ್ರಾಜೆಕ್ಟ್

ಜಿಪ್ಪರ್ಡ್ ಪೌಚ್ಅನ್ನು ಮಾಡಲು ಬೇಕಾದ ಎಲ್ಲಾ ಹಂತಗಳನ್ನು ವಿವರಿಸುವ ಒಂದು ಕಿರು ವೀಡಿಯೊ ಇಲ್ಲಿದೆ. ಎಲ್ಲಿಂದ ಆರಂಭಿಸುವುದು, ಜಿಪ್‌ನ ಸರಿಯಾದ ಭಾಗವನ್ನು ಗುರುತಿಸುವುದು ಹೇಗೆ ಮತ್ತು ಅದನ್ನು ಹೊಲಿಯುವುದು ಹೇಗೆ ಎಂಬುದನ್ನು ನೀವು ನೋಡುತ್ತೀರಿ. ಪ್ರತಿಯೊಂದು ಹಂತವನ್ನು ವಿವರಿಸಲಾಗಿದೆ ಹಾಗೂ ಅನುಸರಿಸಲು ಸುಲಭವಾದ ರೀತಿಯಲ್ಲಿ ಎಲ್ಲಾ ಹಂತಗಳನ್ನು ತೋರಿಸಲಾಗಿದೆ.

ನೀವು ಮೊದಲಿಗೆ ವೀಡಿಯೊವನ್ನು ಕೆಲವು ಬಾರಿ ವೀಕ್ಷಿಸಿ, ನಂತರ ನಿಮಗೆ ಬೇಕಾದುದನ್ನು ಸಂಗ್ರಹಿಸುವ ಮೂಲಕ ಆರಂಭಿಸಿ ಎಂದು ನಾವು ಸಲಹೆ ನೀಡುತ್ತೇವೆ. ಪಿಡಿಎಫ್ಅನ್ನು ಡೌನ್‌ಲೋಡ್ ಮಾಡಿ ಮತ್ತು ವಸ್ತುಗಳ ಪಟ್ಟಿಯನ್ನು ಮಾಡಿಕೊಳ್ಳಿ. ತೋರಿಸಿದ ಮೆಟೀರಿಯಲ್‌ಗಳನ್ನೇ ನೀವು ಸಂಗ್ರಹಿಸಬೇಕಾಗಿಲ್ಲ ಹಾಗೂ ನೀವೇ ಸ್ವತಃ ಪ್ರಯೋಗವನ್ನು ಮಾಡಬಹುದು. ಜಿಪ್‌ನ ಬಣ್ಣವನ್ನು ಬದಲಾಯಿಸಿ, ವಿವಿಧ ಫ್ಯಾಬ್ರಿಕ್‌ಗಳನ್ನು ನೋಡಿ ಮತ್ತು ನಿಮಗೆ ಇಷ್ಟವಾದಂತೆ ಆರಿಸಿ. ಇದು ನೀವು ಮಾಡುವ ಪೌಚ್‌ನ ಅನನ್ಯತೆಯನ್ನು ಹೆಚ್ಚಿಸುತ್ತದೆ.

ವಿವಿಧ ಆಕಾರಗಳು ಮತ್ತು ಗಾತ್ರಗಳ ಮೇಲೆ ಪ್ರಯೋಗ

ಒಮ್ಮೆ ನೀವು ನಿಮ್ಮ ಮೊದಲ ಪೌಚ್ಅನ್ನು ಮಾಡಿ ಅದರ ಪ್ರಕ್ರಿಯೆಯನ್ನು ತಿಳಿದುಕೊಂಡ ನಂತರ, ರಚನಾತ್ಮಕವಾಗಿ ವಿವಿಧ ಆಕಾರಗಳು ಮತ್ತು ಗಾತ್ರಗಳಲ್ಲಿ ಪೌಚ್‌ಗಳನ್ನು ಮಾಡಲು ಆರಂಭಿಸಬಹುದು. ವಿವಿಧ ಮೆಟೀರಿಯಲ್‌ಗಳು, ಫ್ಯಾಬ್ರಿಕ್‌ಗಳು ಮತ್ತು ಅಲಂಕಾರಗಳೊಂದಿಗೆ ಪ್ರಯೋಗ ಮಾಡಿ. ವಿಭಿನ್ನ ಗಾತ್ರಗಳೊಂದಿಗೆ ಪ್ರಯತ್ನಿಸಿ. ಮೂಲಭೂತ ವಿಷಯಗಳು ಒಂದೇ ಆಗಿರುತ್ತವೆ ಮತ್ತು ನೀವು ಅವುಗಳನ್ನು ವಿಭಿನ್ನವಾಗಿ ಅನ್ವಯಿಸಬೇಕು.

ನೀವು ಏನೆಲ್ಲಾ ರಚಿಸುತ್ತೀರಿ ಎಂಬುದನ್ನು ನಾವು ನೋಡಲು ಬಯಸುತ್ತೇವೆ. ನೀವು ಅವುಗಳನ್ನು ಪೂರ್ಣಗೊಳಿಸಿದ ನಂತರ ದಯವಿಟ್ಟು ಅವುಗಳನ್ನು ನಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. ಸಾಧ್ಯವಾದರೆ ನಿಮ್ಮ ಆಲೋಚನೆಗಳು ಮತ್ತು ಎಲ್ಲಾ ಹಂತಗಳನ್ನು ವಿವರಿಸಿ, ಅದರಿಂದ ಇತರರು ನಿಮ್ಮಿಂದ ಕಲಿತುಕೊಳ್ಳಬಹುದು.

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ.Read More.....

Leave your comment