We want you to stitch on paper

Ushasew.com ಗೆ ಲಾಗ್ ಆನ್ ಮಾಡಿ ಹಾಗೂ ನೀವು ನೋಡುವ ‘ಹೊಲಿಯಲು ಕಲಿಯಿರಿ’ ಎಂಬ ಹೆಚ್ಚಿನ ಸೈಟ್‌ಗಳಿಗಿಂತ ಇದು ಸ್ವಲ್ಪ ಭಿನ್ನವಾಗಿರುವುದನ್ನು ನೀವು ಕಾಣುತ್ತೀರಿ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಎಲ್ಲಾ ಪಾಠಗಳು ಮತ್ತು ಪ್ರಾಜೆಕ್ಟ್‌ಗಳನ್ನು 9 ವಿಭಿನ್ನ ಭಾರತೀಯ ಭಾಷೆಗಳಲ್ಲಿ ಒದಗಿಸುತ್ತವೆ. ಅಷ್ಟೇ ಅಲ್ಲದೆ ನಾವು ಪ್ರತಿಯೊಂದು ಪಾಠ ಮತ್ತು ಪ್ರಾಜೆಕ್ಟ್ಅನ್ನು ಜಾಗರೂಕತೆಯಿಂದ ಯೋಜಿಸಿದ್ದೇವೆ ಹಾಗೂ ಅವು ನಿಮಗೆ ಸೂಕ್ತ ಕೌಶಲ್ಯಗಳನ್ನು ನೀಡಲು ಬೇಕಾದ ಸಮರ್ಪಕ ಮಾಹಿತಿಯನ್ನು ಹೊಂದಿರುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ.
ಈಗ ಮೊದಲ ಪಾಠವನ್ನು ತೆಗೆದುಕೊಳ್ಳೋಣ. ಅದು ನಿಮಗೆ ಹೊಲಿಯಲು ಕಲಿಸುವುದಿಲ್ಲ. ಬದಲಿಗೆ ಅದು ನಿಮ್ಮ ಉಷಾ ಹೊಲಿಗೆ ಮೆಷಿನ್ಅನ್ನು ಸೂಕ್ತ ರೀತಿಯಲ್ಲಿ ಹೇಗೆ ಸೆಟಪ್ ಮಾಡುವುದು ಎಂಬುದರ ಬಗ್ಗೆ ನಿಮಗೆ ಸ್ಪಷ್ಟ ಮತ್ತು ಸರಳ ಸೂಚನೆಗಳನ್ನು ನೀಡುತ್ತದೆ. ಮೆಷಿನ್ಅನ್ನು ಥ್ರೆಡ್ ಮಾಡುವುದು, ನೀಡಲ್ ಬದಲಾಯಿಸುವುದು, ಬಾಬಿನ್ ಸ್ಪೂಲ್ ಅಪ್ ಮಾಡುವುದು, ಥ್ರೆಡ್ ಒತ್ತಡವನ್ನು ಸರಿಹೊಂದಿಸುವುದು ಮೊದಲಾದವನ್ನು ಮತ್ತು ಕೆಲಸವನ್ನು ಉತ್ತಮವಾಗಿ ಮಾಡಲು ಬೇಕಾದ ಎಲ್ಲಾ ಇತರೆ ವಿವರಗಳನ್ನು ನೀವು ಕಲಿಯುತ್ತೀರಿ.

ಎರಡನೇ ಪಾಠದಲ್ಲೂ ಸಹ ಹೊಲಿಗೆಯನ್ನು ಕಲಿಸುವುದಿಲ್ಲ!

ಮುಂದಿನ ಪಾಠಕ್ಕೆ ಹೋಗಿ, ಅಲ್ಲಿಯೂ ಸಹ ನೀವು ಹೊಲಿಗೆಯನ್ನು ಆರಂಭಿಸುವುದಿಲ್ಲ. ಇದರಲ್ಲಿ ನೀವು ಮೆಷಿನ್‌ಅನ್ನು ಬಳಸಲು ಮತ್ತು ಅದರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಕಲಿಯುತ್ತೀರಿ. ಇದನ್ನು ಮಾಡಲು ನಿಮಗೆ ಪ್ರಿಂಟ್ ತೆಗೆದುಕೊಳ್ಳುವುದಕ್ಕಾಗಿ ಡೌನ್‌ಲೋಡ್ ಮಾಡಬಹುದಾದ ಪಿಡಿಎಫ್‌ಗಳನ್ನು ನಾವು ಹೊಂದಿದ್ದೇವೆ. ಈ ಶೀಟ್‌ಗಳು ಕೌಶಲ್ಯಗಳನ್ನು ಪಡೆಯಲು ನಿಜವಾಗಿಯೂ ಮುಖ್ಯವಾಗಿವೆ. ಪ್ರತಿಯೊಂದು ಪುಟವು ನಿಮಗೆ ಅಭ್ಯಾಸ ಮಾಡಲು ವಿಭಿನ್ನ ಪಾಠವನ್ನು ಹೊಂದಿದೆ.

