Sewing a bookmark is easy and fun

www.ushasew.com ಒಂದು ಸಮಗ್ರ ಕಲಿಕಾ ಕಾರ್ಯಕ್ರಮವನ್ನು ರೂಪಿಸಿದೆ, ಅದು ಹೊಲಿಗೆಯ ಎಲ್ಲಾ ಹಂತಗಳನ್ನು ನಿಮಗೆ ವಿವರಿಸುತ್ತದೆ. ವೀಡಿಯೊಗಳು ಅನುಸರಿಸಲು ಸುಲಭವಾಗಿವೆ, ಸವಿವರವಾದ ಸೂಚನೆಗಳನ್ನು ಹೊಂದಿವೆ ಹಾಗೂ 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ. ಈ ಪಾಠಗಳು ನಿಮಗೆ ಆರಂಭದಿಂದ ಕಲಿಯಲು ಹಾಗೂ ಹಂತ ಹಂತವಾಗಿ ಮುಂದುವರಿಯಲು ಅವಕಾಶ ನೀಡುತ್ತವೆ. ಎಲ್ಲಾ ಪಾಠಗಳ ಕೊನೆಯಲ್ಲಿ ಮತ್ತು ನಿಮ್ಮ ಅಭ್ಯಾಸದಿಂದ ನೀವು ಹೊಲಿಯಲು ಮತ್ತು ನಿಮ್ಮ ರಚನಾತ್ಮಕತೆಯನ್ನು ಬಳಸಿ ಅದ್ಭುತ ವಸ್ತುಗಳನ್ನು ತಯಾರಿಸಲು ಸಮರ್ಥರಾಗುತ್ತೀರಿ.

ಆದರೆ ಆಟವಿಲ್ಲದೆ ಬರಿಯ ಕೆಲಸದಿಂದ ಮಕ್ಕಳು ಮಂಕಾಗುತ್ತಾರೆ. ಅದಕ್ಕಾಗಿ www.ushasew.com ನಡುವೆ ಸಣ್ಣ, ಸುಲಭ ಪ್ರಾಜೆಕ್ಟ್‌ಗಳನ್ನು ಇರಿಸಿ ಪಾಠಗಳನ್ನು ವಿನ್ಯಾಸಗೊಳಿಸಿದೆ. ಈ ಪ್ರಾಜೆಕ್ಟ್‌ಗಳು ನೀವು ಕಲಿತ ಎಲ್ಲಾ ಕೌಶಲ್ಯಗಳನ್ನು ಬಳಸಿಕೊಳ್ಳಲು ಹಾಗೂ ಫ್ಯಾಬ್ರಿಕ್‌ಗಳು ಮತ್ತು ಇತರೆ ಮೆಟೀರಿಯಲ್‌ಗಳಿಂದ ಪ್ರಯತ್ನಿಸಿ ನೋಡಲು ಅನುವು ಮಾಡಿಕೊಡುತ್ತವೆ.

ಬುಕ್‌ಮಾರ್ಕ್‌ಗಳನ್ನು ಮಾಡುವುದು ಮೊದಲ ಪ್ರಾಜೆಕ್ಟ್‌ ಆಗಿದೆ.
ಇದು ಮೊದಲ ಪ್ರಾಜೆಕ್ಟ್ ಆಗಲು ಕಾರಣವೇನೆಂದರೆ ಅದು ನೀವು ಮೊದಲ ಎರಡು ಪಾಠಗಳಲ್ಲಿ ಕಲಿತದ್ದನ್ನು ಬಳಸಿಕೊಳ್ಳುತ್ತದೆ. ನೀವು ಮೊದಲಿಗೆ ನಿಮ್ಮ ಉಷಾ ಹೊಲಿಗೆ ಮೆಷಿನ್ಅನ್ನು ಹೇಗೆ ಸೆಟಪ್ ಮಾಡುವುದೆಂದು ಕಲಿಯುತ್ತೀರಿ, ನಂತರ ಪೇಪರ್ ಮೇಲೆ ಹೊಲಿಯುವ ಮೂಲಕ ನಿಮ್ಮ ಹೊಲಿಗೆಗಳನ್ನು ಹೇಗೆ ನಿಯಂತ್ರಿಸುವುದೆಂದು ಕಲಿಯುತ್ತೀರಿ ಹಾಗೂ ಅಂತಿಮವಾಗಿ ಫ್ಯಾಬ್ರಿಕ್ ಮೇಲೆ ಹೊಲಿಯಲು ಕಲಿಯುತ್ತೀರಿ. ಇವು ಬುಕ್‌ಮಾರ್ಕ್ ಪ್ರಾಜೆಕ್ಟ್ ಬಳಸುವ ಕೌಶಲ್ಯಗಳಾಗಿವೆ. ನೀವು ನೇರ ಸಾಲುಗಳಲ್ಲಿ ಮತ್ತು ಕಾರ್ನರ್‌ಗಳಾದ್ಯಂತ ಹೊಲಿಯಲು ಕಲಿಯುತ್ತೀರಿ. ಅಷ್ಟೆ. ಇದು ಸರಳ ಮತ್ತು ಸುಲಭವಿರುವಂತೆ ಕಾಣುತ್ತದೆ, ಮತ್ತು ಹಾಗೆಯೇ ಇದೆ.

