ಹೊಲಿಗೆ ಪಾಠ ಯೋಜನೆಗಳು

ಪಾಠ 1
ಡೌನ್‌ಲೋಡ್ ಮಾಡಿ

ನಿಮ್ಮ ಮೆಷಿನ್ ಬಗ್ಗೆ ತಿಳಿಯಿರಿ

ಟ್ಯುಟೋರಿಯಲ್‌ಗಳತ್ತ ಓಡುವ ಮೊದಲು ನೀವು ನಿಮ್ಮ ಮೆಷಿನ್ ಬಗ್ಗೆ ಮತ್ತು ಅದರ ವಿವಿಧ ಭಾಗಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಸವಿವರವಾದ ಆದರೆ ಸರಳವಾದ ವೀಡಿಯೊ ನಿಮಗೆ ನಿಮ್ಮ ಮೆಷಿನ್ಅನ್ನು ಸೆಟಪ್ ಮಾಡಲು ನೆರವಾಗುತ್ತದೆ, ಸೂಜಿಗೆ ದಾರ ಪೋಣಿಸಲು, ಬಾಬಿನ್ ತುಂಬಿಸಲು, ಹೊಲಿಗೆ ಉದ್ದಗಳನ್ನು ಸರಿಹೊಂದಿಸಲು ಮಾರ್ಗದರ್ಶನ ನೀಡುತ್ತದೆ ಹಾಗೂ ನಿಮಗೆ ಹೊಲಿಗೆಯನ್ನು ಆರಂಭಿಸಲು ಬೇಕಾದ ಇತರೆ ಎಲ್ಲಾ ವಿಷಯಗಳನ್ನು ಕಲಿಸುತ್ತದೆ.