ಮೊದಲನೆಯದು ನಿಮಗೆ ನೇರ ಸಾಲುಗಳಲ್ಲಿ ಹೊಲಿಯಲು ಕಲಿಸುತ್ತದೆ. ಮೆಷಿನ್‌ಗೆ ಯಾವುದೇ ಥ್ರೆಡ್ ಹಾಕದೆ ನೀವು ಪೇಪರ್ ಬಳಸಿಕೊಂಡು ಇದನ್ನು ಮಾಡುತ್ತೀರಿ. ನಂತರ ನೀವು ಹೆಚ್ಚು ಸಂಕೀರ್ಣವಾದ ಪ್ಯಾಟರ್ನ್‌ಗಳಿಗೆ ಸರಿಯುತ್ತೀರಿ. ಕೆಲವು ವಿವಿಧ ಕೋನಗಳಲ್ಲಿ ಕಾರ್ನರ್‌ಗಳನ್ನು ಹೊಂದಿರುತ್ತವೆ, ಮತ್ತೆ ಕೆಲವು ಏಕಕೇಂದ್ರೀಯ ವೃತ್ತಗಳನ್ನು ಹೊಂದಿರುತ್ತವೆ. ಈ ಅಭ್ಯಾಸಗಳ ಉದ್ದೇಶವೇನೆಂದರೆ ನೀಡಲ್ ಹೇಗೆ ಚಲಿಸುತ್ತದೆ ಎಂಬುದನ್ನು ನಿಮಗೆ ತೋರಿಸುವುದು ಹಾಗೂ ನಿಮ್ಮ ಹೊಲಿಗೆಗಳ ಮೇಲೆ ನೀವು ನಿಯಂತ್ರಣ ಸಾಧಿಸುವಂತೆ ಮತ್ತು ನಿಖರತೆಯನ್ನು ಹೊಂದುವಂತೆ ಮಾಡುವುದು.

ಹಳೆಯ ಪೇಪರ್‌ನ ಹಾಳೆಗಳನ್ನು ಮರುಬಳಕೆ ಮಾಡಿ.

ಪ್ರಿಂಟ್ ತೆಗೆದುಕೊಂಡ ಪಾಠಗಳನ್ನು ಕಲಿತ ನಂತರ, ನೀವು ಯಾವುದೇ ಪೇಪರ್‌ನ ಹಾಳೆಯನ್ನು ಬಳಸಿಕೊಂಡು ಆರಂಭಿಸಬಹುದು. ನೀವು ಹಳೆಯ ಸಮಾಚಾರ ಪತ್ರಿಕೆ, ಮ್ಯಾಗಜಿನ್‌ನ ಹಾಳೆಗಳು ಅಥವಾ ಹಳೆಯ ಪ್ರಿಂಟ್ಔಟ್‌ಗಳನ್ನು ಬಳಸಬಹುದು. ನೀವು ಡೌನ್‌ಲೋಡ್ ಮಾಡಿದುದರಿಂದ ಕಲಿತದ್ದನ್ನು ಅನುಸರಿಸಿ ಹಾಗೂ ನಿಮಗೆ ಸಾಧ್ಯವಾದಷ್ಟು ಉತ್ತಮವಾಗುವವರೆಗೆ ಅಭ್ಯಾಸ ಮಾಡುತ್ತಿರಿ.

ನೀವು ಯಾವಾಗ ಬಟ್ಟೆಯನ್ನು ಬಳಸಲು ಆರಂಭಿಸುತ್ತೀರಿ?

ನೀವು ಬಹಳಷ್ಟು ಅಭ್ಯಾಸ ಮಾಡಿ, ನಿಮ್ಮ ಕೌಶಲ್ಯಗಳ ಬಗ್ಗೆ ಆತ್ಮವಿಶ್ವಾಸವನ್ನು ಹೊಂದಿದ ನಂತರ, ನೀವು ಫ್ಯಾಬ್ರಿಕ್ ಬಳಸಲು ಆರಂಭಿಸಬಹುದು. ನಾವು ಹತ್ತಿ ಬಟ್ಟೆಯನ್ನು ಸೂಚಿಸುತ್ತೇವೆ ಏಕೆಂದರೆ ಅದು ಅತ್ಯಂತ ಸೂಕ್ತವಾದ ಮತ್ತು ಹೆಚ್ಚುಕಡಿಮೆ ಅಗ್ಗದ ಬಟ್ಟೆಯಾಗಿದೆ. ನೀವು ಹಳೆಯ ಮೆಟೀರಿಯಲ್ ಪೀಸ್‌ಗಳಲ್ಲಿ ಅಥವಾ ಎಂದಿಗೂ ಧರಿಸದ ಬಟ್ಟೆಗಳಲ್ಲಿ ಅಭ್ಯಾಸ ಮಾಡಬೇಕು.