ಬುಕ್‌ಮಾರ್ಕ್ ಪ್ರಾಜೆಕ್ಟ್ ನಿಮಗೆ ನಿಮ್ಮ ಸ್ವಂತ ಫ್ಯಾಬ್ರಿಕ್‌ಗಳು ಮತ್ತು ಬಣ್ಣಗಳನ್ನು ಆರಿಸಲು ಅವಕಾಶ ನೀಡುತ್ತದೆ. ಅಲ್ಲದೆ ಅದು ನಿಮಗೆ ನಿಮ್ಮ ಬುಕ್‌ಮಾರ್ಕ್ಅನ್ನು ವಿಭಿನ್ನವಾಗಿ ಮಾಡಲು ಅದಕ್ಕೆ ಅಲಂಕಾರಗಳು ಮತ್ತು ಇತರೆ ಅಂದಗೊಳಿಸುವ ಟಚ್‌ಗಳನ್ನು ಹೇಗೆ ಸೇರಿಸುವುದು ಎಂಬುದನ್ನೂ ಸಹ ತೋರಿಸುತ್ತವೆ.

ಇದಕ್ಕಾಗಿ ನೀವು ಮಾಡಬೇಕಿರುವುದಿಷ್ಟೆ ಸೂಚನೆಗಳನ್ನು ಹಂತ ಹಂತವಾಗಿ ಅನುಸರಿಸಬೇಕು, ಆಗ ಇದು ಸಾಧ್ಯವಾಗುತ್ತದೆ. ನೀವು ಆರಂಭಿಸುವ ಮೊದಲು ಪ್ರಾಜೆಕ್ಟ್ ವೀಡಿಯೊವನ್ನು ಕೆಲವು ಬಾರಿ ವೀಕ್ಷಿಸಬೇಕೆಂದು ನಾವು ಸೂಚಿಸುತ್ತೇವೆ. ನೀವು ವೀಡಿಯೊ ನೋಡಿದ ನಂತರ ಮೊದಲಿಗೆ ನಿಮಗೆ ಬೇಕಾದ ಎಲ್ಲಾ ಮೆಟೀರಿಯಲ್‌ಗಳನ್ನು ಸಂಗ್ರಹಿಸಿ. ಅನಂತರ ವೀಡಿಯೊವನ್ನು ಮಧ್ಯೆ ನಿಲ್ಲಿಸಿ, ಅದರಲ್ಲಿ ತೋರಿಸಿದಂತೆ ಮೆಟೀರಿಯಲ್‌ಗಳನ್ನು ಮಡಿಸಲು ಅಥವಾ ಕುಶಲತೆಯಿಂದ ನಿರ್ವಹಿಸಲು ಪ್ರಯತ್ನಿಸುವ ಮೂಲಕ ಪ್ರತಿಯೊಂದು ಹಂತವನ್ನು ಅರ್ಥಮಾಡಿಕೊಳ್ಳಿ. ನೀವು ಖಾತರಿ ಮತ್ತು ವಿಶ್ವಾಸ ಹೊಂದಿದಾಗ ಮಾತ್ರ ನಿಜವಾದ ಹೊಲಿಗೆಯನ್ನು ಆರಂಭಿಸಬೇಕು.

ಪ್ರಾಮಾಣಿಕವಾಗಿ ಹೇಳುವುದಾದರೆ ಇದು ನಿಜವಾಗಿಯೂ ಸುಲಭವಾಗಿದೆ. ಇದು ಕೇವಲ ನೇರ ಹೊಲಿಗೆಗಳು ಮತ್ತು ನಾಲ್ಕು ಕಾರ್ನರ್‌ಗಳನ್ನು ಹೊಂದಿದೆ. ಅಷ್ಟೆ. ಆದರೆ ಇದು ನೀವು ಸೃಜನಶೀಲತೆಯನ್ನು ಪಡೆಯಲು ಬಹಳಷ್ಟು ಅವಕಾಶಗಳನ್ನು ಹೊಂದಿದೆ. ನೀವು ಇಲ್ಲಿ ಪ್ರಯೋಗ ಮಾಡಿನೋಡಬಹುದು. ಮಿರರ್‌ಗಳು, ಬೀಡ್‌ಗಳ ಪೀಸ್‌ಗಳನ್ನು ಬಳಸಿ, ಫ್ಯಾಬ್ರಿಕ್‌ಗಳನ್ನು ಮಿಶ್ರ ಮಾಡಿ ಮತ್ತು ಹೊಂದಿಸಿ ಹಾಗೂ ನಿಮ್ಮ ಕಲ್ಪನೆ ಹೇಳುವ ರೀತಿಯಲ್ಲಿ ಮಾಡಿ. ಈ ರೀತಿಯಲ್ಲಿ ನೀವು ಮಾಡುವ ಪ್ರತಿಯೊಂದು ಬುಕ್‌ಮಾರ್ಕ್ ವಿಭಿನ್ನವಾಗುತ್ತದೆ.