ಇದು ನಿಮಗೆ ಫ್ಯಾಬ್ರಿಕ್‌ನ ನೆಯ್ಗೆಯ ಮೂಲಕ ನೀಡಲ್ ಹೇಗೆ ಚಲಿಸುತ್ತದೆ ಎಂಬುದನ್ನು ಗಮನಿಸಲು ಹಾಗೂ ಹೊಲಿಗೆಯ ಉದ್ದವನ್ನು ಸರಿಹೊಂದಿಸಲು ಮತ್ತು ವಿವಿಧ ಹೊಲಿಗೆ ಪ್ಯಾಟರ್ನ್‌ಗಳನ್ನು ಪ್ರಯತ್ನಿಸಲು ಅವಕಾಶ ನೀಡುತ್ತದೆ.

ಅಭ್ಯಾಸ ಮಾಡಿದಷ್ಟು ಪರಿಪೂರ್ಣತೆ ಸಿದ್ಧಿಸುತ್ತದೆ

ಯಾವುದೇ ಕೌಶಲ್ಯವನ್ನು ಸಿದ್ಧಿಸಿಕೊಳ್ಳಲು ಅಭ್ಯಾಸ ಮಾಡುತ್ತಿರಬೇಕು. ನೀವು ಹೆಚ್ಚು ಪ್ರಯತ್ನ ಪಟ್ಟಷ್ಟು, ನಿಮ್ಮ ಉಷಾ ಹೊಲಿಗೆ ಮೆಷಿನ್‌ನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸುತ್ತೀರಿ. ನೀವು ನೋಡಿರಬಹುದು ‘ಟೈಲರ್ ಮಾಸ್ಟರ್‌ಜಿ’ಗಳು ಅವರ ಮೆಷಿನ್‌ಗಳನ್ನು ಯಾವಾಗ ನಿಲ್ಲಿಸಬೇಕು ಎಂಬುದನ್ನು ತಿಳಿದಿರುತ್ತಾರೆ, ಅವರು ಒಂದೇ ಒಂದು ಹೊಲಿಗೆಯನ್ನೂ ವ್ಯರ್ಥ ಮಾಡುವುದಿಲ್ಲ. ಅವರು ಅಂಚುಗಳನ್ನು ಹೊಲಿಯುವಾಗ ಹೇಗೆ ನಂಬಲಾಗದಷ್ಟು ನಿಖರವಾಗಿ ಮತ್ತು ಅಚ್ಚುಕಟ್ಟಾಗಿ ಹೊಲಿಯುತ್ತಾರೆ. ನೀವೂ ಸಹ ಈ ಮಟ್ಟದ ಕೌಶಲ್ಯವನ್ನು ಸಾಧಿಸಬಹುದು, ಅದಕ್ಕಾಗಿ ನೀವು ಮಾಡಬೇಕಿರುವುದೇನೆಂದರೆ ಮೊದಲಿಗೆ ಪೇಪರ್ ಮೇಲೆ ಅಭ್ಯಾಸ ಮಾಡಿ, ನಂತರ ಬಟ್ಟೆಯ ಮೇಲೆ ಪ್ರಯತ್ನಿಸಿ.

ಅಭ್ಯಾಸವನ್ನು ಒಂದು ಮೋಜಿನ ಆಟವನ್ನಾಗಿ ಮಾಡಿ.

ಒಮ್ಮೆ ನೀವು ಮೂಲಭೂತ ವಿಷಯಗಳನ್ನು ತಿಳಿದುಕೊಂಡು, ಮುಂದಿನ ಹಂತಕ್ಕೆ ಸಾಗಲು ಆತ್ಮವಿಶ್ವಾಸವನ್ನು ಪಡೆದ ನಂತರ, ನೀವು ಕೆಲವು ಸರಳ ಪ್ರಯತ್ನಗಳನ್ನು ಮಾಡಬಹುದು. ಮ್ಯಾಗಜಿನ್‌ನಿಂದ ಚಿತ್ರಗಳನ್ನು ತೆಗೆದುಕೊಂಡು, ಹೊಲಿಗೆ ಮೆಷಿನ್ಅನ್ನು ಬಳಸಿ ಅದನ್ನು ಟ್ರೇಸ್ ಮಾಡಲು ಪ್ರಯತ್ನಿಸಿ. ಎಲ್ಲಾ ಗಾತ್ರಗಳಲ್ಲಿ ವಿವಿಧ ಆಕಾರಗಳನ್ನು ರಚಿಸಿ. Ushasew. com ಪಾಠದಲ್ಲಿ ನೀಡಿದ ಸೂಚನೆಗಳನ್ನು ಅನುಸರಿಸಲು ಮರೆಯದಿರಿ. ಮೂಲಭೂತ ವಿಷಯಗಳು ಯಾವಾಗಲೂ ಒಂದೇ ಆಗಿರುತ್ತವೆ, ಬಳಕೆ ಮಾತ್ರ ವ್ಯತ್ಯಾಸಗೊಳ್ಳುತ್ತದೆ.