ಬುಕ್‌ಮಾರ್ಕ್‌ಗಳು ಒಂದು ಅದ್ಭುತ ಉಡುಗೊರೆ.
ಹೌದು!ಅದು ನೀಡಿದ ವ್ಯಕ್ತಿಯನ್ನು ನಿಮಗೆ ನೆನಪಿಸುತ್ತಲೇ ಇರುವ ಒಂದು ಉಡುಗೊರೆಯಾಗಿದೆ. ಪ್ರತಿ ಬಾರಿ ಅವರು ಓದುತ್ತಿದ್ದ ಪುಸ್ತಕವನ್ನು ತೆರೆದು ಅವರ ಪುಟವನ್ನು ಹುಡುಕಲು ಬುಕ್‌ಮಾರ್ಕ್ ಬಳಸುವಾಗ, ನಿಮಗೆ ನಿಶ್ಶಬ್ದವಾಗಿ ಧನ್ಯವಾದಗಳನ್ನು ಹೇಳುತ್ತಾರೆ.

ಅಲ್ಲದೆ ನೀವು ಬುಕ್‌ಮಾರ್ಕ್ಅನ್ನು ನೀಡುವ ವ್ಯಕ್ತಿಗೆ ಸರಿಹೊಂದುವಂತೆ ಅದನ್ನು ವೈಯಕ್ತೀಕರಿಸಬಹುದು. ನೀವು ಫುಟ್‌ಬಾಲ್ ಆಟಗಾರರಾಗಿದ್ದರೆ, ಕಪ್ಪು ಮತ್ತು ಬಿಳಿಯ ಷಟ್ಕೋನಗಳು, ಸಣ್ಣ ಬೆಲ್‌ಗಳನ್ನು ಸ್ಟ್ರಿಂಗ್‌ನಲ್ಲಿ ಸೇರಿಸಿ, ಬೆಡ್‌ಟೈಮ್ ಪುಸ್ತಕಗಳನ್ನು ಹೆಚ್ಚು ಆಸಕ್ತಿದಾಯಕವನ್ನಾಗಿ ಮಾಡಿ. ನಾವು ಹೆಚ್ಚಿಗೆ ಹೇಳುವುದಿಲ್ಲ ಮತ್ತು ನಿಮ್ಮ ಸೃಜನಶೀಲತೆಯನ್ನು ನಾವು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ.

ನೀವು ಹೊಲಿಗೆಯನ್ನು ಕಲಿಯಲು ಆಸಕ್ತರಾಗಿದ್ದಲ್ಲಿ, ದಯವಿಟ್ಟು Ushasew.com ಗೆ ಲಾಗ್ ಆನ್ ಮಾಡಿ. ಇಲ್ಲಿ ನಾವು ಅನೇಕ ಪಾಠಗಳು ಮತ್ತು ಪ್ರಾಜೆಕ್ಟ್‌ಗಳನ್ನು ಹೊಂದಿದ್ದೇವೆ, ಅವುಗಳನ್ನು ನಿಮಗೆ ಹೊಲಿಗೆಯಲ್ಲಿ ಭದ್ರವಾದ ಅಡಿಪಾಯವನ್ನು ನೀಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲಿ ನೀವು ಪಾಠಗಳು ಮತ್ತು ಪ್ರಾಜೆಕ್ಟ್‌ಗಳನ್ನು ಕಾಣುತ್ತೀರಿ, ಅವು ನಿಮಗೆ ನಿಮ್ಮ ಕೌಶಲ್ಯಗಳನ್ನು ಹೇಗೆ ಬಳಸುವುದೆಂದು ಕಲಿಸುತ್ತವೆ ಮತ್ತು ತೋರಿಸಿಕೊಡುತ್ತವೆ. ಎಲ್ಲವೂ ಅತ್ಯಂತ ಮಾಹಿತಿಯುಕ್ತ ರೀತಿಯಲ್ಲಿವೆ. ಹಾಗೂ 9 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತವೆ.

ನೀವು ಪ್ರಾಜೆಕ್ಟ್‌ಗಳನ್ನು ಮಾಡಲು ಆರಂಭಿಸಿದಾಗ, ನಿಮ್ಮ ರಚನೆಗಳನ್ನು ನಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಹಂಚಿಕೊಳ್ಳಿ. ನೀವು ಲಿಂಕ್‌ಗಳನ್ನು ಕೆಳಗೆ ಕಾಣಬಹುದು.

The Incredible Usha Janome Memory Craft 15000

ಇಲ್ಲಿ ಒಂದು ಹೊಲಿಗೆ ಮೆಷಿನ್ ಇದೆ, ಅದು ಒಬ್ಬ ಇಂಜಿನಿಯರ್, ಒಬ್ಬ ವಿಜ್ಞಾನಿ...

Sewing is great for Boys & Girls

ಹೊಲಿಗೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರಿಗೂ ಒಂದು ಅದ್ಭುತ ಹವ್ಯಾಸವಾಗಿದೆ.Read More.....

Leave your comment