ಪ್ರಾಜೆಕ್ಟ್‌ಗೆ ಮುಂದುವರಿಯುವುದು

ನಾವು ಹಂಚಿಕೊಳ್ಳಲು ಬಯಸುವ ಇನ್ನೊಂದು ಸಲಹೆಯೆಂದರೆ ನೀವು ಪ್ರಾಜೆಕ್ಟ್‌ಗೆ ಮುಂದುವರಿಯಲು ಸಿದ್ಧರಾದಾಗ ಅದೇ ವಿಧಾನವನ್ನು ಅನುಸರಿಸಿ. ವೀಡಿಯೊವನ್ನು ವೀಕ್ಷಿಸಿ,ನಂತರ ಸೂಚನೆಗಳನ್ನು ಅನುಸರಿಸಿ ಆದರೆ ಬಟ್ಟೆಯ ಬದಲಿಗೆ ಪೇಪರ್ ಬಳಸಿಕೊಂಡು ಪ್ರಯತ್ನಿಸಿ. ಇದರಿಂದ ನಿಮ್ಮ ಫ್ಯಾಬ್ರಿಕ್ ಉಳಿಯುತ್ತದೆ ಮತ್ತು ಪ್ರತಿಯೊಂದು ಹಂತವು ಏನನ್ನು ಒಳಗೊಂಡಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

Ushasew.com ಎಲ್ಲಾ ಪಾಠಗಳು ಮತ್ತು ಪ್ರಾಜೆಕ್ಟ್‌ಗಳನ್ನು ಒಟ್ಟಿಗೆ ಮಾಡಲು ವಿನ್ಯಾಸಗೊಳಿಸಿದೆ. ನೀವು ಕೆಲವು ಪಾಠಗಳನ್ನು ಕಲಿತ ನಂತರ ಅದರ ಜೊತೆಗೆ ಒಂದು ಪ್ರಾಜೆಕ್ಟ್ ಇರುವುದನ್ನು ಕಾಣುತ್ತೀರಿ. ನಿಜವಾಗಿ ಏನಾದರೂ ಮಾಡುವಾಗ ನೀವು ಕಲಿತದ್ದನ್ನು ಬಳಸಿಕೊಳ್ಳಲು ನೆರವಾಗುವಂತೆ ಈ ಪ್ರಾಜೆಕ್ಟ್ಅನ್ನು ಇರಿಸಲಾಗಿದೆ. ಇದು ಆಸಕ್ತಿದಾಯಕ ವಸ್ತುಗಳಾದ ಬುಕ್‌ಮಾರ್ಕ್‌ಗಳು, ಬ್ಯಾಗ್‌ಗಳು ಮತ್ತು ಧರಿಸಲು ಫ್ಯಾಷನ್‌ಯುಕ್ತ ಪರಿಕರಗಳನ್ನು ಮಾಡಲು ನಿಮಗೆ ಅವಕಾಶ ನೀಡುತ್ತದೆ. ಹಾಗಾಗಿ ದಯವಿಟ್ಟು ತಾಳ್ಮೆಯಿಂದ ಪ್ರತಿಯೊಂದು ಪಾಠಗಳನ್ನೂ ಕ್ರಮಬದ್ಧವಾಗಿ ಕಲಿಯಿರಿ.

ನೀವು ಯಾವುದಾದರೂ ಅದ್ಭುತ ಪ್ರಾಜೆಕ್ಟ್‌ಗಳನ್ನು ಮಾಡಿದರೆ ಅಥವಾ ನಿಮ್ಮ ಕೌಶಲ್ಯಗಳನ್ನು ಬಳಸಿ ಬೇರೆ ಏನನ್ನಾದರೂ ರಚಿಸಲು ನಿರ್ಧರಿಸಿದರೆ, ದಯವಿಟ್ಟು ಅದನ್ನು ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. ನೀವು ಪುಟದ ಕೆಳಭಾಗದಲ್ಲಿ ಉಷಾ ಹೊಲಿಗೆಯ ಸಾಮಾಜಿಕ ಪುಟಗಳಿಗೆ ಲಿಂಕ್‌ಗಳನ್ನು ಕಾಣುತ್ತೀರಿ.

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ.Read More.....

Leave your